28 C
Mumbai
September 19, 2026
Mumbai News Kannada
ಕ್ರೀಡೆ

ಉದಯ್ ಶೆಟ್ಟಿ ಸಾರಥ್ಯದಲ್ಲಿ ನಡೆದ ಜರ್ಮನಿ ಓಪನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ 8 ಪದಕಗಳ ಸಾಧನೆ






ನವದೆಹಲಿ : ಭಾರತೀಯ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಫೆಡರೇಷನ್ ಜರ್ಮನಿಯಲ್ಲಿ ನಡೆದ ಜರ್ಮನಿ ಓಪನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಹೆಮ್ಮೆಯಿಂದ ಪ್ರತಿನಿಧಿಸಿ ಗಮನಾರ್ಹ ಸಾಧನೆ ಮಾಡಿದೆ. ಭಾರತೀಯ ತಂಡವು ಒಟ್ಟು ಎಂಟು ಪದಕಗಳನ್ನು ಗೆದ್ದು ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಿದೆ.
ಈ ಅದ್ಭುತ ಸಾಧನೆಯನ್ನು ಗುರುತಿಸಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಭಾರತೀಯ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ತಂಡವನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಉದಯ್ ಶೆಟ್ಟಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.
ಕ್ರೀಡಾಪಟುಗಳೊಂದಿಗೆ ನಡೆದ ಸಂವಾದದಲ್ಲಿ ಡಾ. ಮಾಂಡವಿಯಾ ಅವರು ಭವಿಷ್ಯದ ಸ್ಪರ್ಧೆಗಳಿಗೆ ಶುಭ ಹಾರೈಸಿ, ಭಾರತದಲ್ಲಿ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಕ್ರೀಡೆಯ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರದಿಂದ ನಿರಂತರ ಬೆಂಬಲ ದೊರೆಯಲಿದೆ ಎಂದು ಭರವಸೆ ನೀಡಿದರು.
ಭಾರತೀಯ ತಂಡವು ಈಗ 2026ರ ಸೆಪ್ಟೆಂಬರ್ 17ರಿಂದ 26ರವರೆಗೆ ಗ್ರೀಸ್‌ನಲ್ಲಿ ನಡೆಯಲಿರುವ ವಿಶ್ವ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಜ್ಜಾಗುತ್ತಿದೆ.
2027ರಲ್ಲಿ ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಭಾರತ ಪ್ರತಿನಿದೀಕರಿಸಲಿರುವುದು ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಈ ಪ್ರತಿಷ್ಠಿತ ಕ್ರೀಡಾಕೂಟವನ್ನು ಭಾರತ ಆಯೋಜಿಸಲಿರುವುದಕ್ಕೆ ಡಾ. ಮಾಂಡವಿಯಾ ಸಂತಸ ವ್ಯಕ್ತಪಡಿಸಿ, ಯಶಸ್ವಿ ಆಯೋಜನೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ಭಾರತೀಯ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಉದಯ್ ಶೆಟ್ಟಿ ಮತ್ತು ಅವರ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಾಧಿಸುವ ವಿಶ್ವಾಸ ವ್ಯಕ್ತವಾಗಿದೆ.



Related posts

ಏಷ್ಯಾ ಕಪ್ 2025 : ಭಾರತ ತಂಡ ಪ್ರಕಟ: ಶುಭಮನ್ ಗಿಲ್ ಉಪನಾಯಕ, ಶ್ರೇಯಸ್ ಅಯ್ಯರ್‌ಗೆ ಸ್ಥಾನವಿಲ್ಲ

Mumbai News Desk

ಸಾಗರ ವಿದ್ಯಾ ಮಂದಿರ ಶಾಲೆ ಪಡುಬಿದ್ರಿ : ಬಾಲಕಿಯರ ಕಬ್ಬಡ್ಡಿ ತಂಡ ಮೈಸೂರು ದಸರಾ ಕ್ರೀಡಾಕೂಟಕ್ಕೆ ಆಯ್ಕೆ

Mumbai News Desk

ಫೇಮಸ್ ಯೂತ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

Mumbai News Desk

ಕರ್ನಾಟಕ ಸಂಘ ಪನ್ವೆಲ್ ನ 32ನೇ ವರುಷದ ವಾರ್ಷಿಕ ಕ್ರೀಡಾ ಕೂಟ.

Mumbai News Desk

ವರ್ಲ್ಡ್ ಮಾಸ್ಟರ್ಸ್ ವೈಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ –ಉದಯ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ಭಾರತ ತಂಡ

Mumbai News Desk

ಅಹಮದಾಬಾದ್‌ನಲ್ಲಿ ಅಬ್ಬರಿಸಿದ ಟೀಮ್ ಇಂಡಿಯಾ: ನ್ಯೂಜಿಲೆಂಡ್‌ಗೆ ಮಣ್ಣು ಮುಕ್ಕಿಸಿ ಮೂರನೇ ಬಾರಿಗೆ ಟಿ20 ಕಿರೀಟ ಮುಡಿಗೇರಿಸಿಕೊಂಡ ಭಾರತ

Mumbai News Desk