30 C
Mumbai
September 29, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಷನ್ ಮುಂಬಯಿ : ಮೀರಾರೋಡ್ ಸಮಿತಿವತಿಯಿಂದ ಧಾರ್ಮಿಕ ಯಾತ್ರೆ



ಬಿಲ್ಲವರ ಅಸೋಸಿಯೇಷನ್ ಮುಂಬಯಿ ಮೀರಾರೋಡು ಸ್ಥಳೀಯ ಸಮಿತಿಯ ಧಾರ್ಮಿಕ ಯಾತ್ರೆ ಉಜ್ಜನಿಯ ಪವಿತ್ರ ಸ್ಥಳಗಳಿಗೆ ಜೂ 27ರಂದು ಜರಗಿತು. ಎರಡು ದಿನಗಳ ಕಾಲ ನಡೆದ ಈ ತಂಡದಲ್ಲಿ ಮಕ್ಕಳು ಸ್ತ್ರಿ ಮತ್ತುಪುರುಷರು ಸೇರಿದಂತೆ ಒಟ್ಟಿಗೆ 49 ಮಂದಿ ಪಾಲ್ಗೊಂಡರು.

ಉಜ್ಜಯನಿಯ ಮಹಾಂಕಾಳೇಶ್ವರ ಜ್ಯೋತಿರ್ಲಿಂಗ , ಕಾಲಿಕಾ ದೇವಿ ಮಂದಿರ, ಬಡಾ ಗಣಪತಿ ವಿಕ್ರಮ್ ತಿಲಾ ಭಾರತ್ ಮತಾಮಂದಿರ, ಶನಿಮಂದಿರ, ವಸ್ತು ಸಂಗ್ರಹಲಾಯವನ್ನು ಇತ್ಯಾದಿ ಸ್ಥಳಗಳನ್ನು ವೀಕ್ಷಿಸಿದರು.

ಮೀರಾರೋಡು ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಭಾಷ್ಚಂದ್ರ ಕರ್ಕೇರ ಅವರು ಚಾಲನೆ ನೀಡಿಬಗ್ಗೆ , ನಿರಂತರ ಕಾರ್ಯ ಚಟುವಟಿಕೆಗಳಿಂದ ನಾವು ಕ್ರಿಯಾಶೀಲಾರಾಗಲು ಸಾಧ್ಯವಾಗಲಿದೆ. ಶೈಕ್ಷಣಿಕ , ಸಾಮಾಜಿಕ, ಅಧ್ಯಾತ್ಮಿಕ ಚಿಂತನೆಗಳಿಂದ ಉತ್ತಮ ಧ್ಯೆಯ ಸಾಕಾರವಾಗಲಿದೆ. ಬ್ರಹ್ಮಶ್ರೀನಾರಾಯಣ ಗುರುಗಳ ತತ್ವಾದರ್ಶ ಪಾಲನೆ ನಮ್ಮಲ್ಲಿ ಮೈಗೂಡಿದಾಗ ನಾವೆಲ್ಲ ಒಂದೇ ಎಂಬ ಮೂಡಿ ಬರುವುದು ಎಂದು ಹೇಳಿ ಯಾತ್ರಾರ್ಥಿಗಳಿಗೆ ಶುಭ ಹಾರೈಸಿದರು.

ಗೌ. ಕಾರ್ಯದರ್ಶಿ ಜಯಲಕ್ಷ್ಮೀ ಎಸ್. ಸಾಲ್ಯಾನ್ ಪ್ರಯಾಣದ ನಿಯಮ ಪಾಲನೆಯ ಬಗ್ಗೆ ವಿವರಿಸಿದರು. ಜತೆ ಕಾರ್ಯದರ್ಶಿ ಶೋಭಾ ಎಚ್.ಪೂಜಾರಿ ವಂದಿಸಿದರು.

