30 C
Mumbai
September 19, 2026
Mumbai News Kannada
ಪ್ರಕಟಣೆ

ಡೋಂಬಿವಲಿ: ಆ. 15ರಂದು ‘ಶ್ರೀ ಸಾಯಿನಾಥ ಮಿತ್ರ ಮಂಡಳಿ’ಯಿಂದ 20ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ





ಡೋಂಬಿವಲಿ (ಠಾಣೆ): ಇಲ್ಲಿನ ‘ಶ್ರೀ ಸಾಯಿನಾಥ ಮಿತ್ರ ಮಂಡಳಿ’ಯ (ನೊಂದಣಿ ಸಂಖ್ಯೆ: 6, ಮೀರಾ ಬಲರಾಮ್ ಜೋಶಿ ನಿವಾಸ, ಸಾಯಿಬಾಬಾ ಮಂದಿರ ಹತ್ತಿರ, ಕೈಲಾಶ್ ನಗರ, ಡೋಂಬಿವಲಿ ಪಶ್ಚಿಮ – 421202, ಠಾಣೆ ಜಿಲ್ಲೆ) ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ 20ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಮುಂಬರುವ ಆಗಸ್ಟ್ 15, 2026ರ ಶನಿವಾರದಂದು ಜರುಗಲಿದೆ.

ಡೋಂಬಿವಲಿ (ಪಶ್ಚಿಮ) ಎಂ.ಜಿ. ರೋಡ್, ರೈಲ್ವೆ ನಿಲ್ದಾಣ ಬಳಿಯಿರುವ ರೀತಿ ಭವನದ 3ನೇ ಮಹಡಿಯ ಭರತ್ ಭೋಯೀರ್ ಸಭಾಗೃಹದಲ್ಲಿ ಪ್ರಕಾಶ್ ಭಟ್ ಕಾನಂಗಿ ಅವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.

ದಿನದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ:

  • ಬೆಳಿಗ್ಗೆ 9.30: ಗಣ್ಯರಿಂದ ದೀಪ ಪ್ರಜ್ವಲನೆ.
  • ಬೆಳಿಗ್ಗೆ 10.00: ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಪ್ರಾರಂಭ.
  • ಬೆಳಿಗ್ಗೆ 11.30: ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಭಜನಾ ಮಂಡಳಿಯಿಂದ ಭಜನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ.
  • ಮಧ್ಯಾಹ್ನ 12.30 ರಿಂದ: ತೀರ್ಥ ಪ್ರಸಾದ ಹಾಗೂ ಮಹಾಪ್ರಸಾದ (ಅನ್ನ ಸಂತರ್ಪಣೆ).
  • ಸಂಜೆ 4.00 ರಿಂದ 8.00 ರವರೆಗೆ: ಪಶ್ಚಿಮ ವಿಭಾಗ ನವರಾತ್ರಿ ಮಂಡಳಿಯ ಮಹಿಳಾ ಸದಸ್ಯರಿಂದ ‘ಶ್ರೀ ಶನಿಶ್ವರ ಮಹಾತ್ಮೆ’ ಎಂಬ ಯಕ್ಷಗಾನ ತುಳು ತಾಳಮದ್ದಳೆ ಆಯೋಜಿಸಲಾಗಿದೆ.

ಶ್ರೀ ಸಾಯಿನಾಥ ಮಿತ್ರ ಮಂಡಳಿ ಪದಾಧಿಕಾರಿಗಳು:

  • ಅಧ್ಯಕ್ಷರು: ಮೋಹನ ಜಿ. ಸಾಲಿಯಾನ್
  • ಗೌರವಾಧ್ಯಕ್ಷರು: ಗಣೇಶ ಮೊಗವೀರ
  • ಉಪಾಧ್ಯಕ್ಷರು: ಮೋಹನ್ ಪೂಜಾರಿ, ಆನಂದ ಶೆಟ್ಟಿ
  • ಗೌರವ ಪ್ರಧಾನ ಕಾರ್ಯದರ್ಶಿ: ಸುರೇಶ ಮೊಗವೀರ
  • ಕೋಶಾಧಿಕಾರಿ: ವಾಸು ಮೊಗವೀರ
  • ಜೊತೆ ಕಾರ್ಯದರ್ಶಿಗಳು: ಅರುಣ ಶೆಟ್ಟಿ, ದಿನಕರ್ ಸಾಲ್ಯಾನ್

