July 21, 2026
Mumbai News Kannada
ಸುದ್ದಿ

ಸರ್ಕಾರಕ್ಕೆ ನಮ್ಮ ಬೇಡಿಕೆ ತಲುಪಿಸಲು ಮಹಾ ಅಧಿವೇಶನ ಅಗತ್ಯ” — ಭಟ್ಕಳ ಪೂರ್ವಭಾವಿ ಸಭೆಯಲ್ಲಿ ಧರ್ಮಪಾಲ್ ಯು. ದೇವಾಡಿಗ







ವಿಶ್ವ ದೇವಾಡಿಗ ಮಹಾಮಂಡಳದ ಆಶ್ರಯದಲ್ಲಿ ದಿನಾಂಕ :20-12-2026 ರಂದು ಉಡುಪಿಯ ಚಿತ್ಪಾಡಿ ಬಯಲು ರಂಗವೇದಿಕೆಯಲ್ಲಿ ನಡೆಯಲಿರುವ ವಿಶ್ವ ದೇವಾಡಿಗ ಮಹಾ ಅಧಿವೇಶನದ ಪೂರ್ವಬಾವಿ ಸಭೆ ಭಟ್ಕಳ ಸಂಘದ ವ್ಯಾಪಿಯ ಪೂರ್ವಭಾವಿ ಸಭೆಯು ಭಟ್ಕಳದ ಖಾಸಗಿಸಭಾಂಗಣದಲ್ಲಿ ಭಟ್ಕಳ ದೇವಾಡಿಗ ಸಂಘದ ಅಧ್ಯಕ್ಷ ಲಕ್ಷ್ಮಣ ದೇವಾಡಿಗರ ಅಧ್ಯಕ್ಷತೆ ಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾದ ವಿಶ್ವ ಮಹಾಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್ ರವರು ಭಟ್ಕಳ ಊರಿನ ಹಾಗೂ ತಮ್ಮ ನಿಕಟ ಸಂಪರ್ಕದ ಬಗ್ಗೆ ವಿವರಿಸುತ್ತಾ ಅಧಿವೇಶನದ ಉದ್ದೇಶ, ಅವಶ್ಯಕತೆಯನ್ನು ವಿವರಿಸಿದರು.

ಅಧ್ಯಕ್ಷರಾದ ಧರ್ಮಪಾಲ್ ಯು ದೇವಾಡಿಗ ಮಾತನಾಡುತ್ತಾ,ನಮ್ಮ ಬೇಡಿಕೆಗಳು ಸರಕಾರದ ಮಟ್ಟಕ್ಕೆ ಮುಟ್ಟಲು ಈ ಮಹಾ ಅಧಿವೇಶನ ಅಗತ್ಯವೆಂದು
ವಿವರಿಸಿದರು ತನ್ನನ್ನು ಅಭಿನಂದಿಸಿದ ಬಗ್ಗೆ ಕೃತಜ್ಞತೆ ಸಲ್ಲಿಸಿದರು .ಮುಂಬೈ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ, ಮಹಾ ಮಂಡಳದ ಉಪಾಧ್ಯಕ್ಷ ನಾಗರಾಜ್ ಪಡುಕೋಣೆ, ಪ್ರದಾನ ಕಾರ್ಯದರ್ಶಿ ಗಣೇಶ್ ಅಂಬಲಪಾಡಿ, ಕಾರ್ಯದರ್ಶಿ
ಯಾದವ ದೇವಾಡಿಗ, ಉಡುಪಿ ಸಂಘದ ಅಧ್ಯಕ್ಷ ರತ್ನಾಕರ್ ಜಿ. ಎಸ್. ಸಮಯೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಘಟನಾ ಕಾರ್ಯದರ್ಶಿ ಜನಾರ್ದನ ಪಡುಪಾಂಬುರು, ಜನಾರ್ದನ ಉಪ್ಪುಂದ, ಚೆನ್ನಪ್ಪ ಮೊಯಿಲಿ, ಜೊತೆ ಕಾರ್ಯದರ್ಶಿ ರಾಜು ದೇವಾಡಿಗ ಕುಂದಾಪುರ, ಉಪಸ್ಥಿತರಿದ್ದರು.



Related posts

ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಪ್ರವೀಣ್ ಭೋಜ ಶೆಟ್ಟಿ ಆಯ್ಕೆ

Mumbai News Desk

ದುಬೈ :ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ  “ದಿ ಬೋಟ್ ಮ್ಯಾನ್ ಹಬ್” ರೆಸ್ಟೋರೆಂಟ್ ಉದ್ಘಾಟನೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ  ಪ್ರದೀಪ್ ಎಸ್. ಶೆಟ್ಟಿ  ದುಬೈ ಇವರು ಸೇರ್ಪಡೆ

Mumbai News Desk

ವಿಶ್ವ ಬಂಟರ ಸಮ್ಮೇಳನದ ಖರ್ಚು ವೆಚ್ಚಗಳ ಸಭೆ

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ವತಿಯಿಂದ ಶ್ರೀ ಶನಿಶಿಂಗ್ನಪುರದಲ್ಲಿ ಶ್ರೀ ಶನಿಗ್ರಂಥ ಪಾರಾಯಣ ಪೂಜೆ

Mumbai News Desk

ಜುಲೈ 9 : ಗಣೇಶಪುರಿಯಲ್ಲಿ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿಗಳ ಮೂರ್ತಿ ಪುನರ್ ಪ್ರತಿಷ್ಠಾಪನೋತ್ಸವ: ಭಕ್ತರಿಗೆ ಅಪೂರ್ವ ದರ್ಶನದ ಸೌಭಾಗ್ಯ

Mumbai News Desk