June 25, 2026
Mumbai News Kannada
Uncategorizedಮುಂಬಯಿ

ಮುಂಬೈ: ಶ್ರೀ ರಾಮಾಭಿವಂದ್ಯ ಯಕ್ಷಸೇವಾ ಬಳಗ ಹಾಗೂ ಮುಂಬೈ ವಿ.ವಿ. ಜಂಟಿ ಆಯೋಜನೆಯ ‘ಶ್ರೀ ರಾಮ ಕಥಾ ಹೃದಯಂ’ ಸರಣಿಯ ನವಮ ಪ್ರಸ್ತುತಿ,ಆನಂದ ಶೆಟ್ಟಿ ಇನ್ನಾ ಅವರಿಗೆ ಸನ್ಮಾನ





  ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಹಾಗೂ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ  ಜಂಟಿ ಆಯೋಜನೆಯಲ್ಲಿ ಜೂನ್ 14ರಂದು ಭಾನುವಾರ ಸಂಪನ್ನಗೊಂಡ ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆಯ ನವಮ ಪ್ರಸ್ತುತಿ: “ವಾಲಿ ಮೋಕ್ಷ” ದ ಮಧ್ಯಂತರದಲ್ಲಿ ನಡೆದ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭದ  ಅಧ್ಯಕ್ಷತೆಯನ್ನು
ವೇ. ಮೂ. ಪೆರ್ಣಂಕಿಲ ಶ್ರೀ ಹರಿದಾಸ ಭಟ್ ಇವರು ವಹಿಸಿದ್ದರು .
ಗಾಮ್ದೇವಿ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೂಕ್ತೆಸರರಾದ  ಹರಿದಾಸ ಗೋಪಾಲ ಶೆಟ್ಟಿ ಇವರು ಗೌರವ ಅತಿಥಿಯಾಗಿ, ಮುಖ್ಯ ಅತಿಥಿಗಳಾಗಿ   ಕಿಶೋರ್ ಕೆ ಶೆಟ್ಟಿ  (ಉಪಾಧ್ಯಕ್ಷರು ಬೋಂಬೆ ಬಂಟ್ಸ್ ಅಸೋಸಿಯೇಷನ್ )
ರವೀಂದ್ರನಾಥ್ ಭಂಡಾರಿ (ಸಿಎಂಡಿ -ವೆಲ್ಕಮ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್   )
ನವೀನ್ ಶೆಟ್ಟಿ ಇನ್ನಬಾಳಿಕೆ  (ಅಧ್ಯಕ್ಷರು,   ಕನ್ನಡ ವೆಲ್ಫೇರ್ ಸೊಸೈಟಿ  ಘಾಟ್ಕೋಪರ್ ) ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ   ಆನಂದ ಶೆಟ್ಟಿ ಇನ್ನಾ ದಂಪತಿಗಳ
ಸನ್ಮಾನಿಸಿದರು.


