September 6, 2026
Mumbai News Kannada
ಮುಂಬಯಿ

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಸಾರ್ವಜನಿಕ ಸಭೆ





ಮುಂಬಯಿ ಮಂಗಳೂರು ಮಧ್ಯೆ ಓಡಾಡುವ ರೈಲಲ್ಲಿ ಹೆಚ್ಚಿನ ಸುರಕ್ಷತೆ ಒಂದೇ ಭಾರತ್ ಸ್ಲೀಪರ್ ಓಡಾಡಲು ಸರ್ವ ಯತ್ನ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ

ಮುಂಬಯಿ : ಈಗಾಗಲೇ ಹಲವಾರು ಯೋಜನೆಗಳನ್ನು ಸರಕಾರದ ಹಾಗೂ ಪರಿಸರದ ಜನರ ಸಹಾಯದಿಂದ ಕಾರ್ಯರೂಪಕ್ಕೆ ತರುವಲ್ಲಿ ಕಳೆದ 25 ವರ್ಷಗಳಿಂದ ಯಶಸ್ವಿಯಾದ ಕರ್ನಾಟಕ ಕರಾವಳಿಯ ಪ್ರಗತಿಗೆ ಹೋರಾಡುತ್ತಿರುವ ಏಕೈಕ ಸರಕಾರೇತರ ಸಂಘಟನೆ  ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.). ಇತ್ತಿಚೆಗೆ ಕೊಂಕಣ ಮಾರ್ಗದಲ್ಲಿ ಮುಖ್ಯವಾಗಿ ಮುಂಬಯಿ – ಮಂಗಳೂರು – ಮುಂಬಯಿ ಮಧ್ಯೆ ರೈಲು ಪ್ರಯಾಣದಲ್ಲಿ ಪ್ರಯಾಣಿಕರು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದು ಅದರಲ್ಲಿ ಅಪರಾಧಗಳು ಹಾಗೂ ರೈಲಿನ ಕೊರತೆ ಯಿಂದಾಗಿ ಟಿಕೇಟು ದೊರೆಯದೇ ಇದ್ದು ಈ ಬಗ್ಗೆ  ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್ ಹಾಗೂ ಜಿಲ್ಲಾ ಸಮಿತಿಯ ಗಣ್ಯರ ನೇತೃತ್ವದಲ್ಲಿ ಸಚಿವರಿಗೆ ಮನವಿಯನ್ನು ಅರ್ಪಿಸಲಾಯಿತು. 

ಜುಲೈ 20  ಸಂತಾಕ್ರೂಸ್ ಪೂರ್ವ ಪೇಜಾವರ ಮಠದಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಮಾತನಾಡಿ ಮುಂಬಯಿ ಮಂಗಳೂರು ಮುಂಬಯಿ ಮಧ್ಯೆ ಓಡಾಡುವ ರೈಲಲ್ಲಿ ಹೆಚ್ಚಿನ ಸುರಕ್ಷತೆ  ಹಾಗೂ ಒಂದೇ ಭಾರತ್ ಸ್ಲೀಪರ್ ರೈಲನ್ನು ಓಡಾಡಿಸಲು ಈಗಾಗಲೇ ರೈಲ್ವೇ ಸಚಿವರಿಗೆ ಮನವಿ ಮಾಡಲಾಗಿದ್ದು ಸಚಿವರು ಇದಕ್ಕೆ ಸಂತೋಷದಿಂದ ಸ್ಪಂದಿಸಿದ್ದಾರೆ . ಕೇಂದ್ರ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫ್ರೆರ್ನಾಡಿಸರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಕೇಂದ್ರ ಸಚಿವರು  ಸಮಿತಿಯ ಬಗ್ಗೆಯೂ ಮೆಚ್ಚಿ ಮಾತನಾಡಿದ್ದಾರೆ, ಸಮಿತಿಯ ಯೋಜನೆಗಳಿಗೆ ಸರ್ಕಾರದ ಮೂಲಕ ಸಹಕಾರ ನೀಡುತ್ತೇವೆ ಎಂಬ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ.. ಮತ್ಸ್ಯಗಂಧ ರೈಲಲ್ಲಿ ಕಳ್ಳತನ ಹಾಗೂ ಅಪರಾಧಗಳು ಹೆಚ್ಚುತ್ತಿದ್ದು ಈ ಬಗ್ಗೆ ನಾವು ಚಿಂತಿಸಬೇಕಾಗಿದ್ದು ಇದರ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ.  ರೈಲ್ವೆ ಯಾತ್ರಿಕರ ಸುರಕ್ಷತೆ, ಯಾತ್ರಿಕರಿಗಾಗಿ ಹೆಚ್ಚಿನ ವ್ಯವಸ್ಥೆಗಳು – ವಂದೇ ಭಾರತ್ ಟ್ರೈನ್ ನ ಸೌಲಭ್ಯವನ್ನು ಮುಂಬೈಯಿಂದ ಮಂಗಳೂರಿಗೆ ಪ್ರಾರಂಭಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಸಂದಿಸಲು ಸಾರ್ವಜನಿಕರು ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿಸಿದರು. ಅದಷ್ಟು ಬೇಗನೇ ಕೇಂದ್ರ ಸರಕಾರವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸಂದೇಹವಿಲ್ಲ ಎಂದರು. 

 ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ. ಕೆ. ಶೆಟ್ಟಿ, ಕುಲಾಲ ಸಂಘ ಮುಂಬೈಯ ಮಾಜಿ ಅಧ್ಯಕ್ಷ ಗಿರೀಶ್ ಸಾಲ್ಯಾನ್, ಭಂಡಾರಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ನ್ಯಾ. ಅರ್. ಎಂ. ಭಂಡಾರಿ, ಮಹಾರಾಷ್ಟ್ರ ಕನ್ನಡಿಗರ ಕಲಾವಿದರ ಪರಿಷತ್ತಿನ ಅಧ್ಯಕ್ಷ ಡಾ. ಸುರೇಂದ್ರಕುಮಾರ್ ಹೆಗ್ಡೆ, ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ ಸುವರ್ಣ, ಕಳ್ಳಿಗೆ ದಯಾಸಾಗರ ಚೌಟ, ಚಿತ್ರಾಪು ಲಕ್ಷಣ ಪೂಜಾರಿ, ಚಿತ್ರಾಪು ಕೆ. ಎಂ. ಕೋಟ್ಯಾನ್ , ಸುಮ ಪೂಜಾರಿ ಮೊದಲಾದವರು ಮಾತನಾಡಿ ಇತ್ತೀಚೆಗಿನಿಂದ ಕೊಂಕಣ ರೈಲ್ವೆಯಲ್ಲಿ ಕರಾವಳಿಗರಿಗೆ ಉಂಟಾಗುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಎಲ್ಲರೂ ಒಗ್ಗಟ್ಟಿನಿಂದ ಸರಕಾರವನ್ನು ಒತ್ತಾಯಿಸಬೇಕು ಎಂದು ವಿನಂತಿಸಿದರು. 

ವೇದಿಕೆಯಲ್ಲಿದ್ದ ಸಮಿತಿಯ ಗೌರವ ಕೋಶಾಧಿಕಾರಿ ಸದಾನಂದ ಆಚಾರ್ಯ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸಮಿತಿಯ ವಕ್ತಾರ ಕಳ್ಳಿಗೆ ದಯಾಸಾಗರ ಚೌಟ, ಕಾರ್ಯಕ್ರಮವನ್ನು ನಿರ್ವಹಿಸಿ ವಂದನಾರ್ಪಣೆ ಮಾಡಿದರು. 

ಸಭೆಯಲ್ಲಿ ಸಮಿತಿಯ ಇತರ ಪದಾಧಿಕಾರಿಗಳು ಸಲಹೆಗಾರರು ಮಾತ್ರವಲ್ಲದೆ  ತುಳು ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

——

ಮತ್ಸ್ಯಗಂದದಂತಹ ರೈಲಲ್ಲಿ ಪ್ರಯಾಣಿಕರ ಸುರಕ್ಷತೆಗೆ  ಸರಕಾರ ಕ್ರಮ ಕೈಗೊಳ್ಳುವಂತೆ ರೈಲ್ವೆ ಇಲಾಖೆಗೆ ಒತ್ತಾಯಿಸುತಿದ್ದೇವೆ: ನಿತ್ಯಾನಂದ ಕೋಟ್ಯಾನ್

ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್ ಮಾತನಾಡುತ್ತಾ ಮತ್ಸ್ಯಗಂದದಂತಹ ರೈಲಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲು ಸರಕಾರವನ್ನು ಒತ್ತಾಯಿಸುದರೊಂದಿಗೆ ಅಗತ್ಯವಿದ್ದಲ್ಲಿ ಇನ್ನೊಂದು ಮತ್ಸ್ಯಗಂದ ರೈಲನ್ನು ಪ್ರಾರಂಭಸುವಂತಾಗಲಿ. ಎರಡು ತಿಂಗಳು ಮುಂಚಿತವಾಗಿ ಟಿಕೇಟನ್ನು ಕಾದಿರಿಸಿದರೂ ಕೂಡಲೇ ಟಿಕೇಟು ಸಿಗದೇ ಇರುವುದು ಜನಸಾಮಾನ್ಯರಿಗೆ ಅನನುಕೂಲತೆಗೆ ಕಾರಣವಾಗಿದೆ.  ನಾವೆಲ್ಲರೂ ಸೇರಿ ನಮ್ಮವರಿಗೆ ಆಗುತ್ತಿರುವ ಇಂತಹ ಅಸುರಕ್ಷತೆಯ ಬಗ್ಗೆ ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ಇತರ ಅನನುಕೂಲತೆಗೆ ಬಗ್ಗೆ ಸಮಿತಿಯ ಮುಖಾಂತರ ಹೋರಾಟ ನಡೆಸುವ ಅಗತ್ಯವಿದೆ ಎಂದರು. 



Related posts

ಎಸ್ ಎಸ್ ಸಿ ಪ್ರತಿಭ್ವಾನಿತರು: ಭಕ್ತಿ ಭಾಸ್ಕರ್ ಸುವರ್ಣ 93.60%

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ ಬೊರಿವಲಿ-ದಹಿಸರ್ ಸ್ಥಳೀಯ ಕಚೇರಿ ವತಿಯಿಂದ ಗಣರಾಜ್ಯೋತ್ಸವ ಆಚರಣೆ

Mumbai News Desk

12ನೇ ತರಗತಿಯ ಫಲಿತಾಂಶ : ಪ್ರಿಷಾ ಸದಾಶಿವ ಶೆಟ್ಟಿ , 88% ಅಂಕ 

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್‌ನ ಮಹಿಳಾ ವಿಭಾಗದಿಂದ ಭಜನೆ – ಕುಣಿತ ಭಜನ ಸ್ಪರ್ಧೆ

Mumbai News Desk

 ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್ ಬೊರಿವಿಲಿ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ

Mumbai News Desk

ಕುಲಾಲ ಸಂಘದ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆಯ ಆಚರಣೆ.

Mumbai News Desk