July 23, 2026
Mumbai News Kannada
ಸುದ್ದಿ

ನಿಟ್ಟೆ ವಿಶ್ವವಿದ್ಯಾಲಯದ   ಮಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯ  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೂಲ್ಕಿ ಜೀವನ್ ಕೆ. ಶೆಟ್ಟಿ  ಆಯ್ಕೆ







ಕಾರ್ಕಳ ಜ 5,   ನಿಟ್ಟೆ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ನಿಟ್ಟೆ  ಮಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯ ಸುಮಾರು 21000 ಸದಸ್ಯರಿದ್ದ ಹಳೆ ವಿದ್ಯಾರ್ಥಿ ಸಂಘ- *Wenamitaa* ಇದರ 2023-25 ಸಾಲಿನ ನೂತನ ಅಧ್ಯಕ್ಷರಾಗಿ ಮೂಲ್ಕಿ ಶ್ರೀ ಜೀವನ್ ಕೆ. ಶೆಟ್ಟಿ ಯವರು ದಿನಾಂಕ 30-12-2023 ರಂದು ನಿಟ್ಟೆ ಸಂಸ್ಥೆಯಲ್ಲಿ  ನಡೆದ   ವಾರ್ಷಿಕ  ಮಹಾಸಭೆಯಲ್ಲಿ ಅವಿರೋಧವಾಗಿ  ಆಯ್ಕೆಯಾಗಿರುತ್ತಾರೆ.

     ಜೀವನ್ ಕೆ. ಶೆಟ್ಟಿ  ಇವರು 1996 ರಲ್ಲಿ Bachelor in Civil Engineer(B.E.) ಹಾಗೂ 2015ರಲ್ಲಿ  Master of Construction Technology (M.Tech) ನಲ್ಲಿ ಪದವಿ ಪಡೆದಿರುತ್ತಾರೆ.   1996ರಿಂದ 1998ರವರೆಗೆ NRAM ಪಾಲಿಟೆಕ್ನಿಕ್ ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಅಸೋಸಿಯೇಷನ್ ಆಫ್ ಸಿವಿಲ್  ಇಂಜಿನಿಯರ್ಸ್ (ACEM) ನ ಸ್ಥಾಪಕಾಧ್ಯಕ್ಷರಾಗಿ, ಇಂಡಿಯನ್ ರೋಡ್ ಕಾಂಗ್ರೆಸ್(IRC) ನವದೆಹಲಿ ಇದರ ಖಾಯಂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ  ಡಾ. ನಿರಂಜನ್ ಚಿಪ್ಲೋಂಕರ್, ಡೈರೆಕ್ಟರ್ ಗಳಾದ  ಯೋಗೀಶ್ ಹೆಗ್ಡೆ,   ಪ್ರಸನ್ನ ಕೈಲಾಜೆ, ಸಂಯೋಜಕರಾದ ಪ್ರೊ. ಜ್ಞಾನೇಶ್ವರ  ಪೈ ಮತ್ತು ಹಲವಾರು ಹಳೆವಿದ್ಯಾರ್ಥಿಗಳು ದೇಶ ವಿದೇಶಗಳಿಂದ ಹಳೆ ವಿದ್ಯಾರ್ಥಿಗಳುಈ ಸಂದರ್ಭದಲ್ಲಿ ಹಾಜರಿದ್ದರು. ನಿಕಟಪೂರ್ವ ಅಧ್ಯಕ್ಷೆ ಪ್ರೊ. ಪ್ರಭಾ ನಿರಂಜನ್ ಅಧಿಕಾರವನ್ನು ಹಸ್ತಾಂತರಿಸಿದರು.

      ಉಪಾಧ್ಯಕ್ಷರಾಗಿ . ಅವಿನಾಶ್ ಕೃಷ್ಣಕುಮಾರ್, ಕಾರ್ಯದರ್ಶಿಯಾಗಿ  ರಂಜಿತ್ ಭಟ್, ಜೊತೆ ಕಾರ್ಯದರ್ಶಿಯಾಗಿ  ಶರತ್ ಮತ್ತು ಖಜಾಂಚಿಯಾಗಿ ಡಾ. ಹರ್ಷಿತಾ ಜತ್ತಣ್ಣ ಇವರು ಆಯ್ಕೆಯಾಗಿರುತ್ತಾರೆ.

.

.

.

.



Related posts

ಕೆಜಿಎಫ್, ಓಂ ಚಿತ್ರದ ಖ್ಯಾತ ನಟ ಹರೀಶ್ ರೈ ಥೈರಾಯ್ಡ್ ಕ್ಯಾನ್ಸರ್ ನಿಂದ ನಿಧನ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ   ನಿರ್ಮಾಣ ಗೊಳ್ಳಲಿರುವ ಸಭಾಭವನದ ಕಾಮಗಾರಿಯ ಕುರಿತ ಸಭೆ 

Mumbai News Desk

ಕರ್ನಾಟಕ : ದಕ್ಷಿಣ ಕನ್ನಡ ಜಿಲ್ಲೆಯಿಂದ ಹಿಂದೂ ಮುಖಂಡ ಅರುಣ್ ಪುತ್ತಿಲ ಅವರಿಗೆ ಗಡಿಪಾರು ನೋಟಿಸ್

Mumbai News Desk

ಚುನಾವಣಾ ಆಯೋಗದಿಂದ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ

Mumbai News Desk

2018 ರ ರೆಮೋ ಡಿಸೋಜಾ ಸುಲಿಗೆ ಪ್ರಕರಣದ ಗ್ಯಾಂಗ್ ಸ್ಟರ್ ರವಿ ಪೂಜಾರಿ ಬಂಧನ

Mumbai News Desk

ಚಿತ್ರದುರ್ಗ ಹೆದ್ದಾರಿಯಲ್ಲಿ ಭೀಕರ ಬಸ್ ಅಪಘಾತ : 17 ಮಂದಿ ಸಜೀವ ದಹನ

Mumbai News Desk