31 C
Mumbai
October 8, 2026
Mumbai News Kannada
ಸುದ್ದಿ

*ಭಾರತ್ ಬ್ಯಾಂಕ್ ಬೋಯಿಸರ್ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನ ಆಚರಣೆ



ಮುಂಬಯಿಯ ಪ್ರಮುಖ ಸಹಕಾರಿ ಬ್ಯಾಂಕ್ ಆಗಿರುವ ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿ. ಇದರ ಬೋಯಿಸರ್ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಖೆಯ ವ್ಯವಸ್ಥಾಪಕರಾದ ಶ್ರೀಮತಿ ಜೆನಿಫರ್ ಸಿಕ್ವೇರಾ (ಮ್ಯಾನೇಜರ್) ಅವರ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

ಕಾರ್ಯಕ್ರಮದಲ್ಲಿ ಉಪ ಶಾಖಾ ಮುಖ್ಯಸ್ಥರಾದ ಶ್ರೀ ದಿನೇಶ್ ಎಸ್. ಪೂಜಾರಿ, ಸಿಬ್ಬಂದಿಗಳಾದ ಸಮೀಕ್ಷಾ ರಾವತ್, ಆಸಾವರಿ ಗುಪ್ತಾ, ಸಿದ್ಧೇಶ್ ಪೆಡ್ನೇಕರ್, ವಿನಲ್ ಅಯ್ಯರ್ ಅವರು ಉಪಸ್ಥಿತರಿದ್ದರು.

ಪ್ರಮುಖ ಗ್ರಾಹಕರಾದ ಶ್ರೀನಿವಾಸ ಕೋಟ್ಯಾನ್, ಪೂರ್ಣೇಶ್ ಪಾಲಿವಾಲ್, ಶ್ರೀಮತಿ ಸಾಧನಾ ಪಾಲಿವಾಲ್, ಪ್ರಕಾಶ್ ಶೆಟ್ಟಿ ಮತ್ತು ಯೋಗೇಶ್ ಶೆಟ್ಟಿ ಅವರು ಈ ಆಚರಣೆಯಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಬ್ಯಾಂಕ್ 1978 ರಲ್ಲಿ ಸ್ಥಾಪನೆಯಾಗಿ ಕಳೆದ 48 ವರ್ಷಗಳಿಂದ ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ನೀಡುತ್ತಾ ಬಂದಿದೆ. ಗ್ರಾಹಕರ ವಿಶ್ವಾಸವೇ ನಮ್ಮ ಬಂಡವಾಳ ಎಂದು ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕಿ ಜೆನಿಫರ್ ಸಿಕ್ವೇರಾ ಅವರು ತಿಳಿಸಿದರು. ಗ್ರಾಹಕರಿಗೆ ಸಿಹಿ ಹಂಚಿ ಕೃತಜ್ಞತೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಖೆಯ ಎಲ್ಲಾ ಗ್ರಾಹಕರಿಗೆ ಮತ್ತು ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.



Related posts

ಧರ್ಮಪಾಲ್ ದೇವಾಡಿಗ ಮತ್ತು ಚಂದ್ರಶೇಖರ್ ಬೆಳ್ಚಡ ಇವರಿಂದ ಡಾ. ವೀರೇಂದ್ರ ಹೆಗ್ಗಡೆ ಭೇಟಿ: ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನೆ

Mumbai News Desk

ಗಮ್ಮತ್ ಕಲಾವಿದೆರ್ ಅವರ ‘ಪೋನಗ ಕೊನೊಪರ’ ನಾಟಕದ ಮುಹೂರ್ತ

Mumbai News Desk

ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ವಿಜಯ್ ಬಿ ಹೆಗ್ಡೆ ನಿಧನ

Mumbai News Desk

ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಪೊಲೀಸ್ ವಶಕ್ಕೆ: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲು

Mumbai News Desk

ಎಂಆರ್‌ಜಿ ಗ್ರೂಪ್‌ ಸಂಸ್ಥಾಪಕ ಡಾ. ಕೆ. ಪ್ರಕಾಶ್ ಶೆಟ್ಟಿ ಅವರಿಂದ ಹೊಸ ಪ್ರೈವೇಟ್ ಜೆಟ್ ಖರೀದಿ: ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಶೇಷ ಪೂಜೆ

Mumbai News Desk

ನೆಲೆ ಫೌಂಡೇಶನ್ ಗೆ 11ನೇ ಮೂಲತ್ವ ವಿಶ್ವ ಪ್ರಶಸ್ತಿ ಪ್ರದಾನ : ಮೂಲತ್ವ ಪೌಂಡೇಶನ್ ನ ಕಾರ್ಯ ಶ್ಲಾಘನೀಯ – ಆರ್ ಎಸ್ ಎಸ್ ಮುಖಂಡ ವಾಮನ್ ಶೆಣೈ ಅಭಿಮತ

Mumbai News Desk