30.9 C
Mumbai
June 8, 2026
Mumbai News Kannada
ಮುಂಬಯಿ

ವಿಶ್ವ ರಂಗ ದಿನಾಚರಣೆ- 2024ರ ಅಂಗವಾಗಿನಾಟಕ ರಚನಾ ಕಮ್ಮಟ ಮತ್ತು ರಂಗ ನಿರ್ದೇಶಕರ ಸಮ್ಮಿಲನ





ಕನ್ನಡ ಕಲಾ ಕೇಂದ್ರ ಮುಂಬೈ ಮತ್ತು ಕನ್ನಡ ವೆಲ್ಫೇರ್ ಸೊಸೈಟಿ (ರಿ)ಯು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ 13/04/ 2024 ರಂದು ಬೆಳಿಗ್ಗೆ 10 ರಿಂದ ವಿಶ್ವ ರಂಗ ದಿನಾಚರಣೆ 2024 ರ ಅಂಗವಾಗಿ ಕನ್ನಡ ವೆಲ್ಫೇರ್ ಸೊಸೈಟಿ (ಪ) ಇಲ್ಲಿ ನಾಟಕ ರಚನಾ ಕಮ್ಮಟ ಹಾಗೂ ರಂಗ ನಿರ್ದೇಶಕರ ಸಮ್ಮಿಲನವನ್ನು ಅದ್ದೂರಿಯಿಂದ ನೆರವೇರಿಸಿತು.

ಬೆಳಿಗ್ಗೆ 10 ಗಂಟೆಗೆ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾದ ಮಧುಸೂದನ್ ಟಿ.ಆರ್ ಹಾಗೂ ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾದ ನವೀನ್ ಶೆಟ್ಟಿ ಇನ್ನ ಬಾಳಿಕೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಸಂಪನ್ಮೂಲ ವ್ಯಕ್ತಿಗಳಾಗಿ ಅಗಮಿಸಿದ ನವೀನ್ ಶೆಟ್ಟಿ ಇನ್ನ ಬಾಳಿಕೆ, ರಂಗ ನಿರ್ದೇಶಕ, ನಾಟಕಕಾರ ಶ್ರೀ ನಾರಾಯಣ ಶೆಟ್ಟಿ, ನಂದಳಿಕೆ, ರಂಗನಟಿ ಶ್ರೀಮತಿ ಸುಧಾ ಶೆಟ್ಟಿ, ಡಾ! ಜಿ. ಪಿ. ಕುಸುಮಾ ಅವರುಗಳು ತಮ್ಮ ಕ್ಷೇತ್ರದ ಅನುಭವವನ್ನು ಹಂಚಿಕೊಂಡರು.

ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಡಾ! ಪ್ರಭು ಅಂಗಡಿ, ಸಾ.ದಯಾ ವಸ್ತು ,ಭಾಷೆ, ಕಾಲ ದೇಶ ,ವಿನ್ಯಾಸ, ನಾಟಕದ ನಡೆ, ಆಶಯ, ಧ್ವನಿ, ಭಾವ, ರಚನಾ ತಂತ್ರ, ಮತ್ತು ವೈಶಿಷ್ಟ್ಯಗಳ ಬಗ್ಗೆ ವಿವರಿಸಿ ನಾಟಕ ರಚನೆ ಸಂದರ್ಭದಲ್ಲಿ ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ನಾಟಕ ಹೇಗೆ ರಚಿಸಬೇಕೆಂದು ವಿವರಿಸಿದರು. ಈ ಬಗ್ಗೆ ಚರ್ಚೆ ನಡೆಯಿತು.

ಬಳಿಕ ನಾಟಕ ರಚನಾ ಕಮ್ಮಟದಲ್ಲಿ ಭಾಗವಹಿಸಿ ನಾಟಕದ ಒಂದು ದೃಶ್ಯ ರಚನೆ ಗೈದ ಅಭ್ಯರ್ಥಿಗಳು ನಾಟಕದ ದೃಶ್ಯವನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿದರು. ತದನಂತರ ಡಾ. ಪ್ರಭು ಅಂಗಡಿ ಮತ್ತು ಶ್ರೀ ಸಾ. ದಯಾ ಅವರುಗಳ ನೇತೃತ್ವದಲ್ಲಿ ಅಭ್ಯರ್ಥಿಗಳು ರಚಿಸಲ್ಪಟ್ಟ ದೃಶ್ಯದ ಪರಿಶೀಲನೆ ಮತ್ತು ಚರ್ಚೆ ನಡೆಯಿತು.
ಅಭ್ಯರ್ಥಿಗಳಿಗೆ ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ನಾಟಕ ರಚನೆ ಮಾಡಲು ಸಮಯಾವಕಾಶವನ್ನು ಒದಗಿಸಲಾಗಿ, ಉತ್ತಮ ರಚನೆಯನ್ನು ಆಯ್ಕೆ ಮಾಡಿ ಕನ್ನಡ ಕಲಾ ಕೇಂದ್ರ ವು ಪ್ರಕಟಿಸುವುದಾಗಿ ಅದರ ಅಧ್ಯಕ್ಷ ರಾದ ಮಧುಸೂದನ್ ಟಿ. ಆರ್. ಅವರು ತಿಳಿಸಿದರು.

ಇದಾದ ಬಳಿಕ ನಡೆದ ನಾಟಕ ನಿರ್ದೇಶಕರ ಸಮ್ಮಿಲನದಲ್ಲಿ ನಾಟಕ ರಂಗದ ಹಿರಿಯ ನಾಟಕಕಾರ ನಟ ಡಾ.ಮಂಜುನಾಥ್, ಶ್ರೀ ಮಂಜುನಾಥ್, ಗುಣಪಾಲ್ ಉಡುಪಿ, ಸುರೇಂದ್ರ ಕುಮಾರ್ ಹೆಗ್ಡೆ, ಭಾಸ್ಕರ್ ಸುವರ್ಣ, ಶ್ರೀಮತಿ ಅಹಲ್ಯ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದು ನಾಟಕ ರಂಗದ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾರಂಭದಲ್ಲಿ ಶ್ರೀಮತಿ ಹರಿಣಿ ಶೆಟ್ಟಿ ಪ್ರಾರ್ಥನೆಗೈದರು. ಕನ್ನಡ ಕಲಾ ಕೇಂದ್ರದ ಕಾರ್ಯದರ್ಶಿ ಶ್ರೀ ರಮೇಶ್ ಬಿರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



Related posts

ಸಾಫಲ್ಯ ಸೇವಾ ಸಂಘ ಮುಂಬಯಿಯ 84ನೇ ವಾರ್ಷಿಕೋತ್ಸವ

Mumbai News Desk

ಗೋವಂಡಿ ಬೈಂಗನ್‌ವಾಡಿ ಶ್ರೀ ದುರ್ಗಾಪರಮೇಶ್ವರಿ ಮಾತಾ ಮಂದಿರದ 46 ನೇ ವಾರ್ಷಿಕೋತ್ಸವ

Mumbai News Desk

ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ  ಯುವ ವಿಭಾಗದ ಅಶ್ರಯದಲ್ಲಿ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ

Mumbai News Desk

ಬೊರಿವಲಿ: ಶ್ರೀ ಜಗದೀಶ್ವರಿ ಮಂದಿರದ ಪುನರ್‌ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಸಮಾಜದ ಮಹಿಳೆಯರಿಗಾಗಿ ಆಯೋಜಿಸಿದ ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ :-

Mumbai News Desk

ಎಚ್ ಎಸ್ ಸಿ ಪರೀಕ್ಷೆಯಲ್ಲಿ ಅನನ್ಯ ಎನ್ ಬಂಗೇರಗೆ ಶೇ.92.40 ಅಂಕ.

Mumbai News Desk