29 C
Mumbai
September 12, 2026
Mumbai News Kannada
ಪ್ರಕಟಣೆ

ಮಂಗಳೂರಿನ ಮೂಲತ್ವ ಫೌಂಡೇಶನ್ ವತಿಯಿಂದ ಜುಲೈ 29ರಂದು ಗುರುಪೂರ್ಣಿಮೆ ಮಹೋತ್ಸವ





ಮಂಗಳೂರು: ನಗರದ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ “ನಾನೇ ನೀನು, ನೀನೇ ನಾನು” ಎಂಬ ತತ್ತ್ವದೊಂದಿಗೆ ಜುಲೈ 29, 2026ರ ಬುಧವಾರದಂದು ಗುರುಪೂರ್ಣಿಮೆ ಮಹೋತ್ಸವವನ್ನು ಮಂಗಳೂರಿನ ಸುವರ್ಣ ರೆಸಿಡೆನ್ಸಿ, ಮಾರಿಕಾಂಬ ದೇವಸ್ಥಾನದ ರಸ್ತೆ, ತಾರೇತೋಟ ಇಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಗಳೊಂದಿಗೆ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 7.30ರಿಂದ ರಾತ್ರಿ 8.30ರವರೆಗೆ ನಿರಂತರವಾಗಿ ಪೂಜಾ ಕೈಂಕರ್ಯಗಳು ನೆರವೇರಲಿವೆ. ಕಾರ್ಯಕ್ರಮದ ಭಕ್ತಿ ಸಂಗೀತದ ಭಾಗವಾಗಿ ಬೆಳಿಗ್ಗೆ 11.00ರಿಂದ 12.30ರವರೆಗೆ ‘ಶಿವಶಕ್ತಿ ಭಜಕ ವೃಂದ ಕಾವೂರು’ ಹಾಗೂ ಸಂಜೆ 6.00ರಿಂದ 7.30ರವರೆಗೆ ‘ಶ್ರೀ ರಾಮ ಭಜನಾ ಮಂದಿರ ಮರೋಳಿ’ ತಂಡಗಳಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ ಜರುಗಲಿದೆ. ಭಕ್ತಾದಿಗಳಿಗೆ ಮಧ್ಯಾಹ್ನ 1.00 ಗಂಟೆಗೆ ಹಾಗೂ ರಾತ್ರಿ 8.00 ಗಂಟೆಗೆ ಮಹಾ ಅನ್ನಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ.
ಈ ಸದ್ಭಾವನಾ ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರೀ ಪ್ರಕಾಶ್ ಮೂಲತ್ವ ಹಾಗೂ ಸಂಸ್ಥೆಯ ಸರ್ವ ಸದಸ್ಯರು ಸರ್ವ ಭಕ್ತಾದಿಗಳನ್ನು ಆದರದಿಂದ ಸ್ವಾಗತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9611496044 ಅಥವಾ 9036478093 ಹಾಗೂ ವೆಬ್‌ಸೈಟ್ www.moolathva.org ಅನ್ನು ಸಂಪರ್ಕಿಸಬಹುದು.



Related posts

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿಗೆ ಯಕ್ಷಧ್ರುವ ಕಲಾ ಗೌರವ

Mumbai News Desk

ಜ.21 ರಂದು ವಸಾಯಿ ತಾಲೂಕು ಮೊಗವೀರ ಸಂಘ, ತುಳು-ಕನ್ನಡಿಗರಿಗಾಗಿ ವಾಲಿಬಾಲ್, ತ್ರೋಬಾಲ್ ಪಂದ್ಯಾಟ

Mumbai News Desk

ಬಿಲ್ಲವರ ಅಸೋಸಿಯೇಷನ್ ಭಾಯಂದರ್ ‌ ಸ್ಥಳೀಯ ಕಚೇರಿ:ಸೆ.13 ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಆಚರಣೆ

Mumbai News Desk

ಸೆ. 5 ರಂದು ಭಾರತದ “Metro Man of India” ಪದ್ಮವಿಭೂಷಣ ಡಾ. ಇ ಶ್ರೀಧರನ್ ಗೆ ‘ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣ ಪ್ರಶಸ್ತಿ ‘

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ್ -ಥಾಣೆ: ಅಕ್ಟೋಬರ್ 17ರಂದು ಮಾಸಿಕ ಸಂಕ್ರಮಣ ಪೂಜೆ

Mumbai News Desk

ಜಗಜ್ಯೋತಿ ಕಲಾವೃಂದದಿಂದ ಮಹಿಳೆಯರಿಗಾಗಿ ಅಖಿಲ ಭಾರತ ಮಟ್ಟದ ಕಥಾ ಮತ್ತು ಕವಿತಾ ಪ್ರಶಸ್ತಿ ಸ್ಪರ್ಧೆ ಆಹ್ವಾನ

Mumbai News Desk