July 22, 2026
Mumbai News Kannada
ಮುಂಬಯಿ

ಬಂಟರ ಸಂಘ, ಮುಂಬಯಿ: ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ಮಾತಾ ಕಿ ಚೌಕಿ ಭಕ್ತಿ ಪ್ರಧಾನ ಕಾರ್ಯಕ್ರಮ







ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಮಾತಾ ಕಿ ಚೌಕಿ ಭಕ್ತಿ ಪ್ರಧಾನ ಕಾರ್ಯಕ್ರಮವು ಮಾರ್ಚ್ 31ರಂದು ಎಸ್. ಎಂ. ಶೆಟ್ಟಿ ಪವಾಯಿ ಶಿಕ್ಷಣ ಸಂಕುಲದ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಅದ್ದೂರಿಯಾಗಿ ಜರುಗಿತು.

​ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಪ್ರಾದೇಶಿಕ ಸಮಿತಿಗಳ ಸಮನ್ವಯಕ ರವೀಂದ್ರನಾಥ ಭಂಡಾರಿ ಹಾಗೂ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಅವರ ಉಪಸ್ಥಿತಿಯಲ್ಲಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ್ ಶೆಟ್ಟಿ, ಸಮಿತಿಯ ಸಂಚಾಲಕ ರವೀಂದ್ರ ಶೆಟ್ಟಿ ಮತ್ತು ಮಹಿಳಾ ವಿಭಾಗದ ಸಂಚಾಲಕಿ ವಜ್ರಾಕ್ಷಿ ಪೂಂಜಾ ಹಾಗೂ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

​ಸಮಿತಿಯ ಉಪಾಧ್ಯಕ್ಷ ಯಶವಂತ ಶೆಟ್ಟಿ, ರಮೇಶ್ ರೈ, ಕಾರ್ಯದರ್ಶಿ ತಾರಾನಾಥ ಶೆಟ್ಟಿ, ಕೋಶಾಧಿಕಾರಿ ಮೋಹನದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಅಮರನಾಥ ಶೆಟ್ಟಿ ಹಾಗೂ ಜೊತೆ ಕೋಶಾಧಿಕಾರಿ ಅಭಿಷೇಕ್ ಶೆಟ್ಟಿ ಅವರು ಸಹಕರಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ, ಸಲಹೆಗಾರರಾದ ವಜ್ರಾ ಪೂಂಜಾ, ಉಪ ಕಾರ್ಯಾಧ್ಯಕ್ಷೆ ಜಯಲಕ್ಷ್ಮಿ ಜೆ. ಶೆಟ್ಟಿ, ಕಾರ್ಯದರ್ಶಿ ವೃಕ್ಷಾ ಭಂಡಾರಿ, ಕೋಶಾಧಿಕಾರಿ ಪ್ರಮೀಳಾ ಆರ್. ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪಲತಾ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿ ಮಮತಾ ಎಸ್. ಶೆಟ್ಟಿ ಹಾಗೂ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಅನುಸೂಯ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅದ್ವಿತ್ ಪೂಂಜಾ ಮತ್ತು ಸಮಿತಿಯ ಸದಸ್ಯರ ಶ್ರಮದಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಮಾತಾ ಕಿ ಚೌಕಿ ಕಾರ್ಯಕ್ರಮವು ಭಕ್ತಿಭಾವ, ಶ್ರದ್ಧೆ ಮತ್ತು ಆತ್ಮೀಯತೆಯೊಂದಿಗೆ ಅದ್ಭುತ ಧಾರ್ಮಿಕ ಸಂಭ್ರಮವಾಗಿ ಮೂಡಿಬಂದಿತು. ಮಹಿಳಾ ವಿಭಾಗದ ಸದಸ್ಯರ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ನಂತರ ಮಾತೆಯ ಆರಾಧನೆ ಮತ್ತು ವಿಶೇಷ ಪೂಜೆಗಳೊಂದಿಗೆ ಮುಂದುವರಿಯಿತು. ಭಕ್ತರು “ಜೈ ಮಾತಾ ದಿ” ಎಂಬ ಉದ್ಘೋಷದೊಂದಿಗೆ ಭಕ್ತಿರಸದಲ್ಲಿ ಮಿಂದೆದ್ದರು. ಜಗನ್ಮಾತೆಯ ಸುಂದರ ಅಲಂಕಾರಗಳು ಮತ್ತು ಸಾಂಪ್ರದಾಯಿಕ ಭಜನೆಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು.

ಇದೇ ಸಂದರ್ಭದಲ್ಲಿ ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳಾದ ಆಶಾ ಮನೋಹರ ಹೆಗ್ಡೆ, ಲತಾ ಪ್ರಭಾಕರ ಶೆಟ್ಟಿ, ಲತಾ ಜಯರಾಮ ಶೆಟ್ಟಿ ಹಾಗೂ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳಾದ ಸುಜಾತಾ ಗುಣಪಾಲ ಶೆಟ್ಟಿ, ವನಿತಾ ನೋಂಡಾ ಮತ್ತು ವಿವಿಧ ಸಮಿತಿಗಳ ಕಾರ್ಯಾಧ್ಯಕ್ಷರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಆರ್ಥಿಕ ಸಹಕಾರ ನೀಡಿದ ಗಣ್ಯರನ್ನು ಸಹ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.



Related posts

ಡೊಂಬಿವಲಿಯಲ್ಲಿ ಶ್ರೀ ಲಕ್ಷ್ಮೀ ಭಜನಾ ಮಂಡಳಿಯ 20ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ: ವೈದ್ಯಕೀಯ ನೆರವು ಹಾಗೂ ವಿದ್ಯಾರ್ಥಿವೇತನ ವಿತರಣೆ ಸಮಾರಂಭ

Mumbai News Desk

ಮುಂಬೈ :ದಹಿಸರ್ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ: ವಿವೇಕಾನಂದರ ಆದರ್ಶಗಳ ಸ್ಮರಣೆ

Mumbai News Desk

ಎಸ್ ಎಸ್ ಸಿ ಪ್ರತಿಭ್ವಾನಿತರು: ಭಕ್ತಿ ಭಾಸ್ಕರ್ ಸುವರ್ಣ 93.60%

Mumbai News Desk

ಕುಲಾಲ ಸಂಘದ ಚರ್ಚ್ ಗೇಟ್- ದಹಿಸರ್ ಸಮಿತಿ ವತಿಯಿಂದ ವಿಹಾರ ಕೂಟ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ: ಸತತ ನಾಲ್ಕನೇ ವರ್ಷದ ರಕ್ತದಾನ ಶಿಬಿರದಲ್ಲಿ 182 ಯುನಿಟ್ ರಕ್ತ ಸಂಗ್ರಹದ ದಾಖಲೆ

Mumbai News Desk