31 C
Mumbai
September 11, 2026
Mumbai News Kannada
ಮುಂಬಯಿ

ಸಯನ್ ವಲ್ಲಭ ವಿದ್ಯಾ ಮಂದಿರದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ






​ಅನ್ಯರಿಗೆ ತೊಂದರೆಯಾಗದಂತೆ ಜೀವನ ನಡೆಸುವುದೇ ಅಧ್ಯಾತ್ಮ: ಒಡಿಯೂರು ಶ್ರೀ
​ಚಿತ್ರ-ವರದಿ: ದಿನೇಶ್ ಕುಲಾಲ್
​ಮುಂಬಯಿ: ಸೇವೆಯ ಅಗತ್ಯ ಯಾರಿಗಿದೆಯೋ ಅದನ್ನರಿತು ತೊಡಗಿಸಿಕೊಂಡರೆ ಸಾರ್ಥಕತೆ ಇದೆ. ನಂಬಿದವರಿಗೆ ಇಂಬು ಸಿಗುತ್ತದೆ. ನಿತ್ಯಾನಂದ ಸಭಾಗೃಹದಲ್ಲಿ ಆರಂಭಗೊಂಡ ಬಳಗದ ಕಾರ್ಯಕ್ರಮ ಇವತ್ತೂ ಸಹ ಮುಂದುವರಿಯುತ್ತಿರುವುದು ಸಂತಸದ ವಿಚಾರ. ಧ್ಯೇಯೋದ್ದೇಶವನ್ನು ತಿಳಿದುಕೊಂಡು ಕಾರ್ಯಪ್ರವೃತ್ತರಾದರೆ ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದುವ ಜೊತೆಗೆ ಆದರ್ಶ ಸಂಘಟನೆಯಾಗುತ್ತವೆ.
​ಉತ್ಕೃಷ್ಟ ವಿಚಾರಗಳಿದ್ದರೆ ಅದು ಸನಾತನ ಧರ್ಮದಲ್ಲಿದೆ. ಧಾರಣೆಗೆ ಯೋಗ್ಯವಾದುದು ಧರ್ಮ. ಸದ್ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಆಚರಿಸಿಕೊಂಡು ಬಂದಾಗ ಧರ್ಮಾನುಷ್ಠಾನವಾಗುತ್ತದೆ. ಸ್ವಾರ್ಥ, ಅಹಂಕಾರರಹಿತ, ಸೇವಾ ಮನೋಭಾವದ ಕಾರ್ಯದೊಂದಿಗೆ ಬಳಗವು ಕಾರ್ಯಾಚರಿಸಿಕೊಂಡು ಬಂದಿದೆ. ಸ್ವಾರ್ಥರಹಿತ ಬದುಕು ಭಗವಂತನಿಗೆ ಪ್ರಿಯವಾದುದು. ಆಸೆ ಅತಿಯಾಸೆಯಾಗಬಾರದು; ಅತಿಯಾದರೆ ಅಮೃತವೂ ವಿಷವಾಗುವುದು.
​ಶರೀರವೆಂಬ ಭೂಮಿಯಲ್ಲಿ ಅಧ್ಯಾತ್ಮದ ಕೃಷಿ ಮಾಡಬೇಕು. ತನ್ನನ್ನು ತಾನು ಅರಿತುಕೊಂಡು ಅನ್ಯರಿಗೆ ತೊಂದರೆಯಾಗದಂತೆ ಜೀವನ ನಡೆಸುವುದೇ ಅಧ್ಯಾತ್ಮ. ಪ್ರತಿಯೊಬ್ಬರೂ ವೃತ್ತಿಧರ್ಮದ ಪರಿಪಾಲನೆ ಮಾಡಿದಾಗ ಜೀವನ ಆದರ್ಶವಾಗಬಹುದು. ನಾಮಸಂಕೀರ್ತನೆ ಹಾಗೂ ಭಜನೆಗಳು ನಡೆಯುತ್ತಿರಬೇಕು, ಇದು ಆತ್ಮಸಂತೋಷಕ್ಕೆ ಪೂರಕ. ಇಹದಿಂದ ಪರಕ್ಕೆ ದಾಟಲು ಭಜನೆ ಸಹಕಾರಿ. ಯಾಂತ್ರಿಕ ಬದುಕಿನಲ್ಲಿರುವ ನಾವು ಜಾಗರೂಕರಾಗಬೇಕಾದ ಅವಶ್ಯಕತೆ ಇದೆ. ತಂತ್ರಜ್ಞಾನದ ಜೊತೆಗೆ ಆತ್ಮಜ್ಞಾನವೂ ಇರಲಿ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
​ಅವರು ಜುಲೈ 26, ರವಿವಾರದಂದು ಸಯನ್ ವಲ್ಲಭ ವಿದ್ಯಾ ಮಂದಿರದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು.
​ಗುರುಭಕ್ತರಿಂದ ಭಜನಾ ಕಾರ್ಯಕ್ರಮ ಜರುಗಿದ ಬಳಿಕ, ಸಾಧ್ವಿ ಮಾತಾನಂದಮಯಿಯವರ ಪ್ರಾರ್ಥನೆಯೊಂದಿಗೆ ಶ್ರೀಗಳು ಜ್ಯೋತಿ ಬೆಳಗಿಸಿ ಧಾರ್ಮಿಕ ಸಭೆಗೆ ಚಾಲನೆ ನೀಡಿದರು. ಗುರುದೇವ ಸೇವಾ ಬಳಗ ಮಹಾರಾಷ್ಟ್ರದ ಅಧ್ಯಕ್ಷ ದಾಮೋದರ್ ಶೆಟ್ಟಿ ದಂಪತಿ ಪಾದಪೂಜೆ ನೆರವೇರಿಸಿದರು.


