27 C
Mumbai
August 16, 2026
Mumbai News Kannada
ನಿಧನ ಸುದ್ದಿ

ಸಾಂತಾಕ್ರೂಜ್ ಪ್ರಭಾತ್ ಕಾಲೋನಿಯ ಸಮಾಜ ಸೇವಕ ಶ್ರೀ ಅಶೋಕ್ ಪೂಜಾರಿ ನಿಧನ





ಮುಂಬಯಿ: ಬಿಲ್ಲವರ ಎಸೋಸಿಯೇಷನ್‌ನ ಸಕ್ರಿಯ ಸದಸ್ಯರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಲದ ಸಾಂತಾಕ್ರೂಜ್ ಘಟಕದ ಉಪ ಕಾರ್ಯಾಧ್ಯಕ್ಷರಾಗಿದ್ದ, ಸಾಂತಾಕ್ರೂಜ್ ಪ್ರಭಾತ್ ಕಾಲೋನಿ ನಿವಾಸಿ ಶ್ರೀ ಅಶೋಕ್ ಪೂಜಾರಿ (57) ಅವರು ಆಗಸ್ಟ್ 15ರ ಸಂಜೆ ಹೃದಯಾಘಾತದಿಂದ ನಿಧನರಾದರು.

ಕೃಷಿಕರಾಗಿದ್ದ ಇವರು ಸಾಂತಾಕ್ರೂಜ್ ಪ್ರಭಾತ್ ಕಾಲೋನಿಯ ಶ್ರೀ ಮಹಾಕಾಳಿ ದೇವಿಯ ಪರಮ ಭಕ್ತರಾಗಿದ್ದು, ಸದಾ ದೇವಸ್ಥಾನದ ಧಾರ್ಮಿಕ ಹಾಗೂ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು. ಸಮಾಜಮುಖಿ ವ್ಯಕ್ತಿತ್ವದ ಇವರು ಸಾರ್ವಜನಿಕ ವಲಯದಲ್ಲಿ ಅಪಾರ ಗೌರವ ಗಳಿಸಿದ್ದರು. ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು-ಮಿತ್ರರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

ಮೃತರ ಅಂತಿಮ ಸಂಸ್ಕಾರ ಯಾತ್ರೆಯು ಇಂದು (ಆಗಸ್ಟ್ 16) ಬೆಳಗ್ಗೆ 10:00 ಗಂಟೆಗೆ ಪ್ರಭಾತ್ ಕಾಲೋನಿಯ ಮಹಾಕಾಳಿ ಮಂದಿರದ ಸಮೀಪವಿರುವ ಅವರ ಸ್ವಗೃಹದಿಂದ ಹೊರಡಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮುಂಬಯಿ ಬಿಲ್ಲವ ಸಮುದಾಯದ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಚಿರಶಾಂತಿ ಮತ್ತು ಸದ್ಗತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.



Related posts

ರಂಗಕರ್ಮಿ, ಸಾಹಿತಿ ಪರಮಾನಂದ ವಿ. ಸಾಲ್ಯಾನ್ ಇನ್ನಿಲ್ಲ: ಸಸಿಹಿತ್ಲುವಿನಲ್ಲಿ ಇಂದು ಅಂತಿಮ ದರ್ಶನ

Mumbai News Desk

ಸಂಗೀತ ಲೋಕದ ಮಹಾತಾರೆ ಅಸ್ತಂಗತ; ‘ಗಾನಕೋಗಿಲೆ’ ಎಸ್. ಜಾನಕಿ ಇನ್ನಿಲ್ಲ

Mumbai News Desk

ವಸಾಯಿ: ನವೀನ್ ಪುತ್ರನ್ ನಿಧನ

Mumbai News Desk

ಜೋಗೇಶ್ವರಿ: ಹೋಟೆಲ್ ಉದ್ಯಮಿ, ಸಂಘಟಕ ನಾರಾಯಣ ಪೂಜಾರಿ ನಿಧನ

Mumbai News Desk

ಖಾಸಗಿ ಹೋಟೆಲ್ ಉದ್ಯೋಗಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕಲ್ಮಾಡಿ ನಿವಾಸಿ ಕೃತಿ ಬಂಗೇರಾ ಆತ್ಮಹತ್ಯೆ

Mumbai News Desk

ಕಲಾವಿದ, ಜೈ ಕರ್ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯ ಉದಯ ಕುಮಾರ್ ಹೆಜಮಾಡಿ ನಿಧನ

Mumbai News Desk