July 23, 2026
Mumbai News Kannada
ಮುಂಬಯಿ

ಮುಂಬೈ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮಹಿಳಾ ವಿಭಾಗದಿಂದ ‘ಆಟಿಡೊಂಜಿ ದಿನ’ ಸಂಭ್ರಮ







ಮುಂಬೈ, ಜು. 19: ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ.), ಮುಂಬಯಿ ಇದರ ಮಹಿಳಾ ವಿಭಾಗವು ಆಡಳಿತ ಸಮಿತಿ ಹಾಗೂ ಯುವ ವಿಭಾಗದ ಸಹಯೋಗದೊಂದಿಗೆ ಆಷಾಢ ಮಾಸದ ಒಂದು ದಿನ ‘ಆಟಿಡೊಂಜಿ ದಿನ’ವನ್ನು ಜುಲೈ 19ರಂದು ಸಂಜೆ 4ರಿಂದ 7ರವರೆಗೆ ಮೀರಾರೋಡ್ (ಪೂರ್ವ)ನ “ಪ್ರಿಯಾ” ಶ್ರೀ ವಿಶ್ವಕರ್ಮ ಭವನದಲ್ಲಿ ಸಂಭ್ರಮದಿಂದ ಆಚರಿಸಿತು.

ಕಾರ್ಯಕ್ರಮವನ್ನು ಅಸೋಸಿಯೇಷನ್ ಅಧ್ಯಕ್ಷ ರವೀಶ್ ಜಿ. ಆಚಾರ್ಯ, ಮಾಜಿ‌ ಅಧ್ಯಕ್ಷರಾದ ಮಹಾಬಲ ಆಚಾರ್ಯ, ಉಪಾಧ್ಯಕ್ಷ ಗಣೇಶ್ ಕುಮಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಗೋಪಾಲ್ ಆಚಾರ್ಯ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷ ಸಂದೇಶ್ ಆಚಾರ್ಯ ಉಪಸ್ಥಿತರಿದ್ದು ಉದ್ಘಾಟಿಸಿದರು.

ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅಧ್ಯಕ್ಷ ರವೀಶ್ ಜಿ. ಆಚಾರ್ಯ ಮಾತನಾಡಿ, ನಮ್ಮ ಪೂರ್ವಜರು ಪ್ರಕೃತಿಯೊಂದಿಗೆ ಹೊಂದಿಕೊಂಡು ರೂಪಿಸಿದ ಸಂಸ್ಕೃತಿ, ಸಂಪ್ರದಾಯ ಹಾಗೂ ಜೀವನ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕೆಂದು ಕರೆ ನೀಡಿದರು. ಹಾಗೂ ಮಹಿಳಾ ವಿಭಾಗದ ಸದಸ್ಸೆಯರು ಅತ್ಯಂತ ಮುತುವರ್ಜಿಯಿಂದ ಕಷ್ಟ ಪಟ್ಟು ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಮಾಡಿ ತಂದಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದರು.

ಸ್ವಾಗತ ಭಾಷಣ ಮಾಡಿದ ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ಗೋಪಾಲ್ ಆಚಾರ್ಯ ಅವರು, ಆಶಾಢ ಮಾಸದಲ್ಲಿ ಆಚರಿಸುವ ಆಟಿಡೊಂಜಿ ದಿನದ ಮಹತ್ವವನ್ನು ವಿವರಿಸಿ, ನಮ್ಮ ಪೂರ್ವಜರ ಜೀವನ ಪದ್ಧತಿ, ಆಹಾರ ಸಂಸ್ಕೃತಿ ಹಾಗೂ ಪ್ರಕೃತಿಯೊಂದಿಗಿನ ನಂಟನ್ನು ಸ್ಮರಿಸುವ ಅಪೂರ್ವ ಆಚರಣೆಯಾಗಿದೆ ಎಂದು ತಿಳಿಸಿದರು.