ಪೂಜಾ ಕಮಿಟಿ ಪದಾಧಿಕಾರಿಗಳು:

  • ಅಧ್ಯಕ್ಷರು: ರಘುರಾಮ ಎನ್. ಶೆಟ್ಟಿ
  • ಉಪಾಧ್ಯಕ್ಷರು: ಸೋಮನಾಥ ಡಿ. ಪೂಜಾರಿ
  • ಕಮಿಟಿ ಸದಸ್ಯರು: ವಸಂತ್ ಶೆಟ್ಟಿ, ಅರುಣ್ ಶೆಟ್ಟಿ, ಸುರೇಶ್ ಎನ್. ಬಿ., ಜಗದೀಶ್ ಎಸ್. ಸಾಲ್ಯಾನ್, ಯೋಗೀಶ್ ಶೆಟ್ಟಿಗಾರ್, ಪುರುಷೋತ್ತಮ್ ಪೂಜಾರಿ, ಯಾದವ್ ಕರ್ಕೇರ, ಚಿನ್ಮಯ್ ಸಾಲಿಯಾನ್, ಅಭಿಷೇಕ್ ಮೊಗವೀರ, ಕೃಷ್ಣ ಪೂಜಾರಿ, ಚಂದ್ರಹಾಸ್ ಕೋಟ್ಯಾನ್, ರಾಜೇಶ್ ಕೋಟ್ಯಾನ್, ಪುಷ್ಪರಾಜ್ ಶೆಟ್ಟಿ, ಬಾಲಕೃಷ್ಣ ಎಸ್. ಶೆಟ್ಟಿ, ಭಾಸ್ಕರ ಶೆಟ್ಟಿ ಮತ್ತು ಅಶೋಕ ಪೂಜಾರಿ.

ಭಕ್ತಾಭಿಮಾನಿಗಳು ರೂ. 301/- ನೀಡುವ ಮೂಲಕ ಸಾಮೂಹಿಕ ಸತ್ಯನಾರಾಯಣ ಪೂಜೆ ಮಾಡಿಸಬಹುದಾಗಿದ್ದು, ಇನ್ನಿತರ ಯಾವುದೇ ಸೇವೆಗಳನ್ನು ಆದರಪೂರ್ವಕವಾಗಿ ಸ್ವೀಕರಿಸಲಾಗುವುದು. ಕಾರ್ಯಕ್ರಮಕ್ಕೆ ಎಲ್ಲಾ ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ದೇವರ ಗಂಧ ಪ್ರಸಾದ ಹಾಗೂ ಮಹಾಪ್ರಸಾದವನ್ನು ಸ್ವೀಕರಿಸಿ ಶ್ರೀ ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಂಸ್ಥೆಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಜ1 ರಂದು, ಶ್ರೀ  ಸಾರ್ವಜನಿಕ ಸತ್ಯ ನಾರಾಯಣ ಮಹಾಪೂಜೆ.

Mumbai News Desk

ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರಿಂದ ಎ. 25ರಂದು ಭಜನಾ ಮಂಡಳಿ ಉದ್ಘಾಟನೆ

Mumbai News Desk

ಮಾ. 22: ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Mumbai News Desk

ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ರೋಡ್ : ಡಿ. 22ರಂದು 28ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಸೆ. 22 ರಿಂದ ಅ. 2 ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನ – 48ನೇ ವರ್ಷದ ನವರಾತ್ರಿ ಮಹೋತ್ಸವ 2025

Mumbai News Desk

ಜನವರಿ 2 ರಿಂದ 12 ರವರೆಗೆ ರಂಗ್ ದ ರಾಜೆ ಸುಂದರ್ ರೈ ಮಂದಾರ ಸಾರಥ್ಯದ ‘ಅಮ್ಮ ಕಲಾವಿದೆರ್ ಕುಡ್ಲ’ ತಂಡದಿಂದ ‘ಆನ್ ಮಗೆ’ ನಾಟಕದ ಮುಂಬೈ, ಪುಣೆ ಪ್ರದರ್ಶನ

Mumbai News Desk