ಕೇಂದ್ರ ಕಚೇರಿಯ ಜತೆ ಕೋಶಾಧಿಕಾರಿ,ಜಿ.ಕೆ.ಕೆಂಚನಕೆರೆ , ಕಾರ್ಯಕಾರಿ ಸಮಿತಿ ಸದಸ್ಯೆ ಭಾರತಿ ಎ. ಅಂಚನ್, ಗೌ. ಕಾರ್ಯಧ್ಯಕ್ಷ ಭೋಜ ಬಿ.ಸಾಲ್ಯಾನ್, ಉಪ ಕಾರ್ಯಾಧ್ಯಕ್ಷರಾದ ಎನ್. ಪಿ.ಕೋಟ್ಯಾನ್ ಮತ್ತು ದಿನೇಶ್ ಸುವರ್ಣ, ಗೌ.ಕೋಶಾಧಿಕಾರಿ ವಿಶ್ವನಾಥ ಮಾಬಿಯಾನ್, ಜತೆ ಕೋಶಾಧಿಕಾರಿ ಲೀಲಾಧರ್ ಕೆ.ಸನಿಲ್ ಕಾರ್ಯಾಕಾರಿ ಸಮಿತಿ ಸದಸ್ಯರಾದ ದಯಾನಂದ ಆರ್. ಅಮೀನ್, ಶಾಂಭವಿ ಸಾಲ್ಯಾನ್,ಗೀತಾ ಎಮ್. ಪೂಜಾರಿ,ವಿಜೆತೇಂದ್ರ ಸನಿಲ್, ಶಂಕರ ಕೆ.ಪೂಜಾರಿ, ಸುಂದರಿ ಆರ್. ಕೋಟ್ಯಾನ್,ವಿಜಯ ಅಮೀನ್, ಸಂಜೀವಿ ಎಸ್,ಪೂಜಾರಿ,ಸಮಿತಿ ಸದಸ್ಯರು ,ಯುವ ವಿಭಾಗ, ಮಹಿಳಾ ಸದಸ್ಯೆಯರು ಸಹಕರಿಸಿದರು..
ಚಿತ್ರ ವರದಿ : ರಮೇಶ ಅಮೀನ್



Related posts

ಕನ್ನಡ ಸಂಘ ಸಾಂತಾಕ್ರೂಜ್ ಆಷಾಢ ಆಚರಣೆ: ಕರಾವಳಿ ಜನತೆಗೆ ಆಟಿ (ಆಷಾಢ) ತಿಂಗಳು ಮಹತ್ವದ್ದು – ಸುಜಾತಾ ಆರ್. ಶೆಟ್ಟಿ

Mumbai News Desk

ಇಲ್ಲಿ ಸ್ಥಳದ ಅಭಾವ ಇದೆ ಅದರೆ  ಶ್ರೀ ದುರ್ಗೆ ಯನ್ನು ಪೂಜಿಸಲು ಭಕ್ತರ  ಅಭಾವಿಲ್ಲ – ಪ್ರಭಾಕರ್ ಶೆಟ್ಟಿ

Mumbai News Desk

ಲಾಲ್ ಬಾಗ್ ಚಾ ರಾಜ ಪಂಡಲ್ ನಲ್ಲಿ ವಿಐಪಿ ದರ್ಶನ ಪಕ್ಷಪಾತವನ್ನು ಖಂಡಿಸಿ, ನೋಟಿಸ್ ಜಾರಿ ಮಾಡಿದ ಮಾನವ ಹಕ್ಕುಗಳ ಆಯೋಗ

Mumbai News Desk

ಹೊಸಬೆಟ್ಟು ಮೊಗವೀರ ಸಂಘ ಮುಂಬಯಿ(ರಿ) ಮಹಿಳಾ ವಿಭಾಗದಿಂದ ಆಟಿದ ಒಂಜಿ ಕೂಟ.

Mumbai News Desk

ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನ, ಮುಂಬೈ: 2026–2028ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

Mumbai News Desk

ರತನ್ ಪೂಜಾರಿ ಯವರಿಗೆ ಶ್ರೀ ವಿಷ್ಣು ಮಂದಿರದಲ್ಲಿ ಗೌರವಾರ್ಪಣೆ.

Mumbai News Desk