28 C
Mumbai
September 18, 2026
Mumbai News Kannada
ಪ್ರಕಟಣೆ

ಜೂನ್ 16 : ಮುಂಬೈ ಫೋರ್ಟ್‌ನ ಶ್ರೀ ಶನಿಮಹಾತ್ಮ ತ್ರಿಭುವನೇಶ್ವರಿ ಸೇವಾ ಸಮಿತಿಯಿಂದ ಮೂರ್ತಿ ಪ್ರತಿಷ್ಠಾಪನಾ ದಿನ ಹಾಗೂ ಚೈತನ್ಯ ಬ್ರಹ್ಮ ಕಲಶೋತ್ಸವ





ಮುಂಬೈನ ಫೋರ್ಟ್ ಪ್ರದೇಶದ ಬೋರಾ ಬಜಾರ್ ಸ್ಟ್ರೀಟ್‌ನಲ್ಲಿರುವ ಶ್ರೀ ಶನಿಮಹಾತ್ಮ ತ್ರಿಭುವನೇಶ್ವರಿ ಸೇವಾ ಸಮಿತಿಯ (ರಿ) ವತಿಯಿಂದ ದೇವಸ್ಥಾನದ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪನಾ ದಿನ ಹಾಗೂ ಚೈತನ್ಯ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಧಾರ್ಮಿಕ ಮಹೋತ್ಸವವು 2026ರ ಜೂನ್ 16ರ ಮಂಗಳವಾರದಂದು ಬೆಳಿಗ್ಗೆ 6.30 ರಿಂದ ರಾತ್ರಿ 7.30 ರವರೆಗೆ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ..
ಅಂದು ದೇವಸ್ಥಾನದಲ್ಲಿ ಗಣಹೋಮ, ನವಗ್ರಹ ಹೋಮ, ಪ್ರತಿಷ್ಠಾ ಕಲಶ ಪೂಜೆ, ಬ್ರಹ್ಮ ಕಲಶ ಪೂಜೆ, ಮೂರ್ತಿ ಶುದ್ಧೀಕರಣ ಪೂಜೆ ಮತ್ತು ಭಜನಾ ಕಾರ್ಯಕ್ರಮಗಳು ನೆರವೇರಲಿವೆ.
ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ಮತ್ತು ಮಂಗಳಾರತಿ ನಡೆಯಲಿದ್ದು, ತದನಂತರ ಭಕ್ತಾಧಿಗಳಿಗೆ ಮಹಾಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ 4.00 ಗಂಟೆಗೆ ದುರ್ಗಾ ನಮಸ್ಕಾರ ಪೂಜೆ ಹಾಗೂ ಸಂಜೆ 6.00 ಗಂಟೆಗೆ ದೇವಿ ಆವೇಶ ಕಾರ್ಯಕ್ರಮಗಳು ನೆರವೇರಲಿವೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಪಾಲ್ಗೊಂಡು, ಶ್ರೀ ತ್ರಿಭುವನೇಶ್ವರಿ ಮತ್ತು ಶ್ರೀ ಸಿದ್ದೇಶ್ವರಿ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು
ಸಮಿತಿಯ ಅಧ್ಯಕ್ಷರಾದ ಬಿ. ಕೂಸಪ್ಪ ಹಾಗೂ ವ್ಯವಸ್ಥಾಪಕ ಸಮಿತಿಯ ಸರ್ವ ಸದಸ್ಯರು ಈ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ಸಮಸ್ತ ಭಕ್ತಾಧಿಗಳನ್ನು ಆಮಂತ್ರಿಸಿದ್ದಾರೆ.



Related posts

ಶ್ರೀ ಚಾಮುಂಡೇಶ್ವರಿ ಕ್ಷೇತ್ರ (ಸಾವರ್ಕರ್ ನಗರ್ -ಥಾಣೆ)ಅ. 23ರಂದು ದೇವರ ನೂತನ ಪೀಠ ಮಂಟಪ ಹಾಗೂ ದ್ವಾರ ಪ್ರತಿಷ್ಠಾಪನೆ.

Mumbai News Desk

ಬ್ರಹ್ಮಕಲಶ ಸಂಭ್ರಮದಲ್ಲಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ಮೂರ್ತಿ ದೇವಸ್ಥಾನ

Mumbai News Desk

ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬೈ ಬಿಲ್ಲವರು : ಸೆ. 27ರಂದು, ಕಾಂದಿವಲಿಯಲ್ಲಿ ಶನೀಶ್ವರ ಸಂಪೂರ್ಣ ಗ್ರಂಥ ಪಾರಾಯಣ, ಬ್ರಹ್ಮಶ್ರೀ ನಾರಾಯಣ ಗುರು ಪೂಜೆ

Mumbai News Desk

ಏ. 12 ರಿಂದ 21 ರ ವರಗೆ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ 62 ನೇ ವಾರ್ಷಿಕ ಮಹೋತ್ಸವ

Mumbai News Desk

ಮೊಗವೀರ ಪ್ರೀಮಿಯರ್ ಲೀಗ್ (ಎಂಪಿಎಲ್) ಕ್ರಿಕೆಟ್ ಟೂರ್ನಮೆಂಟ್ – 2026ಕ್ಕೆ ಆಹ್ವಾನ

Mumbai News Desk

ಶ್ರೀ ಧರ್ಮಶಾಸ್ತ ಭಕ್ತವೃಂದ ದೋಲ್ಗೊಟ್ಟು, ಕೆಲ್ಲಪುತ್ತಿಗೆ ಜ 4 ಮತ್ತು 5, ರಂದು 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”

Mumbai News Desk