ನವಿ ಮುಂಬೈ (ಸೆ. 12): ಇಲ್ಲಿನ ಘನ್ಸೋಲಿಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕುಣಿತ ಭಜನಾ ಸ್ಪರ್ಧೆಯಲ್ಲಿ ಶ್ರೀ ರಜಕ ಸಂಘ ಮುಂಬೈ (ಡೊಂಬಿವ್ಲಿ ವಲಯ)ದ ಯುವ ಘಟಕವು ಪ್ರಥಮ ಬಹುಮಾನ ಪಡೆದು ಸಾಧನೆ ಗೈದಿದೆ.
ಶನಿವಾರ ನಡೆದ ಈ ಸ್ಪರ್ಧೆಯಲ್ಲಿ ವಿವಿಧ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು. ಅದ್ಭುತ ಪ್ರದರ್ಶನ ನೀಡಿದ ಎಸ್ಆರ್ಎಸ್ ಮುಂಬೈ ಯುವ ಘಟಕದ ತಂಡವು, ಪ್ರೇಕ್ಷಕರ ಹಾಗೂ ತೀರ್ಪುಗಾರರ ಅಪಾರ ಮೆಚ್ಚುಗೆ ಗಳಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ವಿಜೇತ ತಂಡಕ್ಕೆ ಮಾರ್ಗದರ್ಶಿ ಡಾ. ಅಣ್ಣಿ ಡಿ. ಶೆಟ್ಟಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಬಹುಮಾನ ವಿತರಿಸಿ ಗೌರವಿಸಿದರು.

ವಿಜೇತ ತಂಡದ ಸದಸ್ಯರು:
- ಸಾಹಿಲ್ ಎಚ್. ಮಡಿವಾಳ
- ಶ್ರೀಜಿತ್ ಜೆ. ಕುಂದರ್
- ರೋಹನ್ ಆರ್. ಸಾಲ್ಯಾನ್
- ನಿಶಾಂತ್ ಎಚ್. ಕುಂದರ್
- ರೀತ್ ಆರ್. ಕುಂದರ್
- ಸಾಕ್ಷಿ ಎಸ್. ಕುಂದರ್
- ಮಹಿಕಾ ಜಿ. ನಿಡುವಜೆ
- ಪೂರ್ಣಿಮಾ ಆರ್. ಕುಂದರ್
- ಲಾಸ್ಯ ಜೆ. ಬಂಗೇರ
- ಸಾನಿಕಾ ಎಚ್. ಮಡಿವಾಳ
ತಂಡಕ್ಕೆ ಶ್ರೀಮತಿ ಗೀತಾ ಬಿ. ಸಾಲ್ಯಾನ್, ಶ್ರೀಮತಿ ಉಷಾ ನಾರಾಯಣ ಸಾಲ್ಯಾನ್ ಹಾಗೂ ಶ್ರೀಮತಿ ಶಾಂತಿ ಎಚ್. ಮಡಿವಾಳ ಹಿನ್ನೆಲೆ ಗಾಯನದಲ್ಲಿ ಮತ್ತು ಶ್ರೀ ಮಹೇಶ್ ಕುಂದರ್ ಹಾರ್ಮೋನಿಯಂ ವಾದನದಲ್ಲಿ ಸಾಥ್ ನೀಡಿದರು.
ಯುವ ಪೀಳಿಗೆಯಲ್ಲಿ ಸಾಂಪ್ರದಾಯಿಕ ಕಲೆ ಹಾಗೂ ಭಕ್ತಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಘಟಕದ ಈ ಗೆಲುವು ಮಹತ್ವದ ಮೈಲಿಗಲ್ಲಾಗಿದೆ ಎಂದು ಸಂಘದ ಮುಖಂಡರು ಶ್ಲಾಘಿಸಿದ್ದಾರೆ. ಎಸ್ಆರ್ಎಸ್ ಮುಂಬೈನ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿತೈಷಿಗಳು ವಿಜೇತ ಯುವ ಪ್ರತಿಭೆಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.




