30 C
Mumbai
September 29, 2026
Mumbai News Kannada
ಸುದ್ದಿ

ಪರಿಶ್ರಮ ಪ್ರಾಮಾಣಿಕತೆಯ ಪ್ರಯತ್ನದ, ಸಂಕಲ್ಪ ಸಿದ್ಧಿಗೆ ದೈವಿಕ ಅನುಗ್ರಹವೇ ಪ್ರೇರಣೆ : ಪೇಜಾವರ ಶ್ರೀ



ಮನುಷ್ಯನ ಎಲ್ಲಾ ಪ್ರಾಮಾಣಿಕ ಪರಿಶ್ರಮದ ಪ್ರಯತ್ನದ ಸಂಕಲ್ಪಗಳು ಸಿದ್ಧಿಯಾಗಲು ದೈವಿಕ ಅನುಗ್ರಹವೇ ಪ್ರೇರಣೆ ಯಾಗಲಿದ್ದು, ಇಂದು ಉಚ್ಚಿಲ ಮಹಾಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ನಿರಂತರ ಪ್ರಗತಿ, ಗ್ರಾಹಕರಿಗೆ ಉತ್ತಮ ಸೇವೆಯ ಜೊತೆಗೆ ಸಮಾಜಕ್ಕೆ ಆರ್ಥಿಕ ಚೈತನ್ಯ ತುಂಬುವ ಸಂಕಲ್ಪದೊಂದಿಗೆ ನಡೆಸಿದ ಚಂಡಿಕಾಯಾಗದ ಮೂಲಕ ದೇವರ ಅನುಗ್ರಹದಿಂದ ಬ್ಯಾಂಕಿನ ಅಧ್ಯಕ್ಷರಾದ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಮುಂದಿನ ಯೋಜನೆಗಳು ಸಾಕಾರವಾಗಲಿ ಎಂದು ಪೇಜಾವರ ಮಠದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ ಆಯೋಜಿಸಿದ್ದ ಚಂಡಿಕಾಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಆಶೀವರ್ದಿಸಿ ಅನುಗ್ರಹ ಸಂದೇಶ ನೀಡಿದರು.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿರುವ ಮಹಾಲಕ್ಷ್ಮೀ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆಯ ಮೂಲಕ ಜನರ ವಿಶ್ವಾಸಕ್ಕೆ ಪಾತ್ರವಾಗಿ, ಸಿಬ್ಬಂದಿ ವರ್ಗದ ಸೇವೆಯ ಮೂಲಕ ಉತ್ತಮ ಸಹಕಾರಿ ಸಂಸ್ಥೆಯಾಗಿ ಸಮಾಜಕ್ಕೆ ವಿಶೇಷ ಕೊಡುಗೆ ನೀಡುವ ಸಂಕಲ್ಪದೊಂದಿಗೆ ಚಂಡಿಕಾಯಾಗ ನಡೆಸಿದ್ದು, ಈ ಮೂಲಕ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ದೇವರ ಹಾಗೂ ಸಮಾಜದ ಸರ್ವರ ಸಹಕಾರ ಸಿಗುವಂತಾಗಲಿ ಎಂದು ಹೇಳಿದರು.