ಬಳಿಕ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಮಾತನಾಡುತ್ತ  ಶ್ರೀ ರಾಮ ದೇವರ ಹೆಸರಿನಿಂದ ಆರಂಭಗೊಂಡ ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆಯ ನವಮ ಪ್ರಸ್ತುತಿಃ ಮನಸ್ಸಿಗೆ ಬಹಳ ಆನಂದವನ್ನು ನೀಡುತ್ತಾ ಇದೆ. ವ್ಯಕ್ತಿ ಶಕ್ತಿಯಾಗಿ ಪರಿವರ್ತನೆಗೊಳ್ಳುವ  ಮಾನವನು ಮಾದವನಾಗುವ ಸುಂದರ ಕಥಾನಕ, ಇಂದಿನ ವಾಲಿ ಮೋಕ್ಷ ಪ್ರಸಂಗ. ಶ್ರೀ  ರಾಮ ದೇವರು ಎಲ್ಲಾ ಭಜಕರಿಗೆ  ಮೋಕ್ಷದಾಯಕನು. ಜಟಾಯೂ  ಕಬಂಧ ಶಬರಿ ಹಾಗೂ ವಾಲಿ ಹೀಗೆ  ನಾವು ಕೂಡ  ತಪ್ಪಾದಲ್ಲಿ ಕ್ಷಮಿಸುವ  ಗುಣ ಹೊಂದಬೇಕು. ಶ್ರೀ  ರಾಮಾಭಿವಂದ್ಯ ಯಕ್ಷ ಸೇವಾ ಬಳಗ  ಇದರ ಇಬ್ಬರು ಕಲಾವಿದರು  ಮಾರ್ನಾಡ್  ಹಾಗೂ  ನಂದ್ರೊಳ್ಳಿ  ಸೇರಿಕೊಂಡು  ರಾಮ – ಲಕ್ಷಣರಂತೆ  ಸೇವೆಯಲ್ಲಿ  ತಮ್ಮನ್ನು ತೊಡಗಿಸಿಕೊಂಡಿರುವರು.  ಇಂದು ಸನ್ಮಾನ ಸ್ವೀಕರಿಸಿದ ಆನಂದ ಶೆಟ್ಟಿ ಇನ್ನಾರನ್ನು ಸುಮಾರು  35ವರುಷಗಳಿಂದ ಗಮನಿಸುತ್ತ ಬಂದಿದ್ದೇನೆ ಅವರ  ನಿಷ್ಠಾವಂತ ಪ್ರಾಮಾಣಿಕ  ಯಕ್ಷ ಸೇವೆಗೆ ಸಂದ ಗೌರವ. ಇದಕ್ಕಿಂತ ಮೊದಲು ಕೂಡ ಇನ್ನಾರನ್ನು ಗೌರವಿಸಿರುವೆವು.  ಇಂದು ಪತಿ-ಪತ್ನಿ, ಮಕ್ಕಳು , ಸೊಸೆಯಂದಿರು  ಮೊಮ್ಮಕ್ಕಳ ಒಟ್ಟಿಗೆ ಒಂದು ಕೂಡು ಕುಟುಂಬದ ಸನ್ಮಾನ ಸ್ವೀಕರಿಸಿ  ಯಕ್ಷಗಾನ ಸೇವೆಯ ಸವಿಯನ್ನು  ಉಂಡಷ್ಟು ಸಂತಸ ಆಗಿರಬೇಕು ಇನ್ನಾ ಅವರಿಗೆ  ಎಂದು  ಹರಸುತ್ತ ಶುಭ ಹಾರೈಸಿದರು 
 ಕಿಶೋರ್ ಕೆ ಶೆಟ್ಟಿ ಐಕಳ  ಇವರು ಮಾತನಾಡುತ್ತ  ಇದೊಂದು ಅಪೂರ್ವ ಕಾರ್ಯಕ್ರಮ  ನಾವೆಲ್ಲರೂ ಇದರೊಂದಿಗೆ ಶ್ರೀ ರಾಮ ದೇವರ ಸೇವೆ ಮಾಡುವ ಅವಕಾಶ ಗಿಟ್ಟಿಸಿಕೊಂಡ ಹಾಗೆ ಆಗುತ್ತೆ.ಇಂತಹ ಕಾರ್ಯಕ್ರಮಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದು ಕಾರ್ಯಕ್ರಮದ ಆಯೋಜಕರನ್ನು  ಶ್ರೀ ರಾಮಾಭಿವಂದ್ಯದ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿರುವ ಶ್ರೀ ಪೆರ್ಣಂಕಿಲ ಹರಿದಾಸ ಭಟ್ರನ್ನು , ಸನ್ಮಾನ 
ಸ್ವೀಕರಿಸಿದ ಆನಂದ ಶೆಟ್ಟಿ ಇನ್ನಾ ದಂಪತಿಗಳನ್ನು ಅಭಿನಂದಿಸಿಸುತ್ತ ನಾನು ಬಾಲ್ಯದಲ್ಲಿನೋಡಿದ ಯಕ್ಷಗಾನದ ನೆನಪು ಮತ್ತೆ ನವಿರಾಗಿನೆನಪಾಗುತ್ತಾಇದೆ. ಒಂದು ಉತ್ತಮ ಕಾರ್ಯಕ್ರಮವನ್ನು ನೋಡಿ ಆನಂದಿಸಿದೆ ಎಂದು ಹರ್ಷ ವ್ಯಕ್ತ ಪಡಿಸಿದರು 

