July 23, 2026
Mumbai News Kannada
ಪ್ರಕಟಣೆ

ಡೊಂಬಿವಲಿ: ಫೆ. 14ರಂದು ಶ್ರೀ ಜೈ ಭವಾನಿ ಶನೀಶ್ವರ ಮಂದಿರದ 36ನೇ ವಾರ್ಷಿಕ ಮಂಗಳೋತ್ಸವ







ಡೊಂಬಿವಲಿ: ಇಲ್ಲಿನ ಅಜ್ದೇಗಾಂವ್ ತಿಲಕ್ ಕಾಲೇಜು ಸಮೀಪವಿರುವ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ 36ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿ ಮಹಾಪೂಜಾ ಮಹೋತ್ಸವವು ಫೆಬ್ರವರಿ 14, ಶನಿವಾರದಂದು ಅದ್ದೂರಿಯಾಗಿ ಜರಗಲಿದೆ.

​ವಿಶ್ವಾವಸು ನಾಮ ಸಂವತ್ಸರದ ಮಾಘ ಮಾಸದ ಈ ಶುಭ ದಿನದಂದು, ಮಂದಿರದ ಪ್ರಧಾನ ಅರ್ಚಕರಾದ ಶ್ರೀ ಪ್ರಕಾಶ್ ಭಟ್ ಕಾನಂಗಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ:

ಅಂದು ಮುಂಜಾನೆ 6.00 ಗಂಟೆಗೆ ತೋರಣ ಮುಹೂರ್ತ ಹಾಗೂ ಗಣಹೋಮದೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಬೆಳಿಗ್ಗೆ 10.30ಕ್ಕೆ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಲಿದ್ದು, ಮಧ್ಯಾಹ್ನ 1.30ರಿಂದ ಶ್ರೀ ಶನಿದೇವರ ಕಲಶ ಪ್ರತಿಷ್ಠೆ ಹಾಗೂ ಗ್ರಂಥ ಪಾರಾಯಣ ನಡೆಯಲಿದೆ. ಈ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ ‘ಯಕ್ಷಗಾನ ತಾಳಮದ್ದಳೆ’ ರೂಪದಲ್ಲಿ ಪಾರಾಯಣ ಸೇವೆಯು ಭಕ್ತಾದಿಗಳನ್ನು ರಂಜಿಸಲಿದೆ.

​ರಾತ್ರಿ 8.30ಕ್ಕೆ ಮಹಾಮಂಗಳಾರತಿ ನೆರವೇರಿ, 9.00 ಗಂಟೆಗೆ ತೀರ್ಥಪ್ರಸಾದ ವಿತರಣೆ ಹಾಗೂ ಮಹಾಪ್ರಸಾದ (ಅನ್ನಸಂತರ್ಪಣೆ) ವಿತರಣೆಯಾಗಲಿದೆ ಎಂದು ಮಂದಿರದ ಆಡಳಿತ ಮಂಡಳಿ ತಿಳಿಸಿದೆ.

ಗೌರವಾಧ್ಯಕ್ಷ ರವಿ ಎಂ. ಸುವರ್ಣ, ಅಧ್ಯಕ್ಷ ಸೂರಜ್ ಡಿ. ಸಪಲಿಗ, ಉಪಾಧ್ಯಕ್ಷ ಸಂಜೀವ ಪಿ. ಪಾಲನ್, ಕಾರ್ಯದರ್ಶಿ ಸಂತೋಷ್ ಜಿ. ಪೂಜಾರಿ, ಕೋಶಾಧಿಕಾರಿ ಜೈಕಿಶ್ ಆರ್. ಸನಿಲ್, ಜೊತೆ ಕಾರ್ಯದರ್ಶಿ ಪ್ರದೀಪ್ ಎಸ್ ಸಾಲ್ಯಾನ್, ಜೊತೆ ಕೋಶಾಧಿಕಾರಿ ರಕ್ಷಣ್ ಸಾಲ್ಯಾನ್, ಪ್ರದಾನ ಅರ್ಚಕ ಪ್ರಕಾಶ್ ಭಟ್ ಕಾನಂಗಿ, ಸಹ ಅರ್ಚಕ ಪ್ರವೀಣ್ ಪೂಜಾರಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಪಾರ್ವತಿ ಸಾಲ್ಯಾನ್ ಮತ್ತು ಪದಾಧಿಕಾರಿಗಳು, ಯುವ ವಿಭಾಗದ ಸದಸ್ಯರು ಸಮಸ್ತ ಭಕ್ತಾದಿಗಳನ್ನು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.



Related posts

ಜು 21 ರಂದು ಬಿಲ್ಲವರ ಎಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಗುರುಪೂರ್ಣಿಮೆ

Mumbai News Desk

ಮೂಲ ಸಿರಿ ಕುಮಾರ ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆ, ಪಾಂಗಾಳ, ವಾರ್ಷಿಕ ಪಾಂಗಾಳ ಆಯನ ಸಿರಿಜಾತ್ರೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) : ಸೆ. 5 ರಂದು 25ನೇ ಸಂಸ್ಥಾಪನಾ ದಿನಾಚರಣೆ, ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ

Mumbai News Desk

ಕೊಡ್ಯಡ್ಕ ದೇವಸ್ಥಾನಕ್ಕೆ ಹೋದಾಗ ಆದ ಪ್ರೇರಣೆಯಂತೆ ಬೆಳಗಾವಿಯಲ್ಲಿ ನೆಲೆ ನಿಂತ ಅನ್ನಪೂರ್ಣೇಶ್ವರಿ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಡಿ.24ರಂದು 9ನೇ ಮೂಲತ್ವ ವಿಶ್ವ ಪ್ರಶಸ್ತಿ-2023.

Mumbai News Desk

ಶ್ರೀ ಮಧೂರು ಮದನಂತೇಶ್ವರ-ಸಿದ್ಧಿವಿನಾಯಕ ದೇವಸ್ಥಾನ, ಬ್ರಹ್ಮ ಕಲಶೋತ್ಸವ, ಮಾ.13:ಮುಂಬಯಿ ಭಕ್ತರ ಸಭೆ,

Mumbai News Desk