July 24, 2026
Mumbai News Kannada
ಮುಂಬಯಿ

ಕನ್ನಡ ಸಂಘ ಸಯನ್ ಆಯೋಜನೆಯ ‘ಆಟಿಡೊಂಜಿ ಕೂಟ’ ಯಶಸ್ವಿ ಸಂಪನ್ನ







ಸಂಘದ ಪ್ರಗತಿಗೆ ಒಗ್ಗಟ್ಟಿನ ಶ್ರಮವೇ ಮೂಲಮಂತ್ರ: ಎಂ ಜೆ ಪ್ರವೀಣ್ ಭಟ್

ಕನ್ನಡ ಸಂಘ ಸಯನ್ ಪ್ರಾರಂಭವಾಗಿ ಮೂರು ವರ್ಷಗಳಾಗುತ್ತಾ ಬಂತು. ಸ್ಥಾಪನೆಯದ ಅಲ್ಪಾವಧಿಯಲ್ಲಿ ಬೃಹತ್ ವೈದ್ಯಕೀಯ ಶಿಬಿರ, ಬೃಹತ್ ಉದ್ಯೋಗ ಮೇಳ, ಹಾಗೂ ಇತರ ಅನೇಕ ಯಶಸ್ವೀ ಕಾರ್ಯಕ್ರಮಗಳನ್ನು ಸಂಘ ಆಯೋಜಿಸಿದೆ ಎನ್ನಲು ಸಂತಸವಾಗುತ್ತದೆ. ಈಗ ಸಂಘಕ್ಕೆ 600 ಸದಸ್ಯರ ಬಲವಿದೆ, ಈ ಸಂಖ್ಯೆ ಒಂದು ಸಾವಿರ ಆಗುವಲ್ಲಿ ಎಲ್ಲರೂ ಪ್ರಯತ್ನಿಸ ಬೇಕು. ಅದೇ ರೀತಿ ಸಂಘಕ್ಕೆ ಸ್ವಂತ ಕಚೇರಿಯ ಅಗತ್ಯವಿದ್ದು, ನಮ್ಮ ಸಂಘದ ಸಲಹೆಗಾರರು ರಾಜಕೀಯ ನೇತಾರಾಗಿರುವ ಭಾಸ್ಕರ್ ಶೆಟ್ಟಿ ಅವರು ಈ ಬಗ್ಗೆ ಪ್ರಯತ್ನಿಸಬೇಕು. ಸಂಘದ ಗೌರವಾಧ್ಯಕ್ಷರಾದ ಜಯರಾಮ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಸತೀಶ್ ಶೆಟ್ಟಿ, ದಿನೇಶ್ ಶೆಟ್ಟಿ, ಸಂಸ್ಥಾಪಕ ಹ್ಯಾರಿ ಸಿಕ್ವೇರಾ, ಪದಾಧಿಕಾರಿಗಳಾದ ದಯಾನಂದ ಮೂಲ್ಯ , ಉಮೇಶ್ ಶೆಟ್ಟಿ ಕುಕ್ಕುಂದೂರು, ಜಯಶೀಲ ಮೂಲ್ಯ, ನವೀನ್ ಪೂಜಾರಿ, ಮಹೇಶ್ ಪೂಜಾರಿ ಅವರ ಪರಿಶ್ರಮದಿಂದ ಇಂದಿನ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಂಘದ ಹಿತಕ್ಕಾಗಿ ದುಡಿಯೋಣ ಎಂದು ಎಂ. ಜೆ. ಪ್ರವೀಣ್ ಭಟ್ ನುಡಿದರು.
ಅವರು ಕನ್ನಡ ಸಂಘ ಸಯನ್ ವತಿಯಿಂದ ‘ ಜುಲೈ 19ರಂದು ಸಯನ್ ಮುಖ್ಯ ಅಧ್ಯಾಪಕ ಭವನದ ನಿತ್ಯಾನಂದ ಸಭಾಂಗಣದಲ್ಲಿ ಆಯೋಜಿಸಲಾದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಇದೇ ಸುಸಂದರ್ಭದಲ್ಲಿ ‘ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗ’ದ ಕೊಡುಗೆಯಾದ ‘ಮಂಥನ’ , ಹಾಗೂ ಖ್ಯಾತ ಲೇಖಕಿ ಡಾ. ದಾಕ್ಷಾಯಣಿ ಯಡಹಳ್ಳಿ ಅವರ ‘ಫೀನಿಕ್ಸ್’ ಕೃತಿಗಳನ್ನು ಬಿಡುಗಡೆ ಮಾಡಿದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರದ ಅಧ್ಯಕ್ಷ ಡಾ. ಸುರೇಂದ್ರ ಕುಮಾರ್ ಹೆಗ್ಡೆ , ಅವರು ಮಾತನಾಡುತ್ತಾ “ಮಹತ್ವದ, ವಿಶೇಷವಾದಂತಹ ಅದ್ಭುತ ಪರಿಕಲ್ಪನೆಯ ಹರಿಕಾರರಾದಂತಹ ಹಿರಿಯ ಸಾಹಿತಿ ಡಾ. ಸುನಿತಾ ಶೆಟ್ಟಿ ಅವರ ಆಶೀರ್ವಾದದೊಂದಿಗೆ ಪ್ರಾರಂಭವಾದ ಈ ಸೃಜನಾ ಸಂಸ್ಥೆ ಎಷ್ಟೊಂದು ದೂರದೃಷ್ಟಿತವನ್ನು ಹೊಂದಿದೆ ಎಂದರೆ, ಇಂದು ಸುಮಾರು 60 ಜನ ಮಹಿಳಾ ಸಾಹಿತಿಗಳು, ಕೃತಿಗಾರರು , ಲೇಖಕರು ಇದರಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಒಂದು ಸಂತಸದ ವಿಷಯ. ಇಂದು ಬಿಡುಗಡೆಯಾದ ಕೃತಿಗಳಲ್ಲಿ ಉತ್ತಮ ಸಾಹಿತ್ಯವಿದೆ, ಉತ್ತಮ ಭಾಷೆ ಇದೆ, ಉತ್ತಮ ಭಾವನೆ ಇದೆ, ಕೃತಿಯನ್ನು ಅರ್ಥೈಸಿಕೊಳ್ಳುವಂತಹ ಸಾಮರ್ಥ್ಯವಿದೆ, ಕೃತಿಗಾರರಿಗೆ ಅಭಿನಂದನೆಗಳು” ಎಂದರು.


