28 C
Mumbai
September 18, 2026
Mumbai News Kannada
ಪ್ರಕಟಣೆ

ಡೊಂಬಿವಲಿ: ಆ. 9 ರಂದು ‘ಕರ್ಣಬೇಧನ- ಕರ್ಣಾವಸಾನ’ ಯಕ್ಷಗಾನ ತಾಳಮದ್ದಳೆ





ಮುಂಬೈ: ಇಲ್ಲಿನ ಗುರು ನಾರಾಯಣ ರಾತ್ರಿ ಶಾಲಾ ಹಳೇ ವಿದ್ಯಾರ್ಥಿಗಳ ಸಂಘ (ರಿ.) ಮುಂಬೈ ಇದರ ವಜ್ರ ಮಹೋತ್ಸವದ ಸರಣಿ ಕಾರ್ಯಕ್ರಮದ ಅಂಗವಾಗಿ ಬರುವ ಆಗಸ್ಟ್ 9 (ರವಿವಾರ) ರಂದು ಸಂಜೆ 4:೦೦ ಗಂಟೆಗೆ ಡೊಂಬಿವಲಿ (ಪಶ್ಚಿಮ) ಸ್ಟೇಷನ್ ಹತ್ತಿರವಿರುವ ‘ಪ್ರೀತಿ ಬ್ಯಾಂಕ್ವೆಟ್ ಹಾಲ್’ನಲ್ಲಿ ಮಹಾನಗರದ ಪ್ರಬುದ್ಧ ಯಕ್ಷಗಾನ ಅರ್ಥದಾರಿಗಳಿಂದ ‘ಕರ್ಣಬೇಧನ- ಕರ್ಣಾವಸಾನ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಲಾಗಿದೆ.

ವಾಸುದೇವ ಮಾರ್ನಾಡ್ ಅವರ ಸಂಯೋಜನೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಕಲಾವಿದರ ವಿವರ:

  • ಭಾಗವತರು: ಶ್ರೀಮತಿ ಜಯಲಕ್ಷ್ಮಿ ದೇವಾಡಿಗ
  • ಚಂಡೆ ಹಾಗೂ ಮದ್ದಳೆ: ಪ್ರವೀಣ್ ಶೆಟ್ಟಿ ಕಟೀಲು, ಶ್ರೀ ಹರೀಶ್ ನಾರಾಯಣ ಸಾಲ್ಯಾನ್
  • ಅರ್ಥದಾರಿಗಳು:
    • ಸುರೇಶ್ ನಂದೋಳ್ಳಿ
    • ವಾಸುದೇವ ಮಾರ್ನಾಡ್
    • ಅಶೋಕ ಪಕ್ಕಳ
    • ನಾಗೇಶ ಸುವರ್ಣ ಎರ್ಮಾಳ್
    • ನಾರಾಯಣ ಕುಂಬ್ಳೆ
    • ರಾಘವೇಂದ್ರ ಬಗ್ಗಾಡಿ
    • ಮಾನಸ್ ಶೆಟ್ಟಿ

ಇದೇ ಸಂದರ್ಭದಲ್ಲಿ ಕುಲಾಲ ಸಂಘ, ಮುಂಬೈ ಹಾಗೂ ಸ್ಥಳೀಯ ಸಮಿತಿ ಠಾಣೆ, ಕಸರಾ, ಕರ್ಜತ್, ಭವಂಡಿ ಇದರ ಕಾರ್ಯಾಧ್ಯಕ್ಷರಾದ ಶ್ರೀ ಲಕ್ಷ್ಮಣ ಸಿ. ಮೂಲ್ಯ ಅವರಿಗೆ ಗೌರವಾರ್ಪಣೆ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಗುರುನಾರಾಯಣ ರಾತ್ರಿ ಶಾಲಾ ಹಳೇ ವಿದ್ಯಾರ್ಥಿಗಳ ಸಂಘದ ಪರವಾಗಿ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಾರ್ಯಾಧ್ಯಕ್ಷರು, ವಜ್ರ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರು, ಸಮಾರಂಭದ ಸಮಿತಿ ಮತ್ತು ಸರ್ವಸದಸ್ಯರು ಆದರದ ಸ್ವಾಗತ ಆಹ್ವಾನವನ್ನು ನೀಡಿದ್ದಾರೆ.



Related posts

ಎ. 25-26 ರಂದು ಬೊರಿವಲಿ ಮಂಡಪೇಶ್ವರ ಗುಹೆಯ ಶ್ರೀ ಪಾಂಡವೇಶ್ವರ ದೇವಸ್ಥಾನದಲ್ಲಿ ನೂತನ ಶಿವಲಿಂಗ ಪ್ರತಿಷ್ಠಾಪನೆಯೊಂದಿಗೆ ಬ್ರಹ್ಮ ಕಲಶೋತ್ಸವ

Mumbai News Desk

ಡಿ.25 ರಂದು ಕಲ್ಯಾಲು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ ಕಲ್ಯಾಲು, ಇನ್ನಂಜೆ – ನೇಮೋತ್ಸವ.

Mumbai News Desk

ಕರ್ನಾಟಕ ಸಂಘ ಸಯನ್ – ಫೆ.10ರಂದು ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಸೆ.7 ರಂದು ಗೋರೆಗಾಂವ್‌ ನಲ್ಲಿ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ‘ಶಿವಗಿರಿ ಸಮ್ಮಾನ್ ಪ್ರಶಸ್ತಿ’ ಪ್ರದಾನ ಸಮಾರಂಭ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿಜ.15 ಮತ್ತು 16ರಂದು ಪ್ರಥಮ ವರ್ಧಂತಿ ಉತ್ಸವ.

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಜ1 ರಂದು, ಶ್ರೀ  ಸಾರ್ವಜನಿಕ ಸತ್ಯ ನಾರಾಯಣ ಮಹಾಪೂಜೆ.

Mumbai News Desk