35 C
Mumbai
October 3, 2026
Mumbai News Kannada
ಪ್ರಕಟಣೆ

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಜ. 5ರಂದು ವಾರ್ಷಿಕ ಸ್ನೇಹ ಮಿಲನ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ



ಮುಂಬಯಿ : ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್ ಸ್ಥಳಿಯ ಸಮಿತಿ ವತಿಯಿಂದ ಜ. 5ರಂದು ಬೆಳಿಗ್ಗೆ 9 ರಿಂದ ನಂದಾದೀಪ ವಿದ್ಯಾಲಯ, ಭಾನುಬೆನ್ ನಾನಾವಟಿ ಕಾಲಾಘರ್, ಜಯಪ್ರಕಾಶ್ ನಗರ ರೋಡ್ ನಂಬ್ರ 4, ಗೋರೆಗಾಂವ್ ಪೂರ್ವ, ಮುಂಬಯಿ ಇಲ್ಲಿ ಸ್ಥಳೀಯ ಸಮಿತಿಯ 8 ನೇ ವಾರ್ಷಿಕ ಸ್ನೇಹ ಮಿಲನ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಾಲ ಸಂಘ ಮುಂಬಯಿ ಯ ಅಧಕ್ಷರಾದ ರಘು ಎ. ಮೂಲ್ಯ ಪಾದೆಬೆಟ್ಟು ವಹಿಸಲಿದ್ದು, ಚರ್ಚ್ ಗೇಟ್ – ದಹಿಸರ್ ಸಮಿತಿ ಕಾರ್ಯಾಧ್ಯಕ್ಷ ಆನಂದ ಕೆ. ಕುಲಾಲ್ ಇವರ ನೇತೃತ್ವದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಸಂತಾಕ್ರೂಸ್ ಶ್ರೀ ಮಂತ್ರದೇವಿ ಮಂದಿರದ ಧರ್ಮದರ್ಶಿ ವಾಸುದೇವ ಬಂಜನ್ ಇವರು ಆಶೀರ್ವಚನ ನೀಡಲಿರುವರು.

ಗೌರವ ಅತಿಥಿಗಳಾಗಿ ಕರ್ನಾಟಕ ಸಮಾಜ ಸೂರತ್ ಇದರ ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ ಕೆ, ಉದ್ಯಮಿ, ಕುಲಾಲ ಭವನ ನಿರ್ಮಾಣ ಸಮಿತಿಯ ಉಪಕಾರ್ಯಾಧ್ಯಕ್ಷ ಸುನಿಲ್ ಆರ್. ಸಾಲ್ಯಾನ್, ಮುಂಬಯಿ, ಜೈದೀಪ್ ಕನ್ಸ್ಟ್ರಕ್ಷನ್ ಅಂಬರ್ ನಾಥ್ ಇದರ ಮಾಲಕರಾದ ಜಗದೀಶ್ ಆರ್ ಭಂಜನ್, ಸಮಾಜ ಸೇವಕಿ ಶ್ರೀಮತಿ ಕುಸುಮ ಎಂ ಬಂಜನ್ ಮಾಟುಂಗಾ, ಜ್ಯೋತಿ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ದೇವದಾಸ್ ಬಂಜನ್ ಬೋರಿವಲಿ, ಸಾಯಿದೀಪ್ ಅಸೋಸಿಯೇಟ್ಸ್ ನ ಯೋಗೇಶ್ ಕುಮಾರ್ ಮೂಲ್ಯ ಮಲಾಡ್, ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಇರಾನಿ ಕೋಲನಿ ಮಲಾಡ್ ಅಧ್ಯಕ್ಷರಾದ ಮೋಹನ್ ಜಿ ಬಂಗೇರ, ನಿತ್ಯಾನಂದ ಡೈಸ್ ನ ಶ್ರೀಧರ ಮೂಲ್ಯ ಗೋರೆಗಾಂವ್, ಆರ್ಯ ಲೇಕ್ ಕೆಮಿಕಲ್ಸ್ನ ಮಾಲಕ ಪ್ರಸಾದ್ ಮೂಲ್ಯ ನವಿ ಮುಂಬಯಿ ಆಗಮಿಸಲಿರುವರು.