ಮುಖ್ಯ ಅತಿಥಿ ನಗರ ಸೇವಕ, ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟಿ ಭಾಸ್ಕರ್ ಶೆಟ್ಟಿ ತನ್ನ ಅಭಿಪ್ರಾಯ ತಿಳಿಸುತ್ತಾ “ಸಂಘವು ಮೂರನೇ ವರ್ಷದ ಆಟ ತಿಂಗಳ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಿದೆ. ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಿರು ನಾಟಕ ಎಲ್ಲರ ಮನ ತಲುಪಿದೆ.ವ್ಯಕ್ತಿಗೆ ವಯಸ್ಸಾದಂತೆ ಶಕ್ತಿ ಕಡಿಮೆಯಾಗಬಹುದು, ಆದರೆ ಸಂಘಕ್ಕೆ ವಯಸ್ಸಾದಂತೆ ಅದು ಮತ್ತಷ್ಟು ಶಕ್ತಿಶಾಲಿಯಾಗುತ್ತದೆ. ಆದ್ದರಿಂದ ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ವ್ಯಕ್ತಿಗಿಂತ ‘ಸಂಘ’ವೇ ದೊಡ್ಡದು ಎಂಬ ಭಾವನೆಯಿಂದ ಒಟ್ಟಾಗಿ ಕೆಲಸ ಮಾಡಿ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸೋಣ ಎಂದು ನುಡಿದರು.


