September 6, 2026
Mumbai News Kannada
ಸುದ್ದಿ

ಮೂಲ್ಕಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಖ್ಯಾತ ನಾದಸ್ವರ ವಾದಕ ನಾಗೇಶ್ ಬಪ್ಪನಾಡು ಅವರಿಗೆ ಆದ್ಯಾತ್ಮಿಕ ಗುರು ಶ್ರೀ ಚಂದ್ರಶೇಖರ್ ಸ್ವಾಮೀಜಿ ಅವರಿಂದ ಗೌರವ.





ಶ್ರದ್ಧೆ,ನಿಷ್ಠೆ,ಗುರು – ಹಿರಿಯರ ಭಕ್ತಿಯಿಂದ ವಿದ್ವಾನ್ ನಾಗೇಶ್ ಬಪ್ಪನಾಡು ಅವರ ಅವಿರಥ ಸಾಧನೆ ಅಭಿನಂದನೆಯ – ಶ್ರೀ ಚಂದ್ರಶೇಖರ್ ಸ್ವಾಮೀಜಿ

ಮುಲ್ಕಿ ಆಕಾಶವಾಣಿಯ ಅತ್ಯುನ್ನತ ಶ್ರೇಣಿಯ ಗೌರವಕ್ಕೆ ಪಾತ್ರರಾದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿದ್ವಾನ್ ನಾಗೇಶ್ ಬಪ್ಪನಾಡು ಅವರನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು, ಅಂತರಾಷ್ಟ್ರೀಯ ವಾಸ್ತು ತಜ್ಞ ಶ್ರೀ ಚಂದ್ರಶೇಖರ್ ಸ್ವಾಮೀಜಿ ಅವರು ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀ ಚಂದ್ರಶೇಖರ್ ಸ್ವಾಮೀಜಿ ಮಾತನಾಡಿ “ಶ್ರದ್ಧೆ, ನಿಷ್ಠೆ, ಗುರು – ಹಿರಿಯರಲ್ಲಿ ಭಕ್ತಿ ಇದ್ದರೆ ಜೀವನದಲ್ಲಿ ಸಾಧಕರಾಗಲು ಸಾಧ್ಯ ಎಂಬುದಕ್ಕೆ ವಿದ್ವಾನ್ ನಾಗೇಶ್ ಬಪ್ಪನಾಡು ಅವರ ಅವಿರತ ಸಾಧನೆ ಸಾಕ್ಷಿ” ಎಂದು ಹೇಳಿ “ಸಾಧನೆ ನಿರಂತರವಾಗಿ ನಡೆದು ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಲಿ” ಎಂದು ಶುಭ ಕೋರಿದರು.
ಗೌರವ ಸ್ವೀಕರಿಸಿದ ನಾಗೇಶ್ ಬಪ್ಪನಾಡು ಅವರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹದಿಂದ ನಾದಸ್ವರ ವಾದಕರಾಗಿ ಮುಂದೆ ಅದರಲ್ಲಿ ಉನ್ನತ ಸ್ಥಾನವನ್ನು ಕರುಣಿಸಿ ಸಮಾಜದಲ್ಲಿ ನನ್ನ ನಾದಸ್ವರ ವಾದನವನ್ನು ಬಹಳ ಜನ ಮೆಚ್ಚಿ ನನಗೆ ಅಭಿನಂದನೆಗಳನ್ನು ಕೊಡುತ್ತಾ ಬಂದಿದ್ದಾರೆ. ಅದರಂತೆ ಈ ದಿನ ನನ್ನ ಆತ್ಮೀಯರಾದ ಅಂತಾರಾಷ್ಟ್ರೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ್ ಸ್ವಾಮೀಜಿ ಅವರು ನನಗೆ ಗೌರವವನ್ನು ಮಾಡಿರುವುದು ಬಹಳ ಸಂತೋಷವಾಯಿತು, ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭ ಮಾತೃ ಶ್ರೀ ಶಾರದಮ್ಮ ಗೋವಿಂದ ಭಟ್, ಜ್ಯೋತಿಷಿ ಉಷಾ ವಿಶ್ವನಾಥ್ ಭಟ್, ಶ್ರೀ ಚಂದ್ರಶೇಖರ್ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್, ಸಂಚಾಲಕರಾದ ಪುನೀತ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.



Related posts

ಶ್ರದ್ಧಾಂಜಲಿ: ದಿನೇಶ್ ಆನಂದ್ ಹೆಗ್ಡೆ ಅವರ ನಿಧನ

Mumbai News Desk

ದುಬಾಯಿಯಲ್ಲಿ ಸಾಧಕರಿಗೆ ಸಂಮಾನದ ಜೊತೆ ದಶಮಾನದ ಸಂಭ್ರಮಜೂ.29 ರಂದು ಏಳು ಮಂದಿ ಸಾಧಕರಿಗೆ ಸನ್ಮಾನ ಮೂರು ಸಾಧಕ ಸಂಸ್ಥೆಗಳಿಗೆ ಗೌರವ

Mumbai News Desk

ಮುಲ್ಕಿಯ ಜನಪ್ರಿಯ ಡ್ರೈ ಫ್ರುಟ್ಸ್ ಸ್ಟೋರ್, ಕ್ಯಾನ್ ಕೋಸ್ (KANCOS)ವತಿಯಿಂದ “ಗಿವ್ ಅವೇ” ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ಪ್ರಶಸ್ತಿ ಸ್ವೀಕರಿಸಿದ ಫೂಲ್‌ಬಸನ್ ಬಾಯಿ ಯಾದವ್ ಆಶಯ : ಅಹಂ, ಆಸೆಯಿಂದ ಕೇಡು; ಕರ್ಮ ಒಳಿತಿನ ಬೀಡು

Mumbai News Desk

ಸಾಂತಾಕ್ರೂಜ್ ಪೂರ್ವ: ಸಿ ಎ ಸುನಿಲ್ ಶೆಟ್ಟಿ ನಿಧನ.

Mumbai News Desk

ಕಲಾಪೋಷಕ .ಉದ್ಯಮಿ ಕೆ.ಕೆ. ಶೆಟ್ಟಿ ಅಹ್ಮದ್ ನಗರರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ.

Mumbai News Desk