ಈ ಸಂದರ್ಭದಲ್ಲಿ ಸಂಘದ ಸಮಿತಿಯ ಮಾಜಿ ಸದಸ್ಯ ಹಾಗೂ ದಾನಿ ದಿ. ಸದಾನಂದ್ ಜೆ ಪಿಲಾರ್ ಇವರ ಪರವಾಗಿ ಶ್ರೀಮತಿ ಸುಂದರಿ ಜೆ ಪಿಲಾರ್, ಮಲಾಡ್, ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಇರಾನಿ ಕೋಲನಿ ಮಲಾಡ್ ನ ಭುವಾಜಿ ನಾರಾಯಣ್ ಸಿ ಸಾಲಿಯಾನ್, ಗೋರೆಗಾಂವ್, ಸಮಾಜ ಸೇವಕ ನಾರಾಯಣ್ ಸಾಲಿಯಾನ್ ಕಾಂದಿವಲಿ, ಯುವ ಮುಂದಾಳು ಹರೀಶ್ ಕೆ ಬಂಗೇರ ಗೋರೆಗಾಂವ್, ಜನಪ್ರಿಯ ಮೇಕಪ್ ಡಿಸೈನರ್ ಚಿದಾನಂದ್ ಕುಲಾಲ್ ಮಲಾಡ್, ಕ್ರೀಡಾಪಟುಗಳಾದ ಕುಮಾರಿ ದೈಯಿತಾ ಹರೀಶ್ ಬಂಗೇರ ಗೋರೆಗಾಂವ್ ಮತ್ತು ಕುಮಾರಿ ದೃಶಿಕಾ ಸತೀಷ್ ಬಂಗೇರ ದಹಿಸರ್ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು.

ಸಮಿತಿಯ ಸದಸ್ಯರು ಮತ್ತು ಸದಸ್ಯರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕಾಗಿ ಕುಲಾಲ ಸಂಘ ಮುಂಬಯಿ ಪರವಾಗಿ ಗೌರವಾಧ್ಯಲ್ಷ ಪಿ. ದೇವದಾಸ ಎಲ್ ಕುಲಾಲ್, ಉಪಾಧ್ಯಕ್ಷ ಡಿ. ಐ. ಮೂಲ್ಯ, ಗೌ. ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ ಸಾಲ್ಯಾನ್, ಗೌ. ಕೋಶಾಧಿಕಾರಿ ಜಯ ಎಸ್. ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್ ಚರ್ಚ್ ಗೇಟ್ – ದಹಿಸರ್ ಪ್ರಾದೇಶಿಕ ಸಮಿತಿಯ ಪರವಾಗಿ, ಉಪಾಧ್ಯಕ್ಷ ಅರುಣ್ ಡಿ ಬಂಗೇರ , ಕಾರ್ಯದರ್ಶಿ ಸತೀಶ್ ಬಿ ಬಂಗೇರ , ಕೋಶಾಧಿಕಾರಿ ಮುಂಡಪ್ಪ ಮೂಲ್ಯ , ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಆಶಾಲತಾ ಎಸ್ ಮೂಲ್ಯ , ಉಪಕಾರ್ಯಧ್ಯಕ್ಷೆ ರತ್ನ ಡಿ.ಕುಲಾಲ್ , ಕಾರ್ಯದರ್ಶಿ ಆರತಿ ಕೆ.ಸಾಲಿಯಾನ್ , ಕೋಶಾಧಿಕಾರಿ ಭಾರತಿ ಪಿ. ಅರ್ಕ್ಯಾನ್ ಹಾಗೂ ಇತರ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಸಲಹಾ ಸಮಿತಿ ಹಾಗೂ ಯುವ ವಿಭಾಗದ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.



Related posts

ಮಾರ್ಚ್ 26-27ರಂದು ಕಾಪುವಿನ 3 ಮಾರಿಗುಡಿಯಲ್ಲಿ ‘ಕಾಲವಧಿ ಸುಗ್ಗಿ ಮಾರಿಪೂಜೆ’

Mumbai News Desk

ಎ. 12 ರಿಂದ 18 ರ ವರಗೆ ಶ್ರೀ ಕ್ಷೇತ್ರ ಉಂಡಾರು ಶ್ರೀವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಾರ್ಷಿಕ ಉತ್ಸವ.

Mumbai News Desk

ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್: ಡಿ.16ರಂದು ವಾರ್ಷಿಕ ಮಹಾಪೂಜೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಎ. 27ಕ್ಕೆ ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿ ಲೋಕಾರ್ಪಣೆ

Mumbai News Desk

ಜ. 31 ರಂದು ಗೋರೆಗಾಂವ್ ಕರ್ನಾಟಕ ಸಂಘ, ಮುಂಬೈ: ಗ್ರಂಥಾಯನ ವಿಭಾಗ’ದ ಆಶ್ರಯದಲ್ಲಿ ಎರಡು ಕೃತಿಗಳ ಬಿಡುಗಡೆ

Mumbai News Desk

ಜಗಜ್ಯೋತಿ ಕಲಾವೃಂದದಿಂದ ಮಹಿಳೆಯರಿಗಾಗಿ ಅಖಿಲ ಭಾರತ ಮಟ್ಟದ ಕಥಾ ಮತ್ತು ಕವಿತಾ ಪ್ರಶಸ್ತಿ ಸ್ಪರ್ಧೆ ಆಹ್ವಾನ

Mumbai News Desk