ಅತಿಥಿ ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ ಮುಂಬೈಯ ಅಧ್ಯಕ್ಷ ಪ್ರಕಾಶ್ ಮೂಡಬಿದ್ರೆ ತನ್ನ ಅನಿಸಿಕೆ ತಿಳಿಸುತ್ತಾ “ಸಂಘ ಪ್ರಾರಂಭವಾಗಿ ಮೂರು ವರ್ಷ ಆದರೂ ಸಂಘದ ಕಾರ್ಯಚಟುವಟಿಕೆಗಳನ್ನು ಕಂಡು ಅತೀವ ಸಂತಸವಾಯಿತು .ಇಂದಿನ ಕಾರ್ಯಕ್ರಮ ಕೂಡ ಉತ್ತಮ ರೀತಿಯಲ್ಲಿ ಆಯೋಜಿಸಲ್ಪಟ್ಟಿದ್ದು ಸಂಘದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಅಭಿನಂದನಾರ್ಹರು” ಎಂದರು .
ಇನ್ನೋರ್ವ ಅತಿಥಿ ಮೊಡೆಲ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ಹಾಗೂ ಸಿ.ಪಿ .ಟ್ರಾವೆಲ್ಸ ನ ಮಾಲಕ ಕ್ಲೆಮೆಂಟ್ ಲೋಬೋ ಮಾತನಾಡುತ್ತಾ “ನನಗೆ ಇಲ್ಲಿ ಆಹ್ವಾನ ನೀಡಿ ಗೌರವಿಸಿದ್ದಕ್ಕೆ ನಾನು ನಿಮಗೆ ಧನ್ಯವಾದ ಸಲ್ಲಿಸುತ್ತೇನೆ. ಇದಕ್ಕೆಲ್ಲ ಕಾರಣ ನನ್ನ ಮಿತ್ರರಾದ ಹ್ಯಾರಿ ಸಿಕ್ವೇರಾ. ಅವರು ಏಲ್ಲ ಸಮಾಜ ಬಾಂಧವರಲ್ಲಿ ಉತ್ತಮ ಬಾಂಧವ್ಯವನ್ನು ಇಟ್ಟಿದ್ದಾರೆ.ಹಾಗೂ ಎಲ್ಲಾ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ನನ್ನೊಟ್ಟಿಗೆ ಕೊಂಕಣಿಯಲ್ಲೂ ಕೂಡ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಅವರು ನಮಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅತೀವ ಸಂತಸವಾಯಿತು” ಎಂದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಮನಿಲದಲ್ಲಿ ನಡೆದ ಮೈಲ್ ಸ್ಟೋನ್ ಗ್ಲೋಬಲ್ ಅವಾರ್ಡ್ ಸಮಾರಂಭದಲ್ಲಿ 50ನೇ ಗ್ಲೋಬಲ್ ವುಮೆನ್ ಆಚಿವರ್ಸ್ ಪ್ರಶಸ್ತಿ ಪಡೆದ ಪ್ರಭಾ ಸುವರ್ಣ ಅವರನ್ನು ಸನ್ಮಾನಿಸಲಾಯಿತು . ಸಂಘದ ಗೌರವ
ಸಂಘದ ಗೌರವಾಧ್ಯಕ್ಷರಾದ ಜಯರಾಮ್ ಶೆಟ್ಟಿ ಪ್ರಾರಂಭದಲ್ಲಿ ಎಲ್ಲರನ್ನು ಸ್ವಾಗತಿಸುತ್ತಾ “ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ನಾವೆಲ್ಲ ಒಟ್ಟಾಗಿರುವುದೇ ಒಂದು ಸಂತಸದ ವಿಷಯ. ನಮ್ಮ ಸಂಘವು ಸ್ಥಾಪನೆಯಾದ ಉದ್ದೇಶಕ್ಕನುಸಾರವಾಗಿ ಕಾರ್ಯವೆಸಗುತ್ತಿದೆ. ಇಂದು ಸಭಾಗ್ರಹವು ಕಿಕ್ಕರಿದು ತುಂಬಿದ್ದು, ಇದಕ್ಕೆ ನೀವೆಲ್ಲರೂ ಸಂಘದ ಮೇಲೆ ಇಟ್ಟ ಅಭಿಮಾನವೆ ಕಾರಣ , ಮುಂದಕ್ಕೂ ಎಲ್ಲರ ಬೆಂಬಲದೊಂದಿಗೆ ಸಂಘವನ್ನು ಬಲಿಷ್ಠ ಗೊಳಿಸೋಣ ಎಂದು ನುಡಿದರು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ದಯಾನಂದ್ ಬಿ ಮೂಲ್ಯ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ”ನಮ್ಮ ಸಂಘವು ಪ್ರಾರಂಭವಾಗಿ 3 ವರ್ಷಗಳಾಗುತ್ತಿದೆ ,ಪ್ರತಿ ವರ್ಷವೂ ವಾರ್ಷಿಕೋತ್ಸವ, ಆಟಿಡ್ ಒಂಜಿ ಕೂಟ, ತಾಳ ಮದ್ದಲೆ , ಹಳದಿ ಕುಂಕುಮ ಕಾರ್ಯಕ್ರಮವನ್ನು ಆಚರಿಸುತ್ತಾ ಬರುತ್ತಿದ್ದೇವೆ,ಕಳೆದ ವರ್ಷ ಬೃಹತ್ ವೈದ್ಯಕೀಯ ಶಿಬಿರ, ಬೃಹತ್ ಉದ್ಯೋಗ ಮೇಳ ಹಾಗೂ ಇತರ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿ ಮುಂಬೈ ಕನ್ನಡಿಗರ ಗಮನ ಸೆಳೆದಿದೆ ಎನ್ನಲು ಸಂತಸವಾಗುತ್ತಿದೆ,ಜನವರಿ 24 ರಂದು ಜರಗಿದ 2 ನೇ ವರ್ಷದ ವಾರ್ಷಿಕ ಸಮಾರಂಭದಂದು ಧಾರಾವಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಕೂಡ ನೀಡಿದ್ದೇವೆ. ಸಂಘದ ಮುಂದಿನ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಎಲ್ಲರ ಸಹಕಾರವಿರಲಿ” ಎಂದರು.
ಅತಿಥಿ, ಉದ್ಯಮಿ ರವಿ ಶೆಟ್ಟಿ, ಸಂಘದ ಉಪಾಧ್ಯಕ್ಷರುಗಳಾದ ದಿನೇಶ್ ಶೆಟ್ಟಿ, ಸತೀಶ್ ಶೆಟ್ಟಿ(ಲಕ್ಷ್ಮಿ ಕ್ಯಾಟರ್ಸ್), ಗೌರವ ಕೋಶಾಧಿಕಾರಿ ಸುರೇಶ್ ಶೆಟ್ಟಿ ವೇದಿಕೆಯಲ್ಲಿದ್ದರು. ಮಾಲ ಮೇಸ್ತ ಕಾರ್ಯಕ್ರಮ ನಿರೂಪಿಸಿದರೆ , ಸಂಘದ ಸಂಸ್ಥಾಪಕ ಹ್ಯಾರಿ ಸಿಕ್ವೇರಾ ಕೊನೆಯಲ್ಲಿ ಧನ್ಯವಾದ ನೀಡಿದರು.
ಸೃಜನಾದ ಕಾರ್ಯದರ್ಶಿ ಲತಾ ಸಂತೋಷ ಶೆಟ್ಟಿ ಹಾಗೂ ಸಂಚಾಲಕಿ ಪದ್ಮಜಾ ಮಣ್ಣೂರ , ಕೃತಿಗಾರ್ತಿ ಡಾ.ದಾಕ್ಷಾಯಣಿ ಯಡಹಳ್ಳಿ, ಲೇಖಕಿಯರುಗಳಾದ ಸರೋಜಾ ಅಮಾತಿ, ಶಶಿಕಲಾ ಹೆಗ್ಡೆ , ಶೈಲಜಾ ಹೆಗ್ಡೆ ಮತ್ತು ಸದಸ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಸತೀಶ್ ಶೆಟ್ಟಿ ಅವರ ಲಕ್ಷ್ಮಿ ಕ್ಯಾಟರಸ್ ಅವರು ತಯಾರಿಸಿದ ತುಳುನಾಡಿನ ವಿಶೇಷ ಖಾದ್ಯ – ಪದಾರ್ಥಗಳ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸಂಘದ ಹರಿ ಓಂ ಭಜನಾ ಮಂಡಳಿಯ ಸದಸ್ಯರಿಂದ ಸುಮಧುರ ಭಜನಾ ಸಂಧ್ಯಾದೊಂದಿಗೆ ಒಟ್ಟು ಕಾರ್ಯಕ್ರಮ ಪ್ರಾರಂಭಗೊಂಡಿತು.ತದನಂತರ ಸಂಘದ ಪ್ರತಿಭಾವಂತ ಸದಸ್ಯರು ಹಾಗೂ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಲಾ ವೈಭವ ಪ್ರದರ್ಶನಗೊಂಡಿತು . ಸಂಸ್ಕೃತಿಯ ಸಮಿತಿಯ ಕಾರ್ಯಧ್ಯಕ್ಷ ಚಂದ್ರ ದೇವಾಡಿಗ ಹಾಗೂ ಮಾಲ ಮೇಸ್ತ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು. ತ್ರಿವೇಣಿ ಶೆಟ್ಟಿ ಹಾಗೂ ಕುಮಾರಿ ರಿತಿಕಾ ಶೆಟ್ಟಿ ಅವರ ಆಟಿ ಕಳಂಜ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.ಸಂಸ್ಥಾಪಕ ಹ್ಯಾರಿ ಸಿಕ್ವೇರ, ಕಾರ್ಯದರ್ಶಿ ದಯಾನಂದ ಮೂಲ್ಯ , ಕೋಶಾಧಿಕಾರಿ ಸುರೇಶ್ ಶೆಟ್ಟಿ, ಜೊತೆ ಕೋಶಾಧಿಕಾರಿ ಚಂದ್ರಿಕಾ ಶೆಟ್ಟಿ , ಜೊತೆ ಕಾರ್ಯದರ್ಶಿಗಳಾದ ಜಯಶೀಲ ಮೂಲ್ಯ, ಉಮೇಶ್ ಶೆಟ್ಟಿ ಕುಕ್ಕುಂದೂರು, ನವೀನ್ ಪೂಜಾರಿ ,ಕಾರ್ಯಕಾರಿ ಸಮಿತಿಯ ಚಂದ್ರ ದೇವಾಡಿಗ, ಮಹೇಶ್ ಪೂಜಾರಿ, ತ್ರಿವೇಣಿ ಶೆಟ್ಟಿ, ಶೋಭಾ ಶೆಟ್ಟಿ, ವಿನೀತ ಗೌಡ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



