September 6, 2026
Mumbai News Kannada
ಮುಂಬಯಿ

ಸಾಂತಾಕ್ರೂಸ್   ಶ್ರೀ ಮಂತ್ರ ದೇವಿ ದೇವಸ್ಥಾನದಲ್ಲಿ ಭಕ್ತಿ ಸಂಭ್ರಮದೊಂದಿಗೆ  ವಾರ್ಷಿಕ ಮಹಾಪೂಜೆ .





ಚಿತ್ರ ವರದಿ : ದಿನೇಶ್ ಕುಲಾಲ್ 

ಮುಂಬಯಿ, ಡಿ.28- ಉಪನಗರ ಸಾಂತಾಕ್ರೂಸ್ ಪಶ್ಚಿಮದ ಮಿಲನ್ ಸಬ್ ವೇ ರೋಡ್, ಆಶಾ ಚಾಳ್‌ನಲ್ಲಿ ಮಂತ್ರ ದೇವಿಯ ಆರಾಧಕ, ಧಾರ್ಮಿಕ ಚಿಂತಕ ಕುತ್ಯಾರು ವಾಸುದೇವ ಬಂಜನ್ ಮಾರ್ಗದರ್ಶನದಲ್ಲಿ ಸ್ಥಾಪಿಸಿರುವ ಶ್ರೀಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್, ಆಡಳಿತದ ಶ್ರೀಮಂತ್ರ ದೇವಿ ಕ್ಷೇತ್ರದ ವಾರ್ಷಿಕ ಮಹಾಪೂಜೆಯು ಡಿ.26 ಮಂಗಳ ವಾರ. ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಬೆಳಿಗ್ಗೆ ಶ್ರೀದೇವಿಗೆ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಪರಿವಾರ ದೇವತೆಗಳಿಗೆ ಹೋಮ-ಹವನ, ಅಮ್ಮನವರಿಗೆ ಗದ್ದಿಗೆ ಏರಿಸಿ ಶ್ರೀದೇವಿಯ ಆವೇಶದೊಂದಿಗೆ ಪ್ರಸಾದ ವಿತರಣೆ ನಡೆಯಿತು.

 ಮಹಾಪ್ರಸಾದ ಅನ್ನದಾನ ತಡ ಸಂಜೆವರೆಗೆ ಸಂಜೆ   ನಡೆಯಿತು..

ಬೆಳಿಗ್ಗೆ ಶ್ರೀದೇವಿಯ ಆವೇಶ ನಡೆಯಿತು. ರಾಜೇಶ್ ಕೋಟ್ಯಾನ್ ಮತ್ತು ದಿನೇಶ್ ಕೋಟ್ಯಾನ್ ಬಳಗದವರ  ವಾದ್ಯ ವಲಗ ಸೇವೆ ನಡೆಯಿತು .ದೇವರ ಮಂಟಪವನ್ನು ರಂಗ ವಿನ್ಯಾಸಗಾರ .ಕಲಾವಿದ ಅಶೋಕ್ ಕೊಡ್ಯಡ್ಕ ಯ ಸಿಂಗಾರಿ ಸಿದ್ದರು.

ಈ ಪುಣ್ಯ ಕಾರ್ಯಕ್ರಮದಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ವಿವಿಧ ಜಾತಿಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಿದರು  . ಮೊತ್ತೇಸರರಾದ ವಾಸುದೇವ ಬಂಜನ್ , ಅಧ್ಯಕ್ಷರು, ಟ್ರಸ್ಟಿ, ಮಧ್ಯಸ್ಥರು, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಮತ್ತು ಭಕ್ತರು . ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದೆ



Related posts

ಅನಿತಾ ಪಿ.ತಾಕೊಡೆಯವರಿಗೆ ಚೆಂಬೂರು ಕರ್ನಾಟಕ ಸಂಘ ಕೊಡಮಾಡುವ “ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ”

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಾಚಿ ಭಂಡಾರಿ ಗೆ ಶೇ 93.40 ಅಂಕ.

Mumbai News Desk

ಸಾಂತಾಕ್ರೂಜ್ ಕನ್ನಡ ಸಂಘದ 68ನೇ ವಾರ್ಷಿಕ ಮಹಾಸಭೆ: ಸಮಾಜ ಸೇವೆಗೆ ನಿಸ್ವಾರ್ಥ ಮನೋಭಾವದ ಕರೆ

Mumbai News Desk

ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾ ಮುಂಬಯಿ (ರಿ ) – ವಾರ್ಷಿಕ  ವಿಹಾರಕೂಟ.

Mumbai News Desk

“ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜಿನಲ್ಲಿ ಎರಡು ದಿನ ಪಾರಿತೋಷಕ ವಿತರಣಾ ಸಮಾರಂಭ, ಅಧ್ಯಕ್ಷ ಶ್ರೀ ವಿ. ಎನ್ ಹೆಗಡೆ ಅವರಿಂದ ಕಾಲೇಜಿನ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ”

Mumbai News Desk

ಕರ್ನಾಟಕ ಸಂಘ ಪನ್ವೆಲ್ ಗಣೇಶೋತ್ಸವ, ಸತ್ಯನಾರಾಯಣ ಮಹಾಪೂಜೆ,ಮಾತಾ ಕಿ ಚೌಕಿ, ಭಕ್ತಿ ಸಂಭ್ರಮದೊಂದಿಗೆ ಆಚರಣೆ .

Mumbai News Desk