28 C
Mumbai
September 18, 2026
Mumbai News Kannada
ಸುದ್ದಿ

ದಿಶಾ ಸಾಲಿಯನ್ ಪ್ರಕರಣ: ಎಫ್‌ಐಆರ್ ದಾಖಲಿಸದ ಮುಂಬೈ ಪೊಲೀಸರನ್ನು ತೀವ್ರವಾಗಿ ಪ್ರಶ್ನಿಸಿದ ಬಾಂಬೆ ಹೈಕೋರ್ಟ್





ಮಾಜಿ ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯನ್ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರ ಕಾರ್ಯವೈಖರಿಯನ್ನು ಬಾಂಬೆ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 2020 ರ ಜೂನ್ 8 ರಂದು ಮಲಾಡ್‌ನ ವಸತಿ ಕಟ್ಟಡದ 14 ನೇ ಮಹಡಿಯಿಂದ ಬಿದ್ದು ನಿಧನರಾದ ದಿಶಾ ಸಾಲಿಯನ್ ಅವರ ಸಾವಿನ ಸುತ್ತ ಅನುಮಾನಗಳಿವೆ ಎಂದು ಅವರ ತಂದೆ ಸತೀಶ್ ಸಾಲಿಯನ್ ದೂರು ನೀಡಿದ್ದರೂ, ಪೊಲೀಸರು ತಕ್ಷಣವೇ ಎಫ್‌ಐಆರ್ ದಾಖಲಿಸಲು ಏಕೆ ವಿಫಲರಾದರು ಎಂದು ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರ ಪೀಠ ಸೋಮವಾರ ಪ್ರಶ್ನಿಸಿದೆ. ಪ್ರಕರಣವನ್ನು ಆರಂಭದಿಂದಲೂ ಅಪಘಾತಕಾರಿ ಸಾವು ಎಂದು ಪರಿಗಣಿಸಿ ಆತ್ಮಹತ್ಯೆ ಎಂಬ ತೀರ್ಮಾನಕ್ಕೆ ಬಂದಿದ್ದ ಪೊಲೀಸರಿಗೆ, 14 ನೇ ಮಹಡಿಯಿಂದ ಬಿದ್ದರೂ ಬಲಿಪಶುವಿನ ದೇಹದ ಮೇಲೆ ಯಾವುದೇ ಗಾಯಗಳಿರಲಿಲ್ಲ ಎಂಬ ಮರಣೋತ್ತರ ವರದಿಯ ವೈರುಧ್ಯವನ್ನು ಹೈಕೋರ್ಟ್ ಎತ್ತಿಹಿಡಿಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕ ಅಭಿಯೋಜಕರು, ಛಾಯಾಚಿತ್ರಗಳಲ್ಲಿ ತಲೆಗೆ ಗಾಯಗಳಿರುವುದು ಕಂಡುಬಂದಿದೆ ಎಂದರು. ಆದರೆ, ಅರ್ಜಿದಾರರ ಪರ ವಕೀಲ ನೀಲೇಶ್ ಓಜಾ ಅವರು ಈ ಹೇಳಿಕೆಯನ್ನು ಸಖತ್ ಆಗಿ ವಿರೋಧಿಸಿ, ಪೊಲೀಸರು ಆರಂಭದಲ್ಲಿ ತೋರಿಸಿದ ಫೋಟೋಗಳಲ್ಲಿ ಗಾಯಗಳಿರಲಿಲ್ಲ, ನಂತರ ನಕಲಿ ಫೋಟೋಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು. ದಿಶಾ ಸಾಲಿಯನ್ ಅವರ ತಂದೆ ಸತೀಶ್ ಸಾಲಿಯನ್ ತಮ್ಮ ಅರ್ಜಿಯಲ್ಲಿ, ತಮ್ಮ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಹಾಗೂ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ರಾಜಕೀಯ ಮರೆಮಾಚುವಿಕೆ ನಡೆದಿದೆ ಎಂದು ಆರೋಪಿಸಿದ್ದು, ಪ್ರಕರಣದ ಸಿಬಿಐ ತನಿಖೆ ಮತ್ತು ಶಾಸಕ ಆದಿತ್ಯ ಠಾಕ್ರೆ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದಾರೆ. ಅರ್ಜಿದಾರರಿಗೆ ಅಗತ್ಯ ತನಿಖಾ ದಾಖಲೆಗಳನ್ನು ನೀಡದ ಮುಂಬೈ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 24 ಕ್ಕೆ ಮುಂದೂಡಿದೆ.



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಉಡುಪಿಯಲ್ಲಿ ಜರಗಿದ ಯಶಸ್ವಿ ಸರಣಿ ಕಾರ್ಯಕ್ರಮಗಳು

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿ ಲೋಕಾರ್ಪಣೆ

Mumbai News Desk

ಕೇಂದ್ರ ಬಜೆಟ್ 2025ರ ಪ್ರಮುಖ ಮುಖ್ಯಾಂಶಗಳು

Mumbai News Desk

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಡಾ.ರವಿರಾಜ್ ಸುವರ್ಣ ನೇಮಕ.

Mumbai News Desk

ಮೈತ್ರಿ ಮಲ್ಲಿಗೆ ಮಿಸ್ಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿ, 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಪರ್ಧಿಗಳಿದ್ದ ಕಣದಲ್ಲಿ ರಾಜ್ಯಕ್ಕೆ ಪ್ರಶಸ್ತಿ ಗೆದ್ದು ಕೊಟ್ಟ ಏಕೈಕ ಸಾಧಕಿ

Mumbai News Desk

ಉಡುಪಿ : ಉದ್ಯಮಿ, ರೌಡಿ ಶೀಟರ್ ಸೈಪುದ್ದೀನ್ ಭೀಕರ ಹತ್ಯೆ

Mumbai News Desk