ಸುದ್ದಿ ವಿವರ : ಪಿ.ಆರ್.ರವಿಶಂಕರ್ 8483980035
ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲೆಯ ಬೊಯಿಸರ್ ಪಶ್ಚಿಮದಲ್ಲಿನ ಸುಪ್ರಸಿದ್ಧ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಇದೇ ಬರುವ ಜುಲೈ ತಾ.29 ನೇ ಬುಧವಾರದ ಆಷಾಡ ಪೂರ್ಣಿಮೆಯಂದು ಗುರುಪೂರ್ಣಿಮಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.
ಪ್ರಾತಃ ಕಾಲ 6.30 ಕ್ಕೆ ಕಳಶಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ ಬೆಳಿಗ್ಗೆ 7 ಕ್ಕೆ ಪಂಚಾಮೃತ ಅಭಿಷೇಕ ಹಾಗೂ ಗುರುದೇವರಿಗೆ ಸರ್ವ ಭಕ್ತಾದಿಗಳಿಂದ ಸೀಯಾಳ ಅಭಿಷೇಕ ಜರಗಲಿದೆ.
8 ಕ್ಕೆ ಪ್ರಾತಃ ಆರತಿಯ ಬಳಿಕ 9.30 ಕ್ಕೆ ಭಜನಾ ಕಾರ್ಯಕ್ರಮವಿದೆ. ಮದ್ಯಾಹ್ನ ವಿಶೇಷ ಗುರುಪೂಜೆ ಜರಗಲಿದ್ದು ಮಂಗಳ ಆರತಿಯ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಜರಗಲಿದೆ.
ಭಕ್ತಾಭಿಮಾನಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದ್ಗುರುವಿನ ಸೇವಾ ಕಾರ್ಯಗಳಲ್ಲಿ ಭಾಗವಹಿಸಿ ಸದ್ಗುರು ಭಗವಾನ್ ಶ್ರೀ ಸ್ವಾಮಿ ನಿತ್ಯಾನಂದ ಗುರುದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಮಂದಿರದ ವಿಶ್ವಸ್ಥಮಂಡಳಿಯ ಶ್ರೀಮತಿ ಸುಹಾಸಿನಿ ಡಿ. ನಾಯ್ಕ್ , ಸ್ವಾಮಿ ನಿತ್ಯಾನಂದ ಭಕ್ತಮಂಡಳಿ ಹಾಗೂ ಸದ್ಗುರು ಭಜನಾ ಮಂಡಳಿಯ ಸರ್ವಸದಸ್ಯರು ಮತ್ತು ಸದ್ಗುರು ನಿತ್ಯಾನಂದ ಸೇವಾ ಟ್ರಸ್ಟ್ ಪದಾಧಿಕಾರಿಗಳು ಪ್ರಕಟಣೆಯ ಮೂಲಕ ವಿನಂತಿಸಿರುತ್ತಾರೆ.
ಸುದ್ದಿ ವಿವರ :ಪಿ.ಆರ್.ರವಿಶಂಕರ್
ಡಹಾಣೂ ರೋಡ್





