July 27, 2026
Mumbai News Kannada
ಪ್ರಕಟಣೆ

ಗೋರೆಗಾಂವ್ ಆಶ್ರಮದಲ್ಲಿ ಜುಲೈ 28, 29ರಂದು ಗುರು ಪೂರ್ಣಿಮೆ: ಏಕಾಹ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ








​ಮುಂಬಯಿ: ಗೋರೆಗಾಂವ್ ಪೂರ್ವದ ಸಹಕಾರ್ ವಾಡಿಯಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ ಜುಲೈ 28 ಮತ್ತು 29ರಂದು ಗುರು ಪೂರ್ಣಿಮೆ ಮಹೋತ್ಸವದ ಅಂಗವಾಗಿ ಎರಡು ದಿನಗಳ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
​ಕಾರ್ಯಕ್ರಮಗಳ ವಿವರ:
​ಜುಲೈ 28 (ಮಂಗಳವಾರ): ರಾತ್ರಿ 7.15ಕ್ಕೆ “ಏಕಾಹ ಭಜನ್” ಉದ್ಘಾಟನೆ ನಡೆಯಲಿದ್ದು, ಬಳಿಕ “ಓಂ ನಮೋ ಭಗವತೇ ನಿತ್ಯಾನಂದಾಯ” ನಾಮಸ್ಮರಣೆ ಜರುಗಲಿದೆ.
​ಜುಲೈ 29 (ಬುಧವಾರ):
​ಬೆಳಿಗ್ಗೆ 7.16: ಏಕಾಹ ಭಜನ್ ಮಂಗಲೋತ್ಸವ.
​ಬೆಳಿಗ್ಗೆ 8.00 – 8.30: ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಮೂರ್ತಿ ಅಭಿಷೇಕ ಹಾಗೂ ತೀರ್ಥ ಪ್ರಸಾದ ವಿತರಣೆ.
​ಬೆಳಿಗ್ಗೆ 9.30 – 11.30: ಭಜನಾ ಸಮಿತಿಯ ಸದಸ್ಯರಿಂದ ಭಜನ ಸಂಕೀರ್ತನೆ.
​ಮಧ್ಯಾಹ್ನ: ಮಹಾಪೂಜೆ.
​ಮಧ್ಯಾಹ್ನ 12.30 – 3.00: ಭಕ್ತಾದಿಗಳಿಗೆ ಅನ್ನಸಂತರ್ಪಣೆ (ಮಹಾಪ್ರಸಾದ).
​ಸಂಜೆ 6.00 – ರಾತ್ರಿ 9.00: ಆಶ್ರಮದ ಯುವ ಘಟಕದ ಸದಸ್ಯರಿಂದ “Lads of Sadguru” ಶೀರ್ಷಿಕೆಯಡಿಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ.
​ಗುರುಭಕ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸದ್ಗುರು ನಿತ್ಯಾನಂದ ಗುರುಗಳ ಕೃಪೆ ಹಾಗೂ ಪ್ರಸಾದವನ್ನು ಸ್ವೀಕರಿಸಬೇಕಾಗಿ ನಿತ್ಯಾನಂದ ಆಶ್ರಮದ ಗೌರವಾಧ್ಯಕ್ಷರಾದ ಮೋಹನ್ ಪೂಜಾರಿ, ಅಧ್ಯಕ್ಷರಾದ ರಾಘು ಮೂಲ್ಯ, ಮುಖ್ಯ ಸಂಚಾಲಕರಾದ ಡಾ. ಶೈಲೇಶ್ ಜಿ., ಉಪಾಧ್ಯಕ್ಷರಾದ ಬಾಲಕೃಷ್ಣ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲಿಯಾನ್, ಕೋಶಾಧಿಕಾರಿ ಮುಂಡಪ್ಪ ಮೂಲ್ಯ, ಜೊತೆ ಕಾರ್ಯದರ್ಶಿ ಶಶಿಕಲಾ ಎಸ್. ಕೋಟ್ಯಾನ್, ಜೊತೆ ಕೋಶಾಧಿಕಾರಿ ಬಬಿತಾ ಜೆ. ಕೋಟ್ಯಾನ್, ಮಹಿಳಾ ವಿಭಾಗದ ಶಾಂಭವಿ ಕೆ. ಪೂಜಾರಿ, ಪೂರ್ಣಿಮಾ ಶೆಟ್ಟಿ, ಸುಮತಿ ಪೂಜಾರಿ, ರೇವತಿ ಸಾಲಿಯಾನ್ ಹಾಗೂ ಪೂಜಾ ಸಮಿತಿಯ ವಿಶ್ವನಾಥ್ ಎಸ್. ಪೂಜಾರಿ, ರವಿ ಶೆಟ್ಟಿ, ಪ್ರೇಮಲತಾ ಆರ್. ಮೂಲ್ಯ, ಸುಧಾಕರ ಅಮೀನ್, ಯುವ ಘಟಕದ ಸದಸ್ಯರು ಮತ್ತು ವ್ಯವಸ್ಥಾಪಕ ಸಮಿತಿಯ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.



Related posts

ಹೂಡೆಯಲ್ಲಿ ಜುಲೈ 19 ರಂದು ವೈಭವದ “ಆಟಿದ ಐಸಿರಿ ತುಳುವೆರೆ ಬದ್ಕ್‌”

Mumbai News Desk

ಶಹಾಡ್‌ನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ 64ನೇ ವಾರ್ಷಿಕೋತ್ಸವ: ಏ. 12ರಿಂದ ಧಾರ್ಮಿಕ ಸಂಭ್ರಮ

Mumbai News Desk

ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆದಿ ಮೂಲಸ್ಥಾನ ಗೋಂಟು, ಮುಲ್ಕಿ : ಎ. 22ರಿಂದ ಎ. 26ರ ತನಕ ಬ್ರಹ್ಮ ಕಲಶೋತ್ಸವ ಮತ್ತು ವರ್ಧಂತ್ಯೋತ್ಸವ

Mumbai News Desk

ಎ. 13ರಂದು ಮಾಡೂರು ಶ್ರೀ ಪಾಡಾಂಗರ ಭಗವತಿ ಕ್ಷೇತ್ರದಲ್ಲಿ ಕುಮಾರ್ ಬಂಗೇರ ಮತ್ತು ಮನೆಯವರಿಂದ ಹರಕೆಯ ಕೋಲ

Mumbai News Desk

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಕೋಟೆ; ನಾಲಾಸೋಪಾರ ಮೇ 27. ಶ್ರೀ ಶನಿ ಜಯಂತಿ ಉತ್ಸವ.

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯಲ್ಲಿ 8 ರಿಂದ 10 ನೇ ತರಗತಿಗೆ ನೇರ ಪ್ರವೇಶ. : ತುಳು ಕನ್ನಡಿಗರಿಗೆ ಸದಾವಕಾಶ

Mumbai News Desk