October 15, 2026
Mumbai News Kannada
ಪ್ರಕಟಣೆ

ಮಂಗಳೂರು: ಜುಲೈ 19ರಂದು ಮೂಲತ್ವ ಫೌಂಡೇಶನ್‌ನಿಂದ ‘ಆಟಿಡೊಂಜಿ ದಿನ’ ಮತ್ತು ‘ಆಟಿದ ಮದಿಪು’ ಕಾರ್ಯಕ್ರಮ



ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ಜುಲೈ 19, 2026ರ ಭಾನುವಾರದಂದು ಬೆಳಿಗ್ಗೆ 11.30 ಗಂಟೆಗೆ ಮಂಗಳೂರಿನ ಪದವು ಶಾಲೆಯ ಬಳಿ ಇರುವ ಸಿ.ಒ.ಡಿ.ಪಿ ಮದರ್ ತೆರೇಸಾ ಹಾಲ್‌ನಲ್ಲಿ ವಿಶೇಷವಾಗಿ ‘ಆಟಿಡೊಂಜಿ ದಿನ’ ಉದ್ಘಾಟನೆ ಹಾಗೂ ‘ಆಟಿಡ ಮದಿಪು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತದನಂತರ ಮಧ್ಯಾಹ್ನ 1.00 ಗಂಟೆಯಿಂದ ಸಾಂಪ್ರದಾಯಿಕ ಆಟಿದ ಕೂಟ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ಗಣ್ಯ ಉಪಸ್ಥಿತರಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್, ಮಂಗಳೂರಿನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾದ ಕೆ. ಚಿತ್ತರಂಜನ್, ಮೂಡಾ ಮಾಜಿ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್, ಮತ್ತು ಅಲಂಗಾರ್ ಮರೋಳಿಯ ಜ್ವಾಲಾ ಮಹಾಮಾಯಿ ಕಾಲಭೈರವ ದೇವಸ್ಥಾನದ ಅಧ್ಯಕ್ಷರಾದ ಎಮ್. ಸತೀಶ್ ಅವರು ಭಾಗವಹಿಸಲಿದ್ದಾರೆ. ಮೂಲತ್ವ ಫೌಂಡೇಶನ್‌ನ ಪ್ರಕಾಶ್ ಮೂಲತ್ವ ಹಾಗೂ ಸರ್ವ ಸದಸ್ಯರು ಈ ಆಟಿ ಸಂಭ್ರಮದ ಕಾರ್ಯಕ್ರಮಕ್ಕೆ ಸರ್ವರನ್ನೂ ಪ್ರೀತಿಯಿಂದ ಸ್ವಾಗತಿಸಿದ್ದಾರೆ.



Related posts

ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಆರ್ಥಿಕ ಸಹಾಯ:* ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯಿಂದ ಮಾ. 24 ಕ್ಕೆ ಅರ್ಜಿ ವಿತರಣೆ

Mumbai News Desk

ಡಿ. 24ರಂದು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ

Mumbai News Desk

ಅ. 5 ರಂದು ಸಾಂತಾಕ್ರೂಸ್ ಪೇಜಾವರ ಮಠದಲ್ಲಿ ಕುಲಾಲ ಭವನ ಮಂಗಳೂರು ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಮಾ. 28 : ದಿ ಮೊಗವೀರ ಕೋ-ಅಪರೇಟಿವ್ ಬ್ಯಾಂಕ್ ಎಂಪ್ಲಾಯೀಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಪೂಜಾ ಸಮಿತಿಯಿಂದ 44ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

Mumbai News Desk

ಬಂಟರ ಸಂಘ ಮುಂಬಯಿ ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿ ಮಾ 30: ಮಾತಾ ಕಿ ಚೌಕಿ ಕಾರ್ಯಕ್ರಮ.

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿಜ.15 ಮತ್ತು 16ರಂದು ಪ್ರಥಮ ವರ್ಧಂತಿ ಉತ್ಸವ.

Mumbai News Desk