28.2 C
Mumbai
August 2, 2026
Mumbai News Kannada
ಪ್ರಕಟಣೆ

ಶ್ರೀ ನೀಲಕಂಠೇಶ್ವರ ದೇವಸ್ಥಾನ, ಜಂಗಮ ಮಠ ಗುರುಪುರ ಜೀರ್ಣೋದ್ಧಾರ: ಆಗಸ್ಟ್ 4 : ಸಯನ್ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಪೂರ್ವಭಾವಿ ಸಭೆ





ಗುರುಪುರ ಶ್ರೀ ನೀಲಕಂಠೇಶ್ವರ ದೇವಸ್ಥಾನ ಹಾಗೂ ಜಂಗಮ ಮಠವು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಪುರಾತನ ದೇವಾಲಯವಾಗಿದ್ದು, ಕರಾವಳಿ ಕರ್ನಾಟಕದ ಅತ್ಯಂತ ಪ್ರಾಚೀನ ಹಾಗೂ ಪೂಜ್ಯ ಸನಾತನ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಶತಮಾನಗಳಿಂದ ಈ ಮಠವು ಆಧ್ಯಾತ್ಮಿಕ ಮಾರ್ಗದರ್ಶನ, ಧಾರ್ಮಿಕ ಶಿಕ್ಷಣ ಹಾಗೂ ಸಮಾಜ ಸೇವೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸನಾತನ ಧರ್ಮ ಹಾಗೂ ವೀರಶೈವ ಸಂಪ್ರದಾಯದ ಸಂರಕ್ಷಣೆ ಮತ್ತು ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದೆ.
ಕಾಲದ ಹೊಡೆತ ಹಾಗೂ ಪ್ರಕೃತಿ ವೈಪರೀತ್ಯಗಳಿಂದ ದೇವಾಲಯದ ಮೂಲ ಕಟ್ಟಡ ಜೀರ್ಣಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ, ದೇವಾಲಯದ ಪಾರಂಪರಿಕ ವಾಸ್ತುಶಿಲ್ಪ ಹಾಗೂ ಪಾವಿತ್ರ್ಯವನ್ನು ಉಳಿಸಿಕೊಂಡು ಜೀರ್ಣೋದ್ಧಾರ ಮತ್ತು ಸಂಪೂರ್ಣ ನವೀಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ.
ಈ ಯೋಜನೆಯಡಿ ಗರ್ಭಗುಡಿಯ ಪುನರ್‌ನಿರ್ಮಾಣ, ದೇವಾಲಯದ ವಿವಿಧ ಕಟ್ಟಡಗಳ ಬಲವರ್ಧನೆ, ಭಕ್ತರಿಗೆ ಅಗತ್ಯ ಸೌಲಭ್ಯಗಳ ನಿರ್ಮಾಣ, ಪುರಾತನ ವಾಸ್ತುಶಿಲ್ಪದ ಸಂರಕ್ಷಣೆ ಹಾಗೂ ದೇವಾಲಯದ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ಈ ಪ್ರಯುಕ್ತ ಆ .4, ಮಂಗಳವಾರ ಸಂಜೆ 4.00 ಗಂಟೆಗೆ ಸ್ವಾಮಿ ನಿತ್ಯಾನಂದ ಸಭಾಗೃಹ, ಮುಖ್ಯೋಪಾಧ್ಯಾಯ ಭವನ, ಸಯನ್ (ಪಶ್ಚಿಮ) ಸಮಾಲೋಚನಾ ಸಭೆ ನಡೆಯಲಿದೆ,

ಈಗಾಗಲೇ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶ್ರೀ ನೀಲಕಂಠೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯನ್ನು ಸಚಿನ್ ಅಡಪ ಬಡಕರೆ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.

ಸಚಿನ್ ಶೆಟ್ಟಿ, ಗುರುಪುರ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದು, ಗಜಾನನ ಪ್ರಭು, ಗುರುಪುರ ಅವರು ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಹತ್ವಾಕಾಂಕ್ಷಿ ಜೀರ್ಣೋದ್ಧಾರ ಕಾರ್ಯಕ್ಕೆ ಪರಮ ಪೂಜ್ಯ ಶ್ರೀ ರುದ್ರಮುನಿ ಮಹಾಸ್ವಾಮೀಜಿಯವರ ಮಾರ್ಗದರ್ಶನ, ಆಶೀರ್ವಾದ ಹಾಗೂ ನಾಯಕತ್ವವೇ ಪ್ರಮುಖ ಶಕ್ತಿಯಾಗಿದೆ.

ಜೀರ್ಣೋದ್ಧಾರ ಕಾರ್ಯಕ್ಕೆ ಭಕ್ತರ ಸಹಕಾರವನ್ನು ಇನ್ನಷ್ಟು ಸಂಘಟಿಸುವ ಉದ್ದೇಶದಿಂದ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಭಕ್ತರ ಸಭೆಯನ್ನು ಕೆಳಕಂಡಂತೆ ಆಯೋಜಿಸಲಾಗಿದೆ.
ದೇವಾಲಯದ ಜೀರ್ಣೋದ್ಧಾರ ಸಮಿತಿಯು ಎಲ್ಲಾ ಭಕ್ತರು ಹಾಗೂ ಹಿತೈಷಿಗಳನ್ನು ಈ ಪುಣ್ಯ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ವಿನಂತಿಸಿದೆ. ಮುಂಬೈ, ಠಾಣೆ, ಪಾಲ್ಘರ್, ಪುಣೆ, ವಾಶಿ, ಸಾಂಗ್ಲಿ, ಸೂರತ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಗುರುಪುರ ಹಾಗೂ ಸುತ್ತಮುತ್ತಲಿನ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಮುಂದಿನ ಕಾರ್ಯಯೋಜನೆ ರೂಪಿಸಲು ಸಹಕರಿಸುವಂತೆ ಕೋರಲಾಗಿದೆ.

