31 C
Mumbai
September 11, 2026
Mumbai News Kannada
ಪ್ರಕಟಣೆ

ಕುರ್ಲಾ ಪೂರ್ವದ ಬಂಟರ ಭವನ, ಜುಲೈ 29: ಒಡಿಯೂರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಗುರುಪೂರ್ಣಿಮೆ ಆಚರಣೆ






​ಮುಂಬಯಿ ಜು: 26 – ಬಂಟರ ಸಂಘ ಮುಂಬಯಿ ಹಾಗೂ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಮಹಾರಾಷ್ಟ್ರ ಘಟಕ ಇವುಗಳ ಜಂಟಿ ಸಂಯೋಜನೆಯಲ್ಲಿ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜುಲೈ 29ರಂದು ಮಧ್ಯಾಹ್ನ 2.00 ಗಂಟೆಯಿಂದ 27ನೇ ವರ್ಷದ ಗುರುಪೂರ್ಣಿಮಾ ಆಚರಣೆ ಜರಗಲಿದೆ.
​ಈ ಸುಸಂದರ್ಭದಲ್ಲಿ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಹಾಗೂ ಸಾಧ್ವಿ ಶ್ರೀ ಮಾತಾನಂದಮಯೀಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ವಾರ್ಷಿಕೋತ್ಸವ – ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
​ಆರಂಭದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಂಜೆ 6.00 ಗಂಟೆಗೆ ಮಹಾಮಂಗಳಾರತಿ, ಬಳಿಕ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸಭೆ ಹಾಗೂ ಪ್ರಸಾದ ಮಂತ್ರಾಕ್ಷತೆ ವಿತರಣೆ ನಡೆಯಲಿದೆ.
​ಗುರುಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುಕೃಪೆಗೆ ಪಾತ್ರರಾಗಬೇಕಾಗಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಬಳಗದ ಅಧ್ಯಕ್ಷರಾದ ದಾಮೋದರ ಎಸ್. ಶೆಟ್ಟಿ ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಕರ್ನಾಟಕ ಸಂಘ ಡೊಂಬಿವಲಿ: ಅಕ್ಟೋಬರ್ 27ರಂದು 57 ನೇ ವಾರ್ಷಿಕ ಮಹಾಸಭೆ.   

Mumbai News Desk

ಭಾಂಡುಪ್ ಶ್ರೀ ಶನೀಶ್ವರ ಭಕ್ತ ವೃಂದ ಮಿತ್ರ ಮಂಡಳಿ ಡಿ. 6 ರಂದು 47ನೇ ವಾರ್ಷಿಕ ಮಹಾಪೂಜೋತ್ಸವ

Mumbai News Desk

ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲಕ್ಕೆ ದಿನ ನಿಗದಿ

Mumbai News Desk

ಜ. 30 ರಿಂದ ಫೆ.1ರ ತನಕ ಜರ್ಮನಿನಲ್ಲಿ ಓಪನ್ ವರ್ಲ್ಡ್ ವೇಟ್ ಲಿಪ್ಟಿಂಗ್ ಚಾಂಪಿಯನ್‌ಶಿಪ್‌

Mumbai News Desk

ಸಾಂತಕ್ರೂಸ್   ಶ್ರೀ ಮಂತ್ರ ದೇವಿ   ದೇವಸ್ಥಾನ ವಾರ್ಷಿಕ ಮಹಾಪೂಜೆ.

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ,  ಎ13 ; ವಾರ್ಷಿಕ ಮಹೋತ್ಸವ ಮತ್ತು ಪಾಲ್ಕಿ ಉತ್ಸವ,

Mumbai News Desk