30 C
Mumbai
September 19, 2026
Mumbai News Kannada
ನಿಧನ ಸುದ್ದಿ

ವಸಾಯಿ: ನವೀನ್ ಪುತ್ರನ್ ನಿಧನ





ವಸಾಯಿ: ಇಲ್ಲಿನ ಪೂರ್ವ ಭಾಗದ ನಾಲಾಸೊಪರಾ ಲಿಂಕ್ ರಸ್ತೆ ಬಳಿಯ, ನಾಲಾಸೊಪರಾ ಅಗ್ನಿಶಾಮಕ ದಳದ ಹತ್ತಿರವಿರುವ ವೀಣಾ ಸುರ್ ಶ್ಯಾಮ್ ಕಾಂಪ್ಲೆಕ್ಸ್ ನಿವಾಸಿ ನವೀನ್ ಪುತ್ರನ್ (45) ಅವರು ಆಗಸ್ಟ್ 4ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನವೀನ್ ಪುತ್ರನ್ ಅವರು ವಸಾಯಿ ತಾಲೂಕು ಮೊಗವೀರ ಸಂಘದ ಸಕ್ರಿಯ ಸದಸ್ಯರಾಗಿ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿಯ ‘ವಿರಾರ್-ನೈಗಾಂವ್ ಶಾಖೆ’ಯ ಸಕ್ರಿಯ ಸದಸ್ಯರಾಗಿ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಸಂತಾಪ ಸಭೆ ಹಾಗೂ ಶೋಕ ಸಂದೇಶ: ನವೀನ್ ಪುತ್ರನ್ ಅವರ ಹಠಾತ್ ನಿಧನಕ್ಕೆ ವಸಾಯಿ ತಾಲೂಕು ಮೊಗವೀರ ಸಂಘದ ಅಧ್ಯಕ್ಷರಾದ ಯಶೋಧರ ಕೋಟ್ಯಾನ್, ಸಂಘದ ಸಮಸ್ತ ಪದಾಧಿಕಾರಿಗಳು ಹಾಗೂ ಸದಸ್ಯರು ತೀವ್ರ ಕಂಬನಿ ಮಿಡಿದಿದ್ದಾರೆ. ಜೊತೆಗೆ, ಮೊಗವೀರ ವ್ಯವಸ್ಥಾಪಕ ಮಂಡಳಿಯ ‘ವಿರಾರ್-ನೈಗಾಂವ್ ಶಾಖೆ’ಯ ಪದಾಧಿಕಾರಿಗಳು ಮತ್ತು ಸದಸ್ಯರು ಮೃತರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಆಳವಾದ ಸಂತಾಪ ಸೂಚಿಸಿದ್ದಾರೆ.



Related posts

ಕಲಾವಿದ, ಜೈ ಕರ್ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯ ಉದಯ ಕುಮಾರ್ ಹೆಜಮಾಡಿ ನಿಧನ

Mumbai News Desk

ಹಿರಿಯ ರಂಗನಟಿ ಚಂದ್ರಪ್ರಭಾ ಸುಧಾಕರ ಉದ್ಯಾವರ ನಿಧನ

Mumbai News Desk

ಖಾಸಗಿ ಹೋಟೆಲ್ ಉದ್ಯೋಗಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕಲ್ಮಾಡಿ ನಿವಾಸಿ ಕೃತಿ ಬಂಗೇರಾ ಆತ್ಮಹತ್ಯೆ

Mumbai News Desk

ಹೆಜಮಾಡಿ: ಆಶಾ ಕಾರ್ಯಕರ್ತೆ, ಧಾರ್ಮಿಕ ಮುಖಂಡೆ ಸರೋಜಿನಿ ಸಂಜೀವ ಮಾಸ್ಟರ್ ನಿಧನ

Mumbai News Desk

ರಂಗಕರ್ಮಿ, ಸಾಹಿತಿ ಪರಮಾನಂದ ವಿ. ಸಾಲ್ಯಾನ್ ಇನ್ನಿಲ್ಲ: ಸಸಿಹಿತ್ಲುವಿನಲ್ಲಿ ಇಂದು ಅಂತಿಮ ದರ್ಶನ

Mumbai News Desk

ಸಾಂತಾಕ್ರೂಜ್ ಪ್ರಭಾತ್ ಕಾಲೋನಿಯ ಸಮಾಜ ಸೇವಕ ಶ್ರೀ ಅಶೋಕ್ ಪೂಜಾರಿ ನಿಧನ

Mumbai News Desk