ಉಚ್ಚಿಲ ಮಹಾಲಕ್ಮೀ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ತಂತಿಗಳ ನೇತೃತ್ವದಲ್ಲಿ ಚಂಡಿಕಾಯಾಗ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಕಾಪು ಶಾಸಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯ ಸಿ. ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಕುತ್ಯಾರು ನವೀನ್ ಶೆಟ್ಟಿ, ಕೋಲಾರದ ಮಾಜಿ ಸಂಸದರಾದ ಶ್ರೀ ಮುನಿ ಸ್ವಾಮಿ, ಮೀನುಗಾರ ಮುಖಂಡರಾದ ಶ್ರೀ ದಯಾನಂದ ಸುವರ್ಣ, ಶ್ರೀ ಆನಂದ ಪಿ. ಸುವರ್ಣ, ಶ್ರೀ ಸಾಧು ಸಾಲ್ಯಾನ್, ಶ್ರೀ ರಾಮಚಂದ್ರ ಕುಂದರ್, ಶ್ರೀ ನಾಗರಾಜ ಸುವರ್ಣ, ಶ್ರೀ ಕೃಷ್ಣ ಸುವರ್ಣ, ಶ್ರೀ ಸುಭಾಷ್ ಮೆಂಡನ್, ಶ್ರೀ ಹಿರಿಯಣ್ಣ ಕಿದಿಯೂರು, ಶ್ರೀ ದಯಾನಂದ ಕುಂದರ್, ಶ್ರೀ ಕರುಣಾಕರ ಸಾಲ್ಯಾನ್, ಶ್ರೀ ಚೇತನ್ ಬೆಂಗ್ರೆ, ಗಣ್ಯರಾದ ಶ್ರೀ ಭುವನೇಂದ್ರ ಕಿದಿಯೂರು, ಶ್ರೀ ಪುರುಷೋತ್ತಮ ಶೆಟ್ಟಿ, ಶ್ರೀ ಅಜಯ್ ಪಿ. ಶೆಟ್ಟಿ, ಶ್ರೀ ಮನೋಹರ ಶೆಟ್ಟಿ, ಶ್ರೀ ಸತ್ಯನಾಥ ಶೆಟ್ಟಿ ಹಿರಿಯಡ್ಕ, ಶ್ರೀ ಅಮರನಾಥ ಶೆಟ್ಟಿ ಹಿರಿಯಡ್ಕ, ಡಾ ಜಿ. ಎಸ್. ಚಂದ್ರಶೇಖರ್, ಶ್ರೀ ಎಂ.ಹರೀಶ್ಚಂದ್ರ, ಶ್ರೀ ಗೋಪಾಲಕೃಷ್ಣ ಸಾಮಗ, ಶೀರೂರು ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯ, ಶ್ರೀ ದಿವಾಕರ ಶೆಟ್ಟಿ ತೋಟದ ಮನೆ, ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ಶ್ರೀ ರಾಜೇಶ್ ಶೆಟ್ಟಿ ಬಿರ್ತಿ, ಶ್ರೀ ಪ್ರತಾಪ್ ಹೆಗ್ಡೆ ಮಾರಾಳಿ, ಶ್ರೀ ಹರೀಶ್ ಶೆಟ್ಟಿ ಚೇರ್ಕಾಡಿ, ಶ್ರೀ ಬೈಕಾಡಿ ಸುಪ್ರಸಾದ್ ಶೆಟ್ಟಿ, ಶ್ರೀ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಶ್ರೀ ಕಿರಣ್ ಕುಮಾರ್ ಬೈಲೂರು, ಶ್ರೀ ಪ್ರಭಾಕರ ಪೂಜಾರಿ, ಶ್ರೀ ಗಿರೀಶ್ ಅಂಚನ್, ಶ್ರೀ ಕಮಲಾಕ್ಷ ಹೆಬ್ಬಾರ್, ಶ್ರೀ ರಾಜೀವ್ ಕುಲಾಲ್, ಶ್ರೀ ದಿನೇಶ್ ಅಮೀನ್, ಶ್ರೀಮತಿ ಸಂಧ್ಯಾ ರಮೇಶ್, ಶ್ರೀ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಶ್ರೀಮತಿ ವೀಣಾ ಶೆಟ್ಟಿ, ಶ್ರೀಮತಿ ಗೀತಾಂಜಲಿ ಸುವರ್ಣ, ಶ್ರೀ ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಶ್ರೀ ಜಿತೇಂದ್ರ ಶೆಟ್ಟಿ ಉದ್ಯಾವರ, ಶ್ರೀ ಯೋಗೀಶ್ ಶೆಟ್ಟಿ ಬಾಲಾಜಿ, ಉಚ್ಚಿಲ ಮಹಾಲಕ್ಮೀ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಗಿರಿಧರ ಸುವರ್ಣ, ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಾಸುದೇವ ಸಾಲ್ಯಾನ್, ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿಗಳು ಹಾಗೂ ಸದಸ್ಯರು ಹಿತೈಷಿಗಳು ಉಪಸ್ಥಿತರಿದ್ದರು.



Related posts

ಕಲ್ಯಾಣ್ : ವಾಮನ ಎಂ ಕಾಂಚನ್ ನಿಧನ

Mumbai News Desk

ತೆಂಕು ತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರಾದ ದಿನೇಶ್ ಅಮ್ಮಣ್ಣಾಯರು ಇನ್ನಿಲ್ಲ

Mumbai News Desk

ರಾಹುಲ್ ಗಾಂಧಿ ಅವರಿಂದ ಸಂಸತ್ತಿನ ಶಿಷ್ಟಾಚಾರ ಉಲ್ಲಂಘನೆ ಆರೋಪ: 200ಕ್ಕೂ ಹೆಚ್ಚು ನಿವೃತ್ತ ಅಧಿಕಾರಿಗಳಿಂದ ಕ್ಷಮೆಯಾಚನೆಗೆ ಆಗ್ರಹ

Mumbai News Desk

ಸಾಕ್ಷಿ ಚಂದ್ರಹಾಸ ಬೆಳ್ಚಡ ಇವರಿಗೆ ಆಸ್ಟ್ರೇಲಿಯಾದಿಂದ ವಿಶಿಷ್ಟ ಸಾಧನೆಯೊಂದಿಗೆ ನಗರ ಯೋಜನೆ ಮತ್ತು ಪರಿಸರದಲ್ಲಿ ಸ್ನಾತಕೋತ್ತರ ಪದವಿ

Mumbai News Desk

ಉಡುಪಿ ಜಿಲ್ಲೆಯಲ್ಲಿ ವರುಣನ ಸಿಂಚನ: ಬಿಸಿಲಿನ ಬೇಗೆಯಿಂದ ಜನರಿಗೆ ತಂಪು ನೀಡಿದ ಮಳೆ

Mumbai News Desk

ಸಂಘರ್ಷ ಪೀಡಿತ ಕೊಲ್ಲಿ ರಾಷ್ಟ್ರಗಳಲ್ಲಿನ ಭಾರತೀಯರ ಸುರಕ್ಷತೆಗೆ ಕ್ರಮ: ಸಚಿವ ಜೈಶಂಕರ್ ಭರವಸೆ

Mumbai News Desk