32 C
Mumbai
September 27, 2026
Mumbai News Kannada
ಸುದ್ದಿ

ವಿಶ್ವ ಧಾರ್ಮಿಕ ನಾಯಕರ ಸಮಾವೇಶದಲ್ಲಿ ಪೂಜ್ಯ ಶ್ರೀ ಪುತ್ತಿಗೆ ಶ್ರೀಗಳ ದಿಕ್ಸೂಚಿ ಭಾಷಣ ಹಾಗೂ ಮಾರಿಷಸ್ ಅಧ್ಯಕ್ಷರಿಂದ ಗೌರವದ ಸ್ವಾಗತ



ಮಾರಿಷಸ್ ದೇಶದಲ್ಲಿ ನಡೆಯಲಿರುವ ಮೂರು ದಿನದ ವಿಶ್ವ ಧಾರ್ಮಿಕ ನಾಯಕರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಉಡುಪಿ ಶ್ರೀ ಪುತ್ತಿಗೆ ಮಠದ ಪೀಠಾಧೀಶರಾದ ಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಮಾರಿಷಸ್ ದೇಶದ ಅಧ್ಯಕ್ಷರಾದ ಧರಮ್ ಬೀರ್ ಗೋಕುಲ್ ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ಸುಮಾರು ಎಂಬತ್ತಕ್ಕೂ ಅಧಿಕ ದೇಶಗಳಿಂದ ಆಗಮಿಸಿರುವ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳ ನಾಯಕರ ಸಮ್ಮುಖದಲ್ಲಿ ಜಾಗತಿಕ ಮಟ್ಟದ ಪ್ರಮುಖ ಸಮಕಾಲೀನ ಸವಾಲುಗಳೆನಿಸಿರುವ “ಹವಾಮಾನ ವೈಪರಿತ್ಯ, ಸಂಘರ್ಷ ಮತ್ತು ಋಣಭಾರ” ಎಂಬ ವಿಷಯದ ಕುರಿತು ಪೂಜ್ಯ ಶ್ರೀ ಪುತ್ತಿಗೆ ಶ್ರೀಗಳು ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ವಿಶ್ವದ ವಿವಿಧ ದೇಶಗಳ ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.



Related posts

ದುಬೈನಲ್ಲಿ 21 ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿದ ತೀಯಾ ಸಮಾಜ ಫ್ಯಾಮಿಲಿ.

Mumbai News Desk

ನ್ಯಾಯವಾದಿ ಬಿ. ಕೆ. ಸದಾಶಿವ ನೋಟರಿ ಪಬ್ಲಿಕ್ ಆಗಿ ನೇಮಕ

Mumbai News Desk

ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್

Mumbai News Desk

2023-24 ನೇ ಸಾಲಿನ ಎಚ್ ಎಸ್ ಸಿ ಪರೀಕ್ಷೆ ಯಲ್ಲಿ ನಿಶಾ ಸುಂದರ ಪೂಜಾರಿ 82.16%

Mumbai News Desk

ಮಹಾರಾಷ್ಟ್ರ, ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ : ನ. 20 ರಂದು ರಾಜ್ಯದಲ್ಲಿ ಮತದಾನ

Mumbai News Desk

ಭವಾನಿ ಗಿರಿಯಾ ಪೂಜಾರಿ (ಭವಾನಿ ಟೀಚರ್) ನಿಧನ

Mumbai News Desk