September 6, 2026
Mumbai News Kannada
ಸುದ್ದಿ

ಪಾಣೆಮಂಗಳೂರಲ್ಲಿ ಶ್ರೀನಿವಾಸ ಸಾಫಲ್ಯ ದಂಪತಿಗೆ ಸನ್ಮಾನ 





ಮುಂಬಯಿ : ಪಾಣೆ ಮಂಗಳೂರು ಸುಮಂಗಲ ಸುಮಂಗಲ ಸಭಾಂಗಣದಲ್ಲಿ ವಿಶ್ವ ಗಾಣಿಗರ ಚಾವಡಿ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಮತ್ತು ಕಣ್ಣಿನ ತಪಾಸಣೆ ಶಿಬಿರ ಕಾರ್ಯಕ್ರಮ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮವು ಆ. 11ರಂದು ನಡೆಯಿತು. ಈ ಸಂದರ್ಭದಲ್ಲಿ ’ಗೇನದ ತುಡರ್ ನಿಧಿ ಸಮರ್ಪಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಂಬಯಿಯ ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ. ಸಾಫಲ್ಯ ಮತ್ತು ರಿತಿಕಾ ಶ್ರೀನಿವಾಸ್ ದಂಪತಿಯನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬಂಟ್ವಾಳ ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ ರಾಘು ಸಪಲ್ಯ, ಸುಮಂಗಳ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಗಾಣಿಗರ ಸಂಘದ ಅಧ್ಯಕ್ಷ ಭಾಸ್ಕರ್ ಎಡಪದವು, ಕರಾವಳಿ ಕ್ರೆಡಿಟ್ ಸೊಸೈಟಿಯ ನಿರ್ದೇಶಕಿ ಉಷಾ ಕೇಶವ ಮಳಲಿ, ರಾಮದಾಸ್ ಬಂಟ್ವಾಳ, ಕೇಶವ ದೈಪಲ, ಉಮೇಶ್ ಅರಳ,  ಟ್ರಸ್ಟ್ ನ ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ ಉಪಸ್ಥಿತರಿದ್ದರು.

ಟ್ರಸ್ಟ್ ನ ಕಾರ್ಯದರ್ಶಿ ದೇವಿ ಪ್ರಸಾದ್ ಎಂ ಸ್ವಾಗತಿಸಿದರು, ಉಪಾಧ್ಯಕ್ಷ ಗಣೇಶ್ ಡಿ ಶಂಭೂರು ವಂದಿಸಿದರು. ವಿಜಯಾ ಪೂಯ್ತಾಜೆ ಕಾರ್ಯಕ್ರಮ ನಿರೂಪಿಸಿದರು.



Related posts

ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ, ಬ್ಯಾಂಕೊ ಬ್ಲೂ ರಿಬ್ಬನ್”- 2022- 2023 ಪ್ರಶಸ್ತಿ,

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾಂದಿವಲಿ ‌ ಸ್ಥಳೀಯ ಕಚೇರಿಯ ಕಾರ್ಯಕರ್ತರಿಂದ ದಿ. ನಾಗೇಶ್ ಕೋಟ್ಯಾನ್ ರವರಿಗೆ ಶ್ರದ್ಧಾಂಜಲಿ.

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (09/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಕ್ರೈಸ್ತ ಧರ್ಮದ ಪರಮೋಚ್ಚ ನಾಯಕ ಪೋಪ್ ಫ್ರಾನ್ಸಿಸ್ ನಿಧನ.

Mumbai News Desk

ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ ಅವರನ್ನು ಭೇಟಿಯಾದ ರಾಜೇಂದ್ರ. ವಿ. ಶೆಟ್ಟಿ,

Mumbai News Desk

ಗಂಗಾಧರ್ ಜೆ ಪೂಜಾರಿಯವರ ಪಿತೃರಾದ ಜಾರಪ್ಪ ಪೂಜಾರಿಯವರಿಗೆ ಶ್ರದ್ಧಾಂಜಲಿ

Mumbai News Desk