Related posts

ಶ್ರೀ ಮಹಾವಿಷ್ಣು ಮಂದಿರದಲ್ಲಿ 48ನೇ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನೆ ಯಶಸ್ವಿ ಸಂಪನ್ನ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ದಿವ್ಯ ಮೂರ್ತಿಯ ವಿಸರ್ಜನಾ ಮೆರವಣಿಗೆ

Mumbai News Desk

ಮುಂಬಯಿ : ಏನ್ ಸಿ ಪಿ ಮುಖಂಡ ಬಾಬಾ ಸಿದ್ಧಿಕ್ ಅವರನ್ನು ಗುಂಡಿಕ್ಕಿ ಹತ್ಯೆ

Mumbai News Desk

ಸಾಂತಾಕ್ರೂಸ್   ಶ್ರೀ ಮಂತ್ರ ದೇವಿ ದೇವಸ್ಥಾನದಲ್ಲಿ ಭಕ್ತಿ ಸಂಭ್ರಮದೊಂದಿಗೆ  ವಾರ್ಷಿಕ ಮಹಾಪೂಜೆ .

Mumbai News Desk

ಮಲಾಡ್   ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆಯ 12ನೇ ವಾರ್ಷಿಕ ಮಹಾಪೂಜೆ

Mumbai News Desk

ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ವಿಜ್ರಂಭಣೆಯ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk