27 C
Mumbai
September 4, 2026
Mumbai News Kannada
ತುಳುನಾಡು

ಮೂಲತ್ವ ಫೌಂಡೇಶನ್‌ನಿಂದ ‘ಆಟಿದೊಂಜಿ ದಿನ’ ಆಚರಣೆ: ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ, ‘ಮೂಲತ್ವ ಲೋಕ ಪೊರ್ಲು’ ಅನಾವರಣ





ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆದ 10ನೇ ವರ್ಷದ
ಆಟ್ಟಿಡೊಂಜಿ ದಿನ ಕಾರ್ಯಕ್ರಮವು ಪದವು ಶಾಲೆಯ ಬಳಿಯಲ್ಲಿರುವ ಸಿ ಓ ಡಿ ಪಿ ಸಭಾಂಗಣದಲ್ಲಿ ನೆರವೇರಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕರಾದ ವೇದವ್ಯಾಸ ಕಾಮತ್ ಇವರು ಉದ್ಘಾಟಿಸಿ ಮಾತಾಡಿ ಮೂಲತ್ವ ಫೌಂಡೇಶನ್ ಮಾಡುವ ಎಲ್ಲಾ ಕಾರ್ಯಗಳನ್ನು ಕೆಲಸಗಳನ್ನು ಕೊಂಡಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಕಂಕನಾಡಿ ಇದರ ಅಧ್ಯಕ್ಷರಾದ ಶ್ರೀಯುತ ಚಿತ್ತರಂಜನ್, ಮೂಡದ ಮಾಜಿ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಪ್ರೊಫೆಸರ್ ರಾಜ್ ಮೋಹನ್ ರಾವ್, ಡಾಕ್ಟರ್ ಶ್ರೀಮತಿ ಕುಸುಮ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಡಾಕ್ಟರ್ ಸತೀಶ್ ರಾವ್, ಟ್ರಸ್ಟಿನ ಅಧ್ಯಕ್ಷರಾದ ಪ್ರಕಾಶ್ ಮೂಲತ್ವ, ಟ್ರಸ್ಟಿಗಳಾದ ಲಕ್ಷ್ಮೀಶ, ಕಲ್ಪನಾ, ಶೈನಿ ಅಕ್ಷತ ಕದ್ರಿ ಉಪಸ್ಥಿದ್ದರು ಈ ಸಮಯದಲ್ಲಿ ಮೂಲತ್ವ ಲೋಕ ಪೊರ್ಲು ಎಂಬ ನೆಂಪು ಕಾಣಿಗೆ ಯನ್ನು ಎಲ್ಲಾ ಗಣ್ಯರು ಸೇರಿ ಉದ್ಘಾಟಿಸಿದರು. ಮೂಲತ್ವ ಲೋಕ ಪೊರ್ಲು ಎಂಬ ಹೊಸ ಚಿಂತನದ ಬಗ್ಗೆ ಟ್ರಸ್ಟಿನ ಅಧ್ಯಕ್ಷ ಪ್ರಕಾಶ್ ಮೂಲತ್ವ ವಿವರಿಸಿದರು ಇನ್ನು ಮುಂದೆ ಆಟಿ ದೊಂಜಿ ದಿನದಂದು ನಮ್ಮ ತುಳುನಾಡಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈದ ಎಲ್ಲಾ ವರ್ಗದವರಿಗೆ ಈ ಮೂಲತ್ವ ಲೋಕ ಪೊರ್ಲು ಎಂಬ ನೆಂಪು ಕಾಣಿಗೆ ಕೊಟ್ಟು ಗೌರವಿಸಲಾಗುವುದೆಂದು ಟ್ರಸ್ಟ್ ಅಧ್ಯಕ್ಷರು ತಿಳಿಸಿದರು ಈ ವರ್ಷದ ಈ ಗೌರವವನ್ನು ಬಂದ ಎಲ್ಲಾ ಅತಿಥಿಗಳಿಗೆ ಅದರೊಂದಿಗೆ ರಂಗಭೂಮಿ ನಟ ಚಲನಚಿತ್ರ ನಟ ಧಾರ್ಮಿಕ ಮುಂದಾಳು ಧರ್ಮದರ್ಶಿ ಶ್ರೀ ಸತೀಶ್ ಬಂದಲಗೆ ಕೊಟ್ಟು ಗೌರಿಸಲಾಯಿತು.
36 ಬಗೆಯ ಹಲವಾರು ಊಟ ಉಪಚಾರಗಳು ಬಡಿಸಲಾಯಿತು. ಎಲ್ಲರನ್ನು ಟ್ರಸ್ಟಿನ ಅಧ್ಯಕ್ಷರು ಸ್ವಾಗತಿಸಿದರು , ಮಿತಿಲ್ ಇವರು ವಂದನಾರ್ಪಣೆ ಮಾಡಿದರು. ಮಮತಾ ರಾಮ್ ಪ್ರಸಾದ್ ನಿರೂಪಣೆ ಮಾಡಿದರು.



Related posts

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ವಿಜೃಂಭಣೆಯ ಮುಷ್ಟಿ ಕಾಣಿಕೆ ಸಮರ್ಪಣೆ

Mumbai News Desk

ರೋಟರಿ ಕ್ಲಬ್ ಶಂಕರಪುರ ನೂತನ ಅಧ್ಯಕ್ಷರಾಗಿ ಮಾಲಿನಿ ಶೆಟ್ಟಿ ಇನ್ನಂಜೆ ಆಯ್ಕೆ ,

Mumbai News Desk

ಕುಂಬಳೆ ಮುಂಡಪಳ್ಳ  ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಐತಿಹಾಸಿಕ ಕಲ್ಯಾಣೋತ್ಸವದಲ್ಲಿ, ಮಹಾದಾನಿಗೆ ಸನ್ಮಾನ, ಸಹಸ್ರಾರು ಭಕ್ತರು ಭಾಗಿ,

Mumbai News Desk

ಮೂಲ್ಕಿ ಲಯನ್ಸ್ ಕ್ಲಬ್ ಹಾಗೂ ಸಿ.ಎಸ್.ಐ ಶಾಲೆಯ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಪಿಯುಸಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಭವ್ಯ ಸನ್ಮಾನ

Mumbai News Desk

ನಾಗೇಶ ಎಲ್. ಕುಲಾಲ್ ಕುಳಾಯಿ ಅವರು ಸ್ವರ್ಣ ಕುಂಭ ಸಹಕಾರಿ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆ

Mumbai News Desk

ಕುಲಾಲ ಪರ್ಬ ಉದ್ಘಾಟನೆ.

Mumbai News Desk