September 6, 2026
Mumbai News Kannada
ಮುಂಬಯಿ

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ ಇದರ 10ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ





ಡೊಂಬಿವಲಿ ಪಶ್ಚಿಮ, ಟೇಲ್ಕಸ್ ವಾಡಿ ಯ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 10ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆ ಯು ಡಿಸೆಂಬರ್ 10 ರ ಆದಿತ್ಯವಾರದಂದು 17ನೇ ವರ್ಷದ ಶಬರಿಮಲೆ ಯಾತ್ರೆ ಕೈಗೊಳ್ಳಲಿರುವ ಶ್ರೀ ಶರತ್ ಗುರುಸ್ವಾಮಿ ಕುಡ್ಗಿಹಿತ್ಲು ಇವರ ಮಾರ್ಗದರ್ಶನದಲ್ಲಿ ನೆರವೇರಿತು.

ಬೆಳಿಗ್ಗೆ ಗಣಹೋಮ, ನಂತರ ಮಂಡಳಿಯ ಸದಸ್ಯರಿಂದ ಭಜನೆ ನಡೆಯಿತು.

ಮಧ್ಯಾಹ್ನ ಪಡಿಪೂಜೆ ನಡೆದು ಮಹಾಪೂಜೆ, ಪಲ್ಲಪೂಜೆ ನೆರವೇರಿತು.

ಪರಿಸರದ ರಾಜಕೀಯ ನೇತಾರರು, ಧಾರ್ಮಿಕ ಮುಖಂಡರುಗಳು, ಸಮಾಜ ಸೇವಕರುಗಳು, ವಿವಿಧ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಪೂಜೆಯಲ್ಲಿ ಉಪಸ್ಥಿತರಿದ್ದು, ತೀರ್ಥಪ್ರಸಾದ ಸ್ವೀಕರಿಸಿ ಮತ್ತು ಅನ್ನ ಸಂತರ್ಪಣೆ ಯಲ್ಲಿ ಪಾಲ್ಗೊಂಡರು.

ಈ ವರ್ಷದ ಮಾಲಾಧಾರರಾದ ಶ್ರೀ ಶರತ್ ಗುರುಸ್ವಾಮಿ, ಶ್ರೀ ದಿನೇಶ್‌ ಸ್ವಾಮಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಹರೀಶ್ ಸ್ವಾಮಿ, ಶ್ರೀ ಸುಧಾಕರ್ ಸ್ವಾಮಿ, ಶ್ರೀ ಸುರೇಶ್ ಸ್ವಾಮಿ ಹಾಗೂ ಮಂಡಳಿಯ ಕಾರ್ಯಕರ್ತರು ಪೂಜೆ ಯಶಸ್ವಿಯಾಗಿ ನೆರವೇರುವಲ್ಲಿ ಸಹಕರಿಸಿದರು.

ಶ್ರೀ ಶಬರಿ ಆಯ್ಯಪ್ಪ ಭಜನಾಮಂಡಳಿ, ಡೊಂಬಿವಲಿ 10 ವರ್ಷಗಳಿಂದ ದಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಶೈಕ್ಷಣಿಕ ಕಾರ್ಯವನ್ನೂ ಮಾಡುತ್ತಿದ್ದು, ಇವರ ದಶಮಾನೋತ್ಸವದ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರವಿವಾರ ದಿನಾಂಕ 17/12/2023 ರಂದು ಅಪರಾಹ್ನ 3.30 ಕ್ಕೆ ಸರಿಯಾಗಿ ಡೊಂಬಿ ವಲಿ ಪಶ್ಚಿಮದ ಜನಗಣ ಮನ ಶಾಲಾ ವಠಾರದಲ್ಲಿ, ಸಿರಿಕಲಾ ಮೇಳ ಬೆಂಗಳೂರು ಹಾಗೂ ಅತಿಥಿ ಕಲಾವಿದರಿಂದ “ಕಂಸ ದಿಗ್ವಿಜಯ-ಕಂಸ ವಧೆ” ಎಂಬ ಕನ್ನಡ ಪೌರಾಣಿಕ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಕಲಾಭಿಮಾನಿಗಳಾದ ತಾವೆಲ್ಲರು ಆಗಮಿಸಿ ಈ ಕಾರ್ಯಕ್ರಮವನ್ನು ಚಂದಗಾಣಿಸಿ ಕೋಡಬೇಕಾಗಿ ಮಲಾಧಾರಿ ಸ್ವಾಮಿಗಳು ವಿನಂತಿಸಿದ್ದಾರೆ.



Related posts

ಜ್ಞಾನ ವಿಕಾಸ ಮಂಡಳ ಕಲ್ವಾ, ಇದರ ಆಡಳಿತದ ನ್ಯೂ ಇಂಗ್ಲಿಷ ಸ್ಕೂಲ್ ಗೆ, ಎಸ್ ಎಸ್. ಸಿ ಪರೀಕ್ಷೆಯಲ್ಲಿ ಶೇ 100 ಪಲಿತಾಂಶ.

Mumbai News Desk

ಮಹಾರಾಷ್ಟ್ರ ಚುನಾವಣೆ : ಬಿಜೆಪಿ ನಾಯಕ ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವುದಾಗಿ ಘೋಷಣೆ.

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ 63ನೇ ನಾಡಹಬ್ಬ ಸಮಾರಂಭಕ್ಕೆ ಚಾಲನೆ ,ಕೃತಿ ಲೋಕಾರ್ಪಣೆ,

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶ್ರೇಯಸ್ ರಾಘು ಪೂಜಾರಿ ಗೆ ಶೇ 91 ಅಂಕ.

Mumbai News Desk

ಕರ್ನಾಟಕ ಸಂಘ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ, ಡೊಂಬಿವಲಿ ಸ್ಥಳೀಯ ಸಮಿತಿಯಿಂದ ವಿಜೃಂಭಣೆಯ ಗುರುಪೂರ್ಣಿಮಾ ಆಚರಣೆ

Mumbai News Desk