August 15, 2026
Mumbai News Kannada
ಕರ್ನಾಟಕ

ಜೈ ಕರ್ನಾಟಕ ಯುವ ಸಂಸ್ಥೆಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ





ಹೆಜಮಾಡಿ: ಜೈ ಕರ್ನಾಟಕ ಯುವ ಸಂಸ್ಥೆ, ಹೆಜಮಾಡಿ (ರಿ.) ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹೆಜಮಾಡಿ ಗುಂಡಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ಸುರೇಂದ್ರ ಸಾಲ್ಯಾನ್ ಅವರು ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹೆಜಮಾಡಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಶ್ರೀ ಶರತ್, ಹೆಜಮಾಡಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಕ್ಷಾ ಕೆ. ಹಾಗೂ ಹೆಜಮಾಡಿ ಹಿಂದುಳಿದ ವರ್ಗಗಳ ಕಾಂಗ್ರೆಸ್ ಅಧ್ಯಕ್ಷ ವಿಶಾಲ್ ವಿ. ಬಂಗೇರ ಭಾಗವಹಿಸಿದ್ದರು.

ದೇಶದ ಪ್ರಗತಿಗೆ ಯುವಜನರ ಪಾತ್ರ ಮಹತ್ವದ್ದು: ಪ್ರಭೋದ್ ಚಂದ್ರ ಹೆಜಮಾಡಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೈ ಕರ್ನಾಟಕ ಯುವ ಸಂಸ್ಥೆ, ಹೆಜಮಾಡಿ (ರಿ.) ಅಧ್ಯಕ್ಷ ಪ್ರಭೋದ್ ಚಂದ್ರ ಹೆಜಮಾಡಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.

ಸ್ವಾತಂತ್ರ್ಯವು ಕೇವಲ ಸಂಭ್ರಮಿಸುವ ದಿನವಲ್ಲ. ದೇಶದ ಏಕತೆ, ಸೌಹಾರ್ದತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಸಂಕಲ್ಪ ಮಾಡುವ ದಿನವಾಗಿದೆ. ಯುವಜನರು ಶಿಕ್ಷಣ, ಕ್ರೀಡೆ, ಸಾಮಾಜಿಕ ಸೇವೆ ಹಾಗೂ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

“ನಮ್ಮ ಪೂರ್ವಜರು ತ್ಯಾಗ ಮಾಡಿ ಗಳಿಸಿದ ಸ್ವಾತಂತ್ರ್ಯವನ್ನು ಮುಂದಿನ ಪೀಳಿಗೆಗೆ ಇನ್ನಷ್ಟು ಬಲಿಷ್ಠ ಭಾರತವಾಗಿ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಪ್ರಭೋದ್ ಚಂದ್ರ ಹೆಜಮಾಡಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜೈ ಕರ್ನಾಟಕ ಯುವತಿ ಮಂಡಲದ ಅಧ್ಯಕ್ಷೆ ವಿಮಲಾ ದಯಾನಂದ್ ಹಾಗೂ ಜೈ ಕರ್ನಾಟಕ ಮಹಿಳಾ ಮಂಡಲದ ಅಧ್ಯಕ್ಷೆ ಶಾರದಾ ಎಸ್. ಬಂಗೇರ ಉಪಸ್ಥಿತರಿದ್ದರು.

ಜೈ ಕರ್ನಾಟಕ ಯುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಅವರು ಅತಿಥಿಗಳನ್ನು ಸ್ವಾಗತಿಸಿದರು.

ಜೈ ಕರ್ನಾಟಕ ಯುವ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮನೋಹರ್ ಹೆಜಮಾಡಿ ಅವರು ಕಾರ್ಯಕ್ರಮದ ನಿರೂಪಕರಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಮಿತಾ ಜೈ ಕರ್ನಾಟಕ ಯುವತಿ ಮಂಡಲ ಮಾಜಿ ಅಧ್ಯಕ್ಷೆ, ಸಂದೀಪ್ ಆರ್. ಸುವರ್ಣ, ಜೈ ಕರ್ನಾಟಕ ಯುವ ಸಂಸ್ಥೆಯ ಮಾಜಿ ಅಧ್ಯಕ್ಷ ವಿಠ್ಠಲ್ ಜಿ. ಶ್ರೀಯಾನ್, ಸುರೇಶ್ ಸಾಲ್ಯಾನ್, ರಘು ಕೋಚ ತೋಟ,ವಸಂತ್ ಹೆಜಮಾಡಿ, ಫಕ್ರುದ್ದೀನ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಇದೆ ಸಂದರ್ಭದಲ್ಲಿ ಇತೀಚೆಗೆ ಅಗಲಿದ ಸಂಸ್ಥೆ ಯ ಹಿರಿಯ ಸ್ಥಾಪಕ ಸದಸ್ಯರಾದ ಉದಯ ಕುಮಾರ್, ರಮೋಲಾ ಜೆ. ಹೆಜ್ಮಾಡಿ, ಪರಮಾನಂದ ವಿ ಸಾಲ್ಯಾನ್ ಇವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಪಾರ್ಥನೆ ಮಾಡಲಾಯಿತು.

ದೇಶಭಕ್ತಿ, ರಾಷ್ಟ್ರಪ್ರೇಮ ಹಾಗೂ ಯುವಶಕ್ತಿಯ ಮಹತ್ವದ ಸಂದೇಶದೊಂದಿಗೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.



Related posts

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಶಾಂಕ್ ಎಸ್ ಶೆಟ್ಟಿಗೆ ಶೇಕಡಾ 97 ಅಂಕ

Mumbai News Desk

ಶಿವಮೊಗ್ಗದಲ್ಲಿ 10ನೇ ತರಗತಿ ವಿದ್ಯಾರ್ಥಿಯ ಕೊಲೆ, ಇಬ್ಬರು ಅಪ್ರಾಪ್ತ ವಯಸ್ಕರ ಬಂಧನ

Mumbai News Desk

ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್​ ಪತನ: ನಾಗೇಂದ್ರ ರಾಜಿನಾಮೆಗೆ ಸಿಎಂ ಸೂಚನೆ

Mumbai News Desk

ಬಸ್ ಸಂಚಾರ ಸ್ಥಗಿತ: ಪಳ್ಳಿ-ನಿಂಜೂರು ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

Mumbai News Desk

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2025 ಪ್ರಕಟ : ಮುಂಬೈ ಯ ಡಾ ಪಿ. ವಿ. ಶೆಟ್ಟಿ ಸೇರಿದಂತೆ, 70 ಮಂದಿಗೆ ಗೌರವ

Mumbai News Desk

ಕರ್ನಾಟಕ ವಿಧಾನಸಭಾ ಉಪಚುನಾವಣೆ – ಮೂರೂ ಕ್ಷೇತ್ರಗಳ್ಳಲ್ಲಿ ಕಾಂಗ್ರೇಸ್ ಭರ್ಜರಿ ಜಯ

Mumbai News Desk