ನಾದಲೋಲ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ ಮಾತನಾಡುತ್ತ ಇದೊಂದು ಸ್ಮರಣಿಯ ಕಾರ್ಯಕ್ರಮ   ಆನಂದ  ಶೆಟ್ಟಿ  ಇನ್ನಾ  ಹಾಗೂ  ನನ್ನ  ಒಡನಾಟಕ್ಕೆ  ಸರಿ  ಸುಮಾರು 45ವರುಷವಾಗುತ್ತಾ ಬಂತು .ಭಾಗವತ  ಉತ್ತಮ ಗುಣ  ಮಟ್ಟದ ಹಾಡನ್ನು ಹಾಡಿ  ರಂಜಿಸಲು  ಉತ್ತಮ ಪಕ್ಕವಾದ್ಯದ ಅಗತ್ಯ ಇದೆ   ಅದನ್ನು  ನನಗೆ  ಮುಂಬೈ  ಮಹಾನಗರದಲ್ಲಿ  ನೀಡಿದವರು  ಆನಂದಣ್ಣ  ಎಂದು  ಹೇಳುತ್ತ ಅಭಿನಂದಿಸಿದರು.
ರವೀಂದ್ರ. ಭಂಡಾರಿಯವರು  ಮಾತನಾಡುತ್ತ ಒಬ್ಬ ನಿಗರ್ವಿ , ಸಜ್ಜನ ಹಿಮ್ಮೆಳ ವಾದಕನನ್ನು ಸಮ್ಮಾನಿಸಲು  ಅತೀವ ಹೆಮ್ಮೆ ಆಗುತ್ತಾ ಇದೆ. ಊರಿನ ವೃತ್ತಿ ಪರ ಕಲಾವಿದರನ್ನು  ನಾವು ಸದಾ ಗೌರವಿಸುತ್ತೇವೆ. ಮುಂಬೈ ಯಂತಹ ಯಾಂತ್ರಿಕ  ಬದುಕಿನ ಮದ್ಯೆಯೂ ಯಕ್ಷಗಾನ ಕ್ಕಾಗಿ ಮಿಡಿಯುವ  ಮನಸುಳ್ಳ  ಆನಂದ ಶೆಟ್ಟಿ ಇನ್ನಾರಂತ ಒಬ್ಬ ಅಪ್ಪಟ ಚಿನ್ನದಂತಹ  ಕಲಾವಿದನಿಗೆ ಸಂದ  ಅರ್ಹ ಗೌರವ.   ಇಂದಿನ ಸಭಾಧ್ಯಕ್ಷರು  ನನ್ನ ಗುರುಗಳು ಆದಂತಹ  ಶ್ರೀ ಪೆರ್ಣಂಕಿಲ  ಹರಿದಾಸ  ಭಟ್ ಅವರ ಅನುಗ್ರಹ ಸದಾ ನಮ್ಮೆಲ್ಲರ  ಮೇಲಿರಲಿ ಎಂದರು.
 ನವೀನ್ ಶೆಟ್ಟಿ  ಇನ್ನಾಬಾಳಿಕೆ  ಮಾತನಾಡುತ್ತ ನಮ್ಮೂರ  ಸರದಾರ ಆನಂದ  ಶೆಟ್ಟಿ ಇನ್ನಾ ದಂಪತಿಗಳನ್ನು  ಗೌರವಿಸಲು  ಹೆಮ್ಮೆಇಂತಹ.ಸ್ಟುತ್ಯಾರ್ಹ ಕಾರ್ಯ  ಆಯೋಜನೆ  ಮಾಡಿರುವ  ವಾಸು ಮಾರ್ನಾಡ್ ಹಾಗೂ ಸುರೇಶ್ ನಂದ್ರೊಳ್ಳಿ ಯವರೊಂದಿಗೆ  ಸದಾ ಇದ್ದೇನೆ ಎಂದು ಶುಭ ಹಾರೈಸಿದರು .

