31 C
Mumbai
September 10, 2026
Mumbai News Kannada
ಪ್ರಕಟಣೆ

ಸೆ.12, ಬಿಲ್ಲವರ ಅಸೋಸಿಯೇಶನಿನ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಜಯಂತಿ ಆಚರಣೆ





ಭಾಯಂದರ್ ,ಸೆ.8:ಬಿಲ್ಲವರ ಅಸೋಸಿಯೇಶನ್ ಇದರ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172 ಜಯಂತ್ಯೋತ್ಸವವನ್ನು ಶನಿವಾರ ಸೆ.12ರಂದು ಆಚರಿಸಲಾಗುವುದು.
ಈ ಕಾರ್ಯಕ್ರಮವು ಭಾಯಂದರ್ ಪಶ್ಚಿಮದ ರೈಲ್ವೇ ಸ್ಟೇಷನ್ ಪಕ್ಕದಲ್ಲಿರುವ ಜೆಸ್ಸಲ್ ಪಾರ್ಕ್ ಇಂದ್ರ ವರುಣ ಸಭಾಗೃಹದಲ್ಲಿ ನಡೆಯಲಿದೆ.
ಅಂದು ಸಾಯಂಕಾಲ ಗಂಟೆ 4 ಕ್ಕೆ ಕಲಶ ಸ್ಥಾಪನೆಯಾಗಿ ಭಜನೆ, ಕುಣಿತ ಭಜನೆ,ಓಂ ನಮೋ ನಾರಾಯಣಾಯ ನಮಃ ಶಿವಾಯ ಜಪ , ರಾತ್ರಿ 8ರಿಂದ ಗುರು ಪೂಜೆ ಹಾಗೂ ಮಂಗಳಾರತಿ ನಡೆದು ತದನಂತರ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುರುಭಕ್ತರು ಭಾಗವಹಿಸಬೇಕಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವಾಧ್ಯಕ್ಷ ಎಲ್.ವಿ.ಅಮೀನ್, ಅಧ್ಯಕ್ಷ ಹರೀಶ್.ಜಿ.ಅಮೀನ್, ಗೌ.ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್, ಉಪಾಧ್ಯಕ್ಷ ಮೋಹನ್ ಸಿ.ಕೋಟ್ಯಾನ್, ಗೌ.ಕೋಶಾಧಿಕಾರಿ ರವಿ ಎಸ್.ಸನಿಲ್,ಜೊತೆ ಕೋಶಾಧಿಕಾರಿ ಜಿ.ಕೆ.ಕೆಂಚನಕೆರೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ , ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಜಿ.ಅಂಚನ್ , ಕಾರ್ಯದರ್ಶಿ ಸದಾಶಿವ ವೈ.ಕೋಟ್ಯಾನ್ ಹಾಗೂ ಮೀರಾರೋಡ್ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಪ್ರಮೋದ್ ಕೋಟ್ಯಾನ್ , ಕಾರ್ಯಾಧ್ಯಕ್ಷ ಶೇಖರ ರಾಮ ಪೂಜಾರಿ, ಉಪಕಾರ್ಯಾಧ್ಯಕ್ಷರುಗಳಾದ ಸುಧಾಕರ್ ಜಿ.ಪೂಜಾರಿ, ಸತೀಶ್ ಜೆ.ಪೂಜಾರಿ, ಮುಖ್ಯ ಸಲಹೆಗಾರ ಚಿತ್ರಾಪು ಕೆ.ಎಮ್.ಕೋಟ್ಯಾನ್, ಕಾರ್ಯದರ್ಶಿ ಜ್ಯೋತಿ ಆರ್.ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಜಯಶ್ರೀ ಎಸ್.ಕರ್ಕೇರ,ದೀಪಕ್ ಕರ್ಕೇರಾ, ಕೋಶಾಧಿಕಾರಿ ಹರೀಶ್ ಎಂ.ಸಾಲ್ಯಾನ್, ಜೊತೆ ಕೋಶಾಧಿಕಾರಿಗಳಾದ ನಾಗೇಶ್ ಎನ್.ಪೂಜಾರಿ, ಆಶೋಕ್ ಟಿ.ಪೂಜಾರಿ, ಅರ್ಚಕರಾದ ರಾಕೇಶ್ ಅಮೀನ್, ಬಾಲಕೃಷ್ಣ ಸುವರ್ಣ ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು, ವಿಶೇಷ ಆಮಂತ್ರಿತ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಅಗಸ್ಟ್ 10 : ಯಕ್ಷಾಭ್ಯುದಯ ಬಳಗ ಕೋರ್ಟ್ ನಾಕ, ಥಾಣೆ ಪಶ್ಚಿಮ : ‘ಭಕ್ತ ಚಂದ್ರಹಾಸ’ ಯಕ್ಷಗಾನ ಪ್ರದರ್ಶನ

Mumbai News Desk

ಜ.6ಕ್ಕೆ ಮುಂಬಯಿ ಬಿಲ್ಲವರ ಹಿತಚಿಂತಕರು ಮತ್ತು ಜಯ ಸಿ ಸುವರ್ಣ ಅಭಿಮಾನಿಗಳ ವತಿಯಿಂದ ