28.4 C
Mumbai
August 5, 2026
Mumbai News Kannada
ಸುದ್ದಿ

ಅಮೇರಿಕಾದ ಬಾನಾ 47ನೇ ವಾರ್ಷಿಕೋತ್ಸವದ 25ನೇ ಸಮ್ಮೇಳನ “ದಿಬ್ಬಣ” – ಮಹಾ ಅಧಿವೇಶನ: ರಾಜರ್ಷಿ ಕೆ. ವಾಸುದೇವ ಶೆಟ್ಟಿ ಭಾಗಿ





ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ನವನಿರ್ಮಾಣದ ರೂವಾರಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜರ್ಷಿ ಕೆ. ವಾಸುದೇವ ಶೆಟ್ಟಿಯವರು ಜುಲೈ 30 ರಿಂದ ಆಗಸ್ಟ್ 2ರವರೆಗೆ ನಾಲ್ಕು ದಿನಗಳ ಪರ್ಯಂತ ಅಮೇರಿಕಾದ ಬಾನಾ (ಬಂಟ್ಸ್ ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ) 47ನೇ ವಾರ್ಷಿಕೋತ್ಸವದ 25ನೇ ಸಮ್ಮೇಳನ ‘ದಿಬ್ಬಣ’ ಮಹಾ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸುಮಾರು 250 ಬಂಟ ಕುಟುಂಬಗಳ 600ಕ್ಕೂ ಅಧಿಕ ಸದಸ್ಯರು ಭಾಗಿಯಾಗಿದ್ದ ಈ ಸಮಾರಂಭದಲ್ಲಿ, ದಿ ಅಸೋಸಿಯೇಷನ್ ಆಫ್ ಕನ್ನಡ ಕೂಟಸ್ ಆಫ್ ಅಮೇರಿಕಾದ ಅಧ್ಯಕ್ಷ ಅಮರ್‌ನಾಥ್ ಗೌಡ, ಆಲ್ ಅಮೇರಿಕಾ ತುಳು ಅಸೋಸಿಯೇಷನ್ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಬೋಸ್ಟನ್, ಹೆರಂಭ ಇಂಡಸ್ಟ್ರೀಸ್ ಪ್ರೈ. ಲಿ. ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ದುಬೈ ಫಾರ್ಚ್ಯೂನ್ ಗ್ರೂಪ್ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಆಸ್ಟ್ರೇಲಿಯಾ ಸಿಡ್ನಿಯ ಒಮೆಗಾ ಇಂಡಸ್ಟ್ರೀಸ್ ಪ್ರೈ. ಲಿ. ಆಡಳಿತ ನಿರ್ದೇಶಕರಾದ ಕೆ. ಶಿವರಾಮ ಶೆಟ್ಟಿ, ಬೆಲ್ಲೆವ್ಯೂ ಗೌರವಾನ್ವಿತ ಉಪ ಮೇಯರ್ ಡೇವ್ ಹ್ಯಾಮಿಲ್ಟನ್, ಗೌರವಾನ್ವಿತ ವಾಷಿಂಗ್ಟನ್ ಸ್ಟೇಟ್ ಸೆನೆಟರ್ ಮಂಕಾ ಧಿಂಗ್ರಾ, ಸಿಯಾಟಲ್‌ನ ಭಾರತದ ಗೌರವಾನ್ವಿತ ಕಾನ್ಸುಲ್ ಜನರಲ್ ಪ್ರಕಾಶ್ ಗುಪ್ತಾ ಹಾಗೂ ಇನ್ನಿತರ ಮುಖಂಡರು ಭಾಗಿಯಾಗಿದ್ದರು.

ಈ ಮಹಾ ಅಧಿವೇಶನದಲ್ಲಿ ಕಾಪು ಶ್ರೀ ಮಾರಿಯಮ್ಮನ ಪ್ರತಿನಿಧಿಯಾಗಿ ಭಾಗವಹಿಸಿದ್ದ ವಾಸುದೇವ ಶೆಟ್ಟಿಯವರು ದೇವಳದ ದ್ವಿತೀಯ ಹಂತದ ಕಾಮಗಾರಿಗಳಾದ ನೂತನ ಭೋಜನ ಶಾಲೆ, ವಿಶೇಷ ಅತಿಥಿ ಗೃಹ, ವಾಣಿಜ್ಯ ಸಂಕೀರ್ಣ, ಯಾಗಶಾಲೆ ಮತ್ತು ವಸ್ತುಸಂಗ್ರಹಾಲಯದ ಸಹಿತ ದೇವಳದಲ್ಲಿ ಪ್ರಸ್ತುತ ಲಭ್ಯವಿರುವ ವಿಶೇಷ ಸೇವೆಗಳಾದ ಘಂಟಾನಾದ ಸೇವೆ, ನವದುರ್ಗಾ ಲೇಖನ ಯಜ್ಞ, ಶಿಲಾಸೇವೆ, ನಿತ್ಯಾನ್ನದಾನ, ಚಂಡಿಕಾಯಾಗದ ಸವಿವರ ಮಾಹಿತಿಯನ್ನು ನೀಡಿದರು.

ಇದರ ಜೊತೆಗೆ, “ಕಾಪು ನಗರ ಸಹಿತವಾಗಿ ಪ್ರತಿಯೊಂದು ಗ್ರಾಮಗಳು ಅಭಿವೃದ್ಧಿಯಾಗಬೇಕು. ಇದಕ್ಕೆ ಪೂರಕವಾಗಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರ್ಕಾರ ಯೋಜನೆಯನ್ನು ರೂಪಿಸುತ್ತಿದೆ. ಅಮೇರಿಕಾದಲ್ಲಿ ನೆಲೆಸಿರುವ ನಿಮ್ಮಲ್ಲಿ ಯಾರಾದರೂ ಕಾಪುವಿನಲ್ಲಿ ರೆಸಾರ್ಟ್, ಹೋಮ್ સ્ટે, ಹೋಟೆಲ್ ಅಥವಾ ಕೈಗಾರಿಕೆಗಳಿಗೆ ಹೂಡಿಕೆ ಮಾಡುವುದಿದ್ದರೆ ಕಾಪು ಚಾರಿಟೇಬಲ್ ಟ್ರಸ್ಟ್ ಪೂರ್ಣ ಸಹಕಾರವನ್ನು ನೀಡುತ್ತದೆ” ಎಂದು ಹೇಳಿದರು.

ಕಾಪುವಿನ ಅಮ್ಮನ ಸನ್ನಿಧಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಜರಗುತ್ತಿರುವ ನವದುರ್ಗಾ ಲೇಖನ ಯಜ್ಞದ ಪುಸ್ತಕದೊಂದಿಗೆ ಅಮ್ಮನ ಪ್ರಸಾದವನ್ನು ಒಂಬತ್ತು ಜನರಿಗೆ ನೀಡಿ, ಅವರನ್ನು ಯು.ಎಸ್.ಎ ಸಿಯಾಟಲ್‌ನ ‘ಕಾಪು ಕ್ಷೇತ್ರ ಮಾತೃ ವೈಭವ – ಸೇವಾ ಸಮಿತಿ’ಯ ಸದಸ್ಯರನ್ನಾಗಿ ನೇಮಿಸಿ ಪ್ರಥಮವಾಗಿ ಚಾಲನೆ ನೀಡಲಾಯಿತು. ಅಲ್ಲದೆ, ಅಮೇರಿಕಾದಲ್ಲಿ ಈಗಾಗಲೇ ಇರುವ ಸಮಿತಿಯನ್ನು ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಬೋಸ್ಟನ್ ನೇತೃತ್ವದಲ್ಲಿ ‘ಕಾಪು ಕ್ಷೇತ್ರ ಮಾತೃ ವೈಭವ ಸೇವಾ ಸಮಿತಿ – ಅಮೇರಿಕಾ ಘಟಕ’ ಎಂದು ಮರುನಾಮಕರಣಗೊಳಿಸಲಾಯಿತು.

ಮುಂದುವರಿದು ಮಾತನಾಡಿದ ಅವರು, ದ್ವಿತೀಯ ಹಾಗೂ ತೃತೀಯ ಹಂತದ ಕಾಮಗಾರಿಗೂ ನಾವೆಲ್ಲರೂ ಶ್ರಮಿಸಬೇಕು. ಇದಕ್ಕಾಗಿ ಕಾಪು ಚಾರಿಟೇಬಲ್ ಟ್ರಸ್ಟ್ ಮುಖಾಂತರ ಪ್ರಪಂಚದಾದ್ಯಂತ ಇರುವ ಸಮಿತಿಗಳನ್ನು ಇನ್ನಷ್ಟು ಬಲಪಡಿಸುವ ಯೋಜನೆಯು ನಮ್ಮ ಮುಂದಿದೆ ಎಂದರು.

ಈ ಸಂದರ್ಭದಲ್ಲಿ ಬಂಟ್ಸ್ ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ ಇದರ ಅಧ್ಯಕ್ಷರಾದ ಮಂಜುನಾಥ್ ಆರ್. ಶೆಟ್ಟಿ, ಉಪಾಧ್ಯಕ್ಷರಾದ ಹಿತೇಶ್ ಶೆಟ್ಟಿ, ರಘು ಶೆಟ್ಟಿ, ಸೀಮಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಮೀತಾ ಶೆಟ್ಟಿ, ಸದಸ್ಯರಾದ ಸುಮನಾ ನಟರಾಜ್ ಶೆಟ್ಟಿ, ಶಾಮಾ ಶೆಟ್ಟಿ, ಕಾಪು ದೇವಿಪ್ರಸಾದ್ ಕನ್‌ಸ್ಟ್ರಕ್ಷನ್ ಪ್ರೈ. ಲಿ. ಆಡಳಿತ ನಿರ್ದೇಶಕರಾದ ಬೀನಾ ವಿ. ಶೆಟ್ಟಿ, ಸದಸ್ಯರುಗಳಾದ ಅನನ್ಯ ಶೆಟ್ಟಿ, ಲಕ್ಷ್ಮಿ ಶೆಟ್ಟಿ, ಪವಿತ್ರ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.



Related posts

ಮಾರಣಕಟ್ಟೆ ಮೇಳದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ ರಾಮಾಂಜನೇಯ.. ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ

Mumbai News Desk

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್ ನೇಮಕ

Mumbai News Desk

ಕಾಸರಗೋಡಿನಲ್ಲಿ ಕನ್ನಡ ಸಾಂಸ್ಕೃತಿಕ ಉತ್ಸವ ಸಂಪನ್ನ: ಮುಂಬಯಿ ಪತ್ರಕರ್ತ ಸುಭಾಷ್ ಶಿರಿಯ ಅವರಿಗೆ ಪ್ರತಿಷ್ಠಿತ ದತ್ತಿನಿಧಿ ಪ್ರಶಸ್ತಿ ಪ್ರದಾನ

Mumbai News Desk

ಕೊಲ್ಲಾಪುರ: ಯುವತಿಯರ ಲೈಂಗಿಕ ಶೋಷಣೆ ಹಾಗೂ ಬ್ಲ್ಯಾಕ್‌ಮೇಲ್ ಆರೋಪದಡಿ ಫಾರ್ಮಸಿ ವಿದ್ಯಾರ್ಥಿ ಬಂಧನ

Mumbai News Desk

ಮುಂಬೈ-ಮಂಗಳೂರು ‘ವಂದೇ ಭಾರತ್ ಸ್ಲೀಪರ್’ ಆರಂಭಕ್ಕೆ ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ, ಸೌಲಭ್ಯಕ್ಕೆ ಮನವಿ: ಸಚಿವ ವಿ. ಸೋಮಣ್ಣಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಒತ್ತಾಯ

Mumbai News Desk

ದೆಹಲಿ : ಕೆಂಪು ಕೋಟೆ ಬಳಿ ಸ್ಫೋಟ, 10 ಸಾವು; ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೈ ಅಲರ್ಟ್

Mumbai News Desk