28.6 C
Mumbai
August 6, 2026
Mumbai News Kannada
ಸುದ್ದಿ

ಮುಂಬೈ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಭವ್ಯ ಸ್ವಾಗತ





ಮುಂಬೈಗೆ ಆಗಮಿಸಿದ ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ) ಸ್ವಯಂಸೇವಾ ಸಂಸ್ಥೆಯ ವತಿಯಿಂದ ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಅತ್ಯಂತ ಆದರದಿಂದ ಹಾಗೂ ಭವ್ಯವಾಗಿ ಸ್ವಾಗತಿಸಲಾಯಿತು. ಕರಾವಳಿ ಕರ್ನಾಟಕದ ಪರಿಸರ ಸಂರಕ್ಷಣೆ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರ ನೇತೃತ್ವದಲ್ಲಿ ಈ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.


ಈ ಸುಂದರ ಸಂದರ್ಭದಲ್ಲಿ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್, ರಾಜ್ಯ ಸಂಯೋಜಕ ಕೆ. ಪಿ. ಜಗದೀಶ್ ಅಧಿಕಾರಿ ಹಾಗೂ ಉಪಾಧ್ಯಕ್ಷರುಗಳಾದ ಐ. ಆರ್. ಶೆಟ್ಟಿ ಮತ್ತು ಫೆಲಿಕ್ಸ್ ಡಿಸೋಜಾ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯನ್ ಅವರು ಉಪಸ್ಥಿತರಿದ್ದು, ಡಿ. ಕೆ. ಶಿವಕುಮಾರ್ ಅವರಿಗೆ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಮುಂಬೈ ಕನ್ನಡಿಗರ ಈ ಪ್ರೀತಿಯ ಸ್ವಾಗತವನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿದ ಮುಖ್ಯಮಂತ್ರಿ ಅವರು ಸಮಿತಿಯ ಪರಿಸರ ಕಾಳಜಿ ಮತ್ತು ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿ ಧನ್ಯವಾದಗಳನ್ನು ಅರ್ಪಿಸಿದರು.


ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ ಆಯ್ಕೆಯಾದ ಕೂಡಲೇ ಜಯಕೃಷ್ಣ ಶೆಟ್ಟಿ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಅಭಿನಂದಿಸಿ, ಕರಾವಳಿ ಕರ್ನಾಟಕದ ಒಟ್ಟಾರೆ ಅಭಿವೃದ್ಧಿಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದರು. ಜೂನ್ 19 ರಂದು ಬೆಂಗಳೂರಿನಲ್ಲಿ ಕರಾವಳಿ ಪ್ರವಾಸೋದ್ಯಮದ ಪ್ರಮುಖ ಪರಿಶೀಲನಾ ಸಭೆ ನಡೆದಿದ್ದು, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ನೀಡಲು ಸರಕಾರವು ಶೀಘ್ರದಲ್ಲಿಯೇ ಆ ಭಾಗದಲ್ಲಿ ವಿಶೇಷ ಸಚಿವ ಸಂಪುಟ ಸಭೆಯನ್ನು ಆಯೋಜಿಸಲಿದೆ ಎಂದು ಮುಖ್ಯಮಂತ್ರಿ ಅವರು ಘೋಷಿಸಿರುವುದನ್ನು ಇಲ್ಲಿ ಪ್ರಮುಖವಾಗಿ ಸ್ಮರಿಸಬಹುದಾಗಿದೆ.



Related posts

ಬಂಟ್ವಾಳ: ಮಕ್ಕಳ ಸಂಭ್ರಮೋತ್ಸವ, ಗಿರಿಜಾ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ : ಪ್ರಶಸ್ತಿ ಸ್ವೀಕರಿಸಿದ ಮುಂಬೈಯ ಪ್ರಭಾ ಎನ್ ಸುವರ್ಣ

Mumbai News Desk

ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಅಮೃತ ವರ್ಷಿಣಿ ” ಉದ್ಘಾಟನೆ

Mumbai News Desk

ಮಂಗಳೂರು – ಸುಬ್ರಮಣ್ಯ ನಡುವೆ ಪ್ಯಾಸೆಂಜರ್ ರೈಲು ಆರಂಭಿಸುವಂತ್ತೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಮನವಿ.

Mumbai News Desk

ಮೈಸೂರು ದಸರಾ -2023 ರ  ಪ್ರಧಾನ ಕವಿಗೋಷ್ಟಿಯಲ್ಲಿ ಶ್ರೀನಿವಾಸ ಜೋಕಟ್ಟೆ ಕವನ ವಾಚನ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮಾಜಿ ಅಧ್ಯಕ್ಷ, ಅಪರೂಪದ ಸಾಧಕ ಹೊಸಬೆಟ್ಟು ಕೆ. ಆರ್. ಪುತ್ರನ್ ನಿಧನ

Mumbai News Desk

ದುಬೈನಲ್ಲಿ ತುಳು ಕನ್ನಡಿಗರಿಂದ  ರಕ್ತದಾನ.

Mumbai News Desk