ಸಂಘದ ಮಾಜಿ ಅಧ್ಯಕ್ಷರಾದ ಎಂ ಎ ಆಚಾರ್ಯ ಅವರು ಊರಿನ ಮಳೆಗಾಲದ ತಿಂಡಿತಿನಸುಗಳನ್ನು ಮಾಡಿ ಊರಿನ‌ನೆನಪನ್ನು‌ ಹಸಿರಾಗಿಸಿದ್ದಕ್ಕೆ ಮಹಿಳಾ ವಿಭಾಗವನ್ನು ಅಭಿನಂದಿಸಿದರಲ್ಲದೆ ಆಟಿ ತಿಂಗಳಿನಲ್ಲಿ ಆಡುವ ಆಟಗಳನ್ನೂ ಆಯೋಜಿಸಿ ಈ ದಿನವನ್ನು ಇನ್ನಷ್ಟು ಅರ್ಥಪೂರ್ಣವನ್ನಾಗಿಸಬಹುದು ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಉಪಾಧ್ಯಕ್ಷ ಗಣೇಶ್ ಕುಮಾರ್ ಮಾತನಾಡುತ್ತಾ ಕೃಷಿಪ್ರಧಾನವಾದ ತುಳುನಾಡಿನಲ್ಲಿ ವಿಪರೀತ ಮಳೆ ಬರುವ ಆಟಿ ತಿಂಗಳು ರಜೆಯ ತಿಂಗಳಾಗಿದ್ದು ಮನೆಯಲ್ಲೇ ಇರುವ ಪರಿಸ್ಥಿತಿಯಲ್ಲಿ ಆ ಕಾಲದಲ್ಲಿ ಸಿಗುವ ಸೊಪ್ಪು ತರಕಾರಿಗಳ ವಿಶೇಷ ತಿಂಡಿಗಳನ್ನು ಮಾಡಿ ಸವಿಯುವುದರ ಮೂಲಕ ನಾಲಗೆ ರುಚಿ ಮತ್ತು ಆರೋಗ್ಯದ ರಕ್ಷಣೆಯನ್ನು ಮಾಡಿಕೊಳ್ಳುತ್ತಿದ್ದರು. ಇಂದು ವಿವಿಧ ತಿಂಡಿಗಳನ್ನು ಮಾಡಿ ಅಂತಹ ದಿನಗಳನ್ನು ನೆನಪಿಸುವ ಕೆಲಸವನ್ನು ಮಾಡಿರುವ ನಮ್ಮ ಮಹಿಳಾ ವಿಭಾಗ ಅಭಿನಂದನೀಯ ಎಂದರು.

ಯುವವಿಭಾಗದ ಕಾರ್ಯಾಧ್ಯಕ್ಷ ಸಂದೇಶ್ ಆಚಾರ್ಯ ಮಾತನಾಡಿ ಇವತ್ತನ ಕಾರ್ಯಕ್ರಮದ ಮೂಲಕ ನಮಗೆ ನಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳುವ ಅವಕಾಶ ಸಿಕ್ಕತು. ಮುಂದೆ ಇಂತಹ ಕಾರ್ಯಕ್ರಮಗಳಲ್ಲಿ ಯುವಜನಾಂಗ ಇನ್ನೂ ಹೆಚ್ವಿನ ಮಟ್ಟದಲ್ಲಿ ಪಾಲ್ಗೊಳ್ಳುವಂತೆ ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ರಾಜೇಶ್ವರಿ ಸತೀಶ್ ಹಾಗೂ ಶ್ರೀಮತಿ ಶೋಭಾ ದಾಮೋದರ್ ಅವರು ಜಾನಪದ ಗೀತೆಗಳನ್ನು ಸುಮಧುರವಾಗಿ ಪ್ರಸ್ತುತಪಡಿಸಿದರು. ಬಳಿಕ ವಿವಿಧ ಮನರಂಜನಾ ಆಟಗಳು ಹಾಗೂ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಹಿಳಾ ಸದಸ್ಯೆಯರು ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿದ ವಿವಿಧ ಆಟಿ ವಿಶೇಷ ಖಾದ್ಯಗಳ ಪ್ರದರ್ಶನ ಹಾಗೂ ಸವಿಯುವ ಕಾರ್ಯಕ್ರಮವು ಎಲ್ಲರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು. ಸದಸ್ಯರು, ಕುಟುಂಬಸ್ಥರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತುಳುನಾಡಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸಿದ ಆಟಿಡೊಂಜಿ ದಿನದ ಆಚರಣೆಯನ್ನು ಯಶಸ್ವಿಗೊಳಿಸಿದರು.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ನವಿ ಮುಂಬೈ ಶಾಖೆಯಲ್ಲಿ ಮಂಡಳಿಯ 124ನೇ ಸಂಸ್ಥಾಪನಾ ದಿನಾಚರಣೆ

Mumbai News Desk

ಶ್ರೀಮದ್ಭಾರತ ಮಂಡಳಿಯ ೧೪೬ ನೇ ಮಂಗಳೋತ್ಸವ

Mumbai News Desk

ಜಿ ಎಸ್ ಬಿ ಸಭಾ, ಮುಲುಂಡ್, ಸಾಂಸ್ಕೃತಿಕ ಸ್ನೇಹ ಸಮ್ಮಿಲನ, ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ

Mumbai News Desk

ಮೀರಾರೋಡ್ ಪೂರ್ವದ ಶ್ರೀ ರಾಧಾ ಕೃಷ್ಣ ವೃದ್ಧಾಶ್ರಮಕ್ಕೆ ಬಂಟರ ಸಂಘ ಮುಂಬಯಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ  ಮಹಿಳಾ ವಿಭಾಗ ಭೇಟಿ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ: ಸತತ ನಾಲ್ಕನೇ ವರ್ಷದ ರಕ್ತದಾನ ಶಿಬಿರದಲ್ಲಿ 182 ಯುನಿಟ್ ರಕ್ತ ಸಂಗ್ರಹದ ದಾಖಲೆ

Mumbai News Desk

ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ಮಲಾಡ್28ನೇ ವರ್ಷದ ಅಯ್ಯಪ್ಪ ಮಹಾಪೂಜೆ ಸಂಪನ್ನ

Mumbai News Desk