​ಈ ಸಂದರ್ಭದಲ್ಲಿ ಹಿರಿಯರಾದ ವಾಮಯ್ಯ ಶೆಟ್ಟಿ, ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ ಕಡಂದಲೆ ಪರಾರಿ, ಗುರುದೇವ ಸೇವಾ ಬಳಗ ಮುಂಬಯಿ ಮಹಾರಾಷ್ಟ್ರ ಘಟಕದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ರವಿ ಶೆಟ್ಟಿ, ಗುರುದೇವ ಸೇವಾ ಬಳಗದ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಘಟಕದ ಕಾರ್ಯಾಧ್ಯಕ್ಷೆ ಶ್ವೇತಾ ಚಂದ್ರಹಾಸ ರೈ, ರೇವತಿ ವಾಮಯ್ಯ ಶೆಟ್ಟಿ, ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಬೊಳ್ನಾಡು ಗುತ್ತು ಚಂದ್ರಹಾಸ ರೈ, ಮೋಹನ್ ಹೆಗ್ಡೆ ಥಾಣೆ, ರಾಮ್‌ದೇವ್ ಹೋಟೆಲ್‌ನ ಸುಂದರ ಶೆಟ್ಟಿ, ಯುವ ವಿಭಾಗದ ಡಾ. ಅದೀಪ್ ಶೆಟ್ಟಿ, ಐಕಳ ವಿಶ್ವನಾಥ್ ಶೆಟ್ಟಿ, ಲಕ್ಷ್ಮಿ ಕ್ಯಾಟರಿಂಗ್ ಮಾಲಕರಾದ ಸತೀಶ್ ಶೆಟ್ಟಿ, ಪಿ. ಡಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.



Related posts

ಮೀರಾರೋಡ್ ಬ್ರಹ್ಮ ಮಂದಿರದಲ್ಲಿ ಬಾಲ ಭಜನೆ, ಶಾರದಾ ಪೂಜೆ.

Mumbai News Desk

ಮೀರಾಬಾಯಂದರ್ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಗಣೇಶ್ ಗೋಪಾಲ್ ಶೆಟ್ಟಿಯವರು ವಾರ್ಡ್ 3ರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ.

Mumbai News Desk

ಕಲಂಬೋಲಿ  ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ದ  34 ನೆ  ವಾರ್ಷಿಕ ಮಹಾಪೂಜೆ .

Mumbai News Desk

ಬಿಲ್ಲವರ ಅಸೋಸಿಯೇಶನಿನ ಭಾಂಡುಪ್ ಸ್ಥಳೀಯ ಕಚೇರಿಯ ವತಿಯಿಂದ ಶೈಕ್ಷಣಿಕ ನೆರವು, ಸನ್ಮಾನ.

Mumbai News Desk

ಗಣಪನ ಭಕ್ತಿ ಸಿಂಚನದಲ್ಲಿ ತೇಲಿದ ಕಾಂದಿವಲಿ ಕನ್ನಡ ಸಂಘ

Mumbai News Desk

ಗೋರೆಗಾಂವ್ ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ, ಬ್ರಹ್ಮಕಲಶೋತ್ಸವ ವೈದಿಕ ವಿಧಿ ವಿಧಾನಗಳಿಗೆ ಚಾಲನೆ 

Mumbai News Desk