ಶ್ರೀ ಸೀತಾರಾಮ ಭಜನಾ ಮಂದಿರ (ರಿ.)ಫಲಿಮಾರು ಹೊಸಗ್ಮೆ ಯಲ್ಲಿ ಕಳೆದ 67 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಕುಮಾರವ್ಯಾಸ ವಿರಚಿತ “ಮಹಾಭಾರತ” ಎಂಬ ಸಪ್ತಾಹ ವಾಚನದ ಮಂಗಲೋತ್ಸವವು ಆಗಸ್ಟ್ 17, 2026ರ ಸೋಮವಾರ ಸಾಯಂಕಾಲ 8 ಗಂಟೆಗೆ ನಡೆಯಲಿದೆ. ಈ ವರ್ಷದ ಸಪ್ತಾಹ ವಾಚನವು ಜುಲೈ 16, 2026ರಿಂದ ಶ್ರೀ ಜಯ ದೇವಾಡಿಗ, ಸುರತ್ಕಲ್ ಇವರಿಂದ ವಾಚನ ಹಾಗೂ ಪ್ರವಚನಕಾರರಾದ ಶ್ರೀ ಭಾಸ್ಕರ ಕೆ. ಪಡುಬಿದ್ರಿ ಮತ್ತು ಶ್ರೀ ಮನೋಹರ ಕುಂದರ್ ಅವರಿಂದ ಪ್ರಾರಂಭವಾಗಿದ್ದು, ಆಗಸ್ಟ್ 17ರಂದು ಮಂಗಲೋತ್ಸವದೊಂದಿಗೆ ಸಮಾಪನಗೊಳ್ಳಲಿದೆ.
ಶ್ರೀ ಸೀತಾರಾಮ ಭಜನಾ ಮಂದಿರ (ರಿ.)ದ ವತಿಯಿಂದ ಆಯೋಜಿಸಲಾಗಿರುವ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಸೀತಾರಾಮ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ವಿನಂತಿಸಲಾಗಿದೆ. ಸಪ್ತಾಹ ವಾಚನದ ಮಂಗಲೋತ್ಸವವು ಸೋಮವಾರ ಸಾಯಂಕಾಲ 8 ಗಂಟೆಗೆ ನೆರವೇರಲಿದ್ದು, ಭಕ್ತರ ಸಾನ್ನಿಧ್ಯದಲ್ಲಿ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಫಲಿಮಾರು ಮೊಗವೀರ ಸಭಾ (ರಿ.), ಫಲಿಮಾರು, ಫಲಿಮಾರು ಮೊಗವೀರ ಸಭಾ, ಮುಂಬಯಿ, ಫಲಿಮಾರು ಮೊಗವೀರ ಮಹಿಳಾ ಮಂಡಳಿ, ಫಲಿಮಾರು ಹಾಗೂ ಶ್ರೀ ಸೀತಾರಾಮ ಸೇವಾ ಸಮಿತಿ, ಫಲಿಮಾರು ಇವರು ತಮ್ಮ ಆಗಮನಾಭಿಲಾಷಿಗಳಾಗಿದ್ದಾರೆ.
ವಿಶೇಷ ಕಾರ್ಯಕ್ರಮ : ಫಲಿಮಾರು ಮೊಗವೀರ ಮಹಿಳಾ ಮಂಡಳಿಯ ವತಿಯಿಂದ “ಶ್ರೀ ಹರಿ ಅಲಂಕಾರ” ಎಂಬ ಯಕ್ಷಗಾನ ಆಗಸ್ಟ್ 18, 2026ರಂದು ಮಂಗಳವಾರ ಸಾಯಂಕಾಲ 4.30 ಗಂಟೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ನೀಡುವ ಉದಾರ ಧನ ಸಹಾಯವನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ತಿಳಿಸಲಾಗಿದೆ.




