July 23, 2026
Mumbai News Kannada
ತುಳುನಾಡು

ಗ್ರಾಮದ ಅಭಿವೃದ್ಧಿ ನಮ್ಮಧ್ಯೇಯವಾಗಲಿ : ಕುಸುಮಾ ಚಂದ್ರಶೇಖರ್







ಮೂಲಸೌಕರ್ಯಗಳ ಅಭಿವೃದ್ಧಿ,​ರಸ್ತೆ ಮತ್ತು ಬೀದಿ ದೀಪ,ಶಿಕ್ಷಣ, ಆರೋಗ್ಯ
​ ಚರಂಡಿ ವ್ಯವಸ್ಥೆ, ಕಸ ವಿಲೇವಾರಿ ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ಮಾಣದ ಮೂಲಕ ಗ್ರಾಮವನ್ನು ಸ್ವಚ್ಛವಾಗಿಡಲು ಪಡುಪಣಂಬೂರು ಗ್ರಾಮ ಪಂಚಾಯತ್ ಮಹತ್ತರವಾದ ಯೋಗದಾನ ನೀಡಿದೆ. ಇದೆಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರಲು ಮುಲ್ಕಿ ಮೂಡಬಿದಿರೆ ಕ್ಷೇತ್ರದ ಜನಪ್ರಿಯ ಶಾಸಕ ಉಮನಾಥ ಕೋಟ್ಯಾನ್ ಅವರ ಸಕಾರಾತ್ಮಕ ಧೋರಣೆಯಿಂದ ಸಾಧ್ಯವಾಯಿತು ಎಂದು ಪಡುಪಣಂಬೂರು ಗ್ರಾಮ‌ ಪಂಚಾಯಿತ್ ಅಧ್ಯಕ್ಷೆ ಕುಸುಮಾ ಚಂದ್ರ ಶೇಕರ್ ತಿಳಿಸಿದರು.

ಡಿ.22 ರಂದು ಪೂರ್ವಾಹ್ನ 10ನೇ ತೋಕೂರು ಜಂತ್ರಿ ಮನೆಯ ಸಮೀಪದ ಶಾಸಕರ ನಿಧಿಯಿಂದ ನಿರ್ಮಾಣ ವಾಗುತ್ತಿರುವ ಕಿರು ಸೇತುವೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು

ಪಂಚಾಯಿತ್ ಉಪಾಧ್ಯಕ್ಷ ಹೇಮಾನಾಥ ಅಮೀನ್ ಸ್ವಾಗತಿಸಿದರು. ಸದಸ್ಯರಾದ ಮೋಹನದಾಸ್,ಪ್ರಮೀಳಾ ಶೆಟ್ಟಿ ಅನಿಲ್,ಅಮಿತಾ,ಕಸ್ತೂರಿ ಪಂಜ,ಲೀಲಾ ಬಂಜನ್, ಶ್ಯಾಮಲಾ ಭಟ್, ವಸಂತಿ ವಿಠ್ಠಲ ,ಪಿ.ಸಿ.ಕೋಟ್ಯಾನ್ ಮುಖೇಶ್ ಸುವರ್ಣ,ಲೋಹಿತ್ ಕೋಟ್ಯಾನ್, ವಾಣಿ ಮಹೇಶ್,ಶರತ್ ಭಟ್,ಗೋಪಾಲ್ ಮೂಲ್ಯ, ಮೊದಲಾದವರು ಉಪಸ್ಥಿತರಿದ್ದರು..



Related posts

ಹೊಸ ಅಂಗಣ ತಿಂಗಳ ಕಾರ್ಯಕ್ರಮ : ಕಿಟ್ಟ ಪಂಬದರಿಗೆ ಸನ್ಮಾನ

Mumbai News Desk

ಹೊಸಬೆಟ್ಟಿನಲ್ಲಿ ಅಹೋರಾತ್ರಿ ತಾಳಮದ್ದಳೆ: ಶಿವ-ಶಕ್ತಿ ಸಮಾಗಮ, ಇಂದ್ರಜಿತು ಕಾಳಗದ ವೈಭವ

Mumbai News Desk

ಇನ್ನಂಜೆ ಕನ್ನಡ ಮಾಧ್ಯಮ ಶಾಲೆಯ ಉಚಿತ ವಿದ್ಯಾಭ್ಯಾಸದ ಸಹಾಯಾರ್ಥವಾಗಿ  ಕ್ರಿಕೆಟ್ ಪಂದ್ಯಾಕೂಟ : ಶಾಲೆಗೆ ರೂಪಾಯಿ 1,67,875/ ಹಸ್ತಾಂತರ.

Mumbai News Desk

ಮುಲ್ಕಿ : ಕೊಳಚಿಕಂಬಳ ದೈವಸ್ಥಾನದಲ್ಲಿ ವೈಭವದ ನೇಮೋತ್ಸವ ಸಂಪನ್ನ

Mumbai News Desk

ಮೂಲ್ಕಿ : ಹರಿಶ್ಚಂದ್ರ ಸಾಲ್ಯಾನ್ ಅವರ 23ನೇ ಕೃತಿ ‘ನುಡಿಮುತ್ತು’ ಬಿಡುಗಡೆ ಕಾರ್ಯಕ್ರಮ

Mumbai News Desk

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕಿ ಮತ್ತು ನಟಿ ರೂಪ ಐಯ್ಯರ್ : ನವದುರ್ಗಾ ಲೇಖನ ಯಜ್ಞ ಸಂಕಲ್ಪ

Mumbai News Desk