September 6, 2026
Mumbai News Kannada
ಪ್ರಕಟಣೆ

ಸೆ. 22 ರಿಂದ ಅ. 2 ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನ – 48ನೇ ವರ್ಷದ ನವರಾತ್ರಿ ಮಹೋತ್ಸವ 2025





ಮುಂಬಯಿ: ತಾನಾಜಿ ನಗರ, ಕುರಾರ್ ಗ್ರಾಮ, ಮಲಾಡ್ (ಪೂ), ಮುಂಬಯಿ–400097 ರಲ್ಲಿ ನೆಲೆಸಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದಲ್ಲಿ ಸಮಿತಿ ವತಿಯಿಂದ 48ನೇ ವರ್ಷದ ನವರಾತ್ರಿ ದಸರಾ ಮಹೋತ್ಸವವು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

ಪ್ರತಿದಿನ ಬೆಳಗ್ಗೆ 8.00ಕ್ಕೆ ಮಹಾಪೂಜೆ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ, ಸಂಜೆ ಭಜನೆ, ಗಾನವಿನೋದ, ಕುಂಕುಮಾರ್ಚನೆ, ಮಹಾನೈವೇದ್ಯ, ಪ್ರಸಾದ ವಿತರಣೆ ನಡೆಯಲಿದೆ.

ಈ ಅವಧಿಯಲ್ಲಿ ಆರತಿ ದುರ್ಗಾ ಪೂಜೆ, ಮಹಿಷಾಸುರಮರ್ಧಿನಿ ಪೂಜೆ, ಚಂಡಿಕಾ ಹೋಮ, ಕುಮಾರಿ ದುರ್ಗಾ ಕಲ್ಯಾಣ, ಅಂಬಿಕಾ ದುರ್ಗಾ ಕಲ್ಯಾಣ, ಕಾಳಿಕಾಂಬಾ ಪೂಜೆ, ಮಹಾಸರಸ್ವತಿ ಗೀತೆ ಕಲ್ಯಾಣ, ಮಹಾಲಕ್ಷ್ಮಿ ಕಲ್ಯಾಣ ಹಾಗೂ ದುರ್ಗಾಪರಮೇಶ್ವರಿ ಕಲ್ಯಾಣ ಸೇರಿದಂತೆ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಅಕ್ಟೋಬರ್ 1 ರಂದು ಮಹಾಪೂಜೆಯೊಂದಿಗೆ ವಿಶೇಷ ಅನ್ನಸಂತರ್ಪಣೆ, ಹಾಗೂ ಅಕ್ಟೋಬರ್ 2 ರಂದು ವಿಜಯದಶಮಿಯಂದು ರಾತ್ರಿ 8 ಗಂಟೆಗೆ ರಂಗಪೂಜೆ ಜರುಗಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಶಂಕರನಾರಾಯಣ ತಂತ್ರಿ, ಡೊಂಬಿವಲಿ ಮತ್ತು ಮಂದಿರದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಭಟ್ ಸೂಡಾ ಇವರ ಪೌರೋಹಿತ್ಯದಲ್ಲಿ ಜರುಗಲಿದೆ.

ಸಮಿತಿಯ ಪದಾಧಿಕಾರಿಗಳು :

ಅಧ್ಯಕ್ಷರು: ಶ್ರೀ ರಘುನಾಥ್ ಕೆ. ಕೊಟ್ಟಾರಿ – 📱 9892748470

ಗೌ. ಪ್ರ. ಕಾರ್ಯದರ್ಶಿ: ಶ್ರೀ ಸೋಮಪ್ಪ ಬಿ. ಕೊಟ್ಯಾನ್ – 📱 8976549430

ಗೌ. ಕೊಶಾಧಿಕಾರಿ: ಶ್ರೀ ಬಾಬು ಎಮ್ . ಸುವರ್ಣ – 📱 9324567720

ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು – ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ



Related posts

ಕಾಂತೇಶ್ವರ ದೇವಸ್ಥಾನ ಕಾಂತಾವರ ಜ14ರಿಂದ 23  ವರ್ಷಾವಧಿ ಜಾತ್ರೆ ರಥೋತ್ಸವ,

Mumbai News Desk

ಜ.20 ಕ್ಕೆ ಉಡುಪಿಯಲ್ಲಿ ಡೈಕಿನ್ ಸೊಲ್ಯೂಷನ್ ಪ್ಲಾಜ ಷೋರೂಮ್ ಶುಭಾರಂಭ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಇದರ 48 ನೇ  ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಹಾಗೂ ಸಾಮೂಹಿಕ ಶನಿ ಪೂಜೆ.

Mumbai News Desk

ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆದಿ ಮೂಲಸ್ಥಾನ ಗೋಂಟು, ಮುಲ್ಕಿ : ಎ. 22ರಿಂದ ಎ. 26ರ ತನಕ ಬ್ರಹ್ಮ ಕಲಶೋತ್ಸವ ಮತ್ತು ವರ್ಧಂತ್ಯೋತ್ಸವ

Mumbai News Desk

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ

Mumbai News Desk

ಕುಲಾಲ ಸಂಘ ಮುಂಬಯಿಯ ಕೇಂದ್ರ ಕಾರ್ಯಾಲಯದಲ್ಲಿ  ಗುರು ಪೂರ್ಣಿಮೆ ಆಚರಣೆ.

Mumbai News Desk