ಪುರಾತನ ದೇವಾಲಯದ ಜೀರ್ಣೋದ್ಧಾರಕ್ಕೆ ಯಾವುದೇ ರೂಪದಲ್ಲಿ ನೀಡುವ ಸಹಾಯವು ಅತ್ಯಂತ ಪುಣ್ಯಕರವಾದ ಸೇವೆಯಾಗಿದ್ದು, ದಾನಿಗಳಿಗೂ ಅವರ ಕುಟುಂಬಕ್ಕೂ ಶ್ರೀ ನೀಲಕಂಠೇಶ್ವರರ ದಿವ್ಯ ಆಶೀರ್ವಾದ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಈ ಪವಿತ್ರ ಕಾರ್ಯಕ್ಕೆ ಈಗಾಗಲೇ ಸಹಕರಿಸಿರುವ ಎಲ್ಲ ಭಕ್ತರು, ದಾನಿಗಳು ಹಾಗೂ ಹಿತೈಷಿಗಳಿಗೆ ಸಮಿತಿಯು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದು, ದೇವಾಲಯದ ಜೀರ್ಣೋದ್ಧಾರ ಪೂರ್ಣಗೊಳ್ಳುವವರೆಗೆ ತಮ್ಮ ಅಮೂಲ್ಯ ಸಹಕಾರವನ್ನು ಮುಂದುವರಿಸುವಂತೆ ಮನವಿ ಮಾಡಿದೆ. ಇದೇ ಸಭೆಯಲ್ಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಮುಂಬೈ ಸಮಿತಿಯನ್ನು ಸಹ ರಚಿಸುವ ಯೋಜನೆ ಇದೆ.

ಸಭೆಯ ಆಯೋಜಕರಾದ ಹರೀಶ್ ಕುಮಾರ್ ಎಂ. ಶೆಟ್ಟಿ (ಮೀರಾ ರೋಡ್) ಹಾಗೂ ಹರೀಶ್ ಭಂಡಾರಿ (ಚಾಮಣಿ, ಗುರುಪುರ) ಅವರು ಎಲ್ಲಾ ಭಕ್ತರು ಹಾಗೂ ಹಿತೈಷಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿ ಈ ಐತಿಹಾಸಿಕ ಜೀರ್ಣೋದ್ಧಾರ ಕಾರ್ಯಕ್ಕೆ ತಮ್ಮ ಅಮೂಲ್ಯ ಸಹಕಾರ ನೀಡುವಂತೆ ಹೃತ್ಪೂರ್ವಕವಾಗಿ ಮನವಿ ಮಾಡಿದ್ದಾರೆ. ಅಂದಿನ ಸಭೆಯಲ್ಲಿ ಈವರೆಗೆ ಆದ ಕೆಲಸದ ಮಾಹಿತಿ ಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಹರೀಶ್ ಕುಮಾರ್ ಎಂ. ಶೆಟ್ಟಿ: 9321056227, ಹರೀಶ್ ಭಂಡಾರಿ: 7090998424



Related posts

ಐತಿಹಾಸಿಕ ಕಾಪು ಪಿಲಿ ಕೋಲ: ಮೇ 16 ರಂದು ಕರಾವಳಿಯ ವಿಶಿಷ್ಟ ಪ್ರಕೃತಿ ಆರಾಧನೆ

Mumbai News Desk

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಜ. 5ರಂದು ವಾರ್ಷಿಕ ಸ್ನೇಹ ಮಿಲನ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಮಾ7:   ಒಕ್ಕಲಿಗರ ಸಂಘ ಮಹಾರಾಷ್ಟ್ರ, (ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ) ವತಿಯಿಂದ  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪುಸ್ತಕ ವಿತರಣೆ,

Mumbai News Desk

ಶ್ರೀ ಅಯ್ಯಪ್ಪ ಸೇವ ಸಮಿತಿ, ಕಿಸನ್ ನಗರ ಥಾಣೆ – ಡಿ.16, ಮತ್ತು 17ರಂದು 23ನೇ ವಾರ್ಷಿಕ ಮಹಾಪೂಜೆ.

Mumbai News Desk

ಬಂಟರ ಸಂಘ ಮುಂಬಯಿ : ಫೆ 4 ರಂದು ವಸಯಿ-ದಾಹಣು ಪ್ರಾದೇಶಿಕ ಸಮಿತಿ ಇದರ ನೂತನ ಸಮಿತಿಯ ಪದಗ್ರಹಣ ಸಮಾರಂಭ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ವೀರ್ ಸಾವರ್ಕರ್ ನಗರ, ಥಾಣೆ (ಪ) : ಸೆ. 26ರಂದು ಶರನ್ನವರಾತ್ರೋತ್ಸವದ ಅಂಗವಾಗಿ ದುರ್ಗಾ ಹೋಮ, ದೇವಿ ದರ್ಶನ, ರಂಗ ಪೂಜೆ

Mumbai News Desk