ಆನಂದ ಶೆಟ್ಟಿ ಇನ್ನ ಸನ್ಮಾನಕ್ಕೆ  ಕೃತಜ್ಞತೆ ಸಲ್ಲಿಸುತ್ತಾ   ತನ್ನ ಮುಂಬೈ ಯಾನ ಬದುಕಿನಲ್ಲಿ ಯಕ್ಷಗಾನದ  ಕಲಾವಿದನಾಗಲು  ಸಹಕರಿಸಿದ ಕೀರ್ತಿಶೇಷ  ಪೂಂಜರಂತಹ  ಸವ್ಯಸ್ಯಾಚಿ  ಕಲಾವಿದರು  , ಪೋಲ್ಯಾರಂತಹ ಮೇಧಾವಿ  ಭಾಗವತರು  ಸಹಕರಿದವರನ್ನು ಇಂದು ಸ್ಮರಿಸುತ್ತೇನೆ.ಮುಂಬೈ ಮಹಾನಗರದ  ಎಲ್ಲಾ ಯಕ್ಷಗಾನ ಮಂಡಳಿಗಳಲ್ಲಿ ಭಾಗವಹಿಸಿದ್ದೇನೆ ಎನ್ನಲು ತುಂಬಾ ಸಂತೋಷವಾಗುತಿದೆ. ನನ್ನ. ಸಂಸಾರದ  ಉತ್ತಮ ಸಂಸ್ಕಾರಯುಕ್ತ ನಡತೆಯಿಂದ  ಇದೆಲ್ಲ ಸಾಧ್ಯ ಆಯಿತು. ಮಡದಿ ಮಕ್ಕಳ ಹಾಗೂ ಸೊಸೆಯಂದಿರ  ಸಂಪೂರ್ಣ ಸಹಕಾರ  ಪ್ರೀತಿ ಗೌರವ ನನ್ನ ಮೇಲೆ  ಇದೆ ಹಾಗಾಗಿ ನನಗೆ  ಯಕ್ಷಗಾನದಲ್ಲಿ  ಭಾಗವಹಿಸುವುದಕ್ಕೆ  ಯಾವುದೇ ಅಡಚಣೆ ಆಗಲಿಲ್ಲ.  ನಮ್ಮ ತುಂಬು ಕುಟುಂಬ  ಒಂದೇ  ಮನೆಯಲ್ಲಿ ನಾವು 9 ಜನ ಸದಸ್ಯರು  ಒಟ್ಟಿಗೆ  ವಾಸಿಸುತ್ತಿದ್ದೇವೆ  ಎಂದರೆ  ನಮ್ಮ ಮನೆಯ  ಸದ್ಗ್ರಹಿಣಿಯರೆ  ಕಾರಣ ಎನ್ನುತ್ತಾ, ನನ್ನನು ಪತಿ  ಪತ್ನಿ ಸಮೇತ ಗೌರವಿಸಿದ  ಶ್ರೀರಾಮಾಭಿವಂದ್ಯ ಯಕ್ಷ  ಸೇವಾ ಬಳಗದ ಸರ್ವ ಸದಸ್ಯರಿಗೂ  ವಂದನೆಗಳನ್ನು  ಅರ್ಪಿಸಿದರು .
ಕಾರ್ಯಕ್ರಮದ ನಿರೂಪಣೆಯನ್ನು. ಸಿ ಎ ರಾಜೇಶ್ವರಿ ಶೆಟ್ಟಿ 
ನೆರವೇರಿಸಿದರು, ವಾಸುದೇವ ಮಾರ್ನಾಡ್ ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.ಈ ಸಂದರ್ಭದಲ್ಲಿ ಶ್ರೀ ರಾಮ ತಾರಕ ಮಂತ್ರದ  ಉಚ್ಚಾರಣೆ ಭಕ್ತಿಯಿಂದ ನೆರವೇರಿತು.

ಮೊದಲು ಭಾಗವತ ಶಿರೊಮಣಿಗಳಾದ  ಮದುಕರ ಹೆಗ್ಡೆ ಮಡಾಮಕ್ಕಿ , ಜಯಲಕ್ಷ್ಮಿ ದೇವಾಡಿಗ, ನಾರಾಯಣ ಪೂಜಾರಿ ,   ಮಹೇಂದ್ರ ಶೆಟ್ಟಿ ಇವರಿಂದ ಶ್ರೀ ರಾಮ ಕಥಾಮೃತದ ಯಕ್ಷಗಾನ ಗಾನ ವೈಭವ ನಡೆಯಿತು 



Related posts

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್  ಸ್ಥಳೀಯ ಸಮಿತಿ, ಕಾರ್ಯಾಧ್ಯಕ್ಷರಾಗಿ ಆನಂದ ಕೆ. ಕುಲಾಲ್ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ  ರತ್ನಾ ಡಿ ಕುಲಾಲ್  ಆಯ್ಕೆ

Mumbai News Desk

ಜಗಜ್ಯೋತಿ ಕಲಾ ವೃಂದ, ಡೊಂಬಿವಲಿ: 39ನೇ ವಾರ್ಷಿಕ ಮಹಾಸಭೆ

Mumbai News Desk

ವಿದ್ಯಾವಿಹಾರ್ ಪಶ್ಚಿಮದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಾದುಕಾ ಪ್ರದಾನ, ಪಂಚವಟಿ ತಾಳಮದ್ದಳೆ ಹಾಗೂ ಸನ್ಮಾನ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶ್ರೇಯಸ್ ರಾಘು ಪೂಜಾರಿ ಗೆ ಶೇ 91 ಅಂಕ.

Mumbai News Desk

House tax plan would hurt many California owners, here the bright side

admin

“ಕನ್ನಡಿಗರ ಜ್ಞಾನ ವಿಕಾಸ ಮಂಡಲ ಮೆಹತಾ ಮಹಾವಿದ್ಯಾಲಯ ಐರೋಲಿ: 78ನೇ ಸ್ವಾತಂತ್ರೋತ್ಸವ ಸಂಭ್ರಮದ ಆಚರಣೆ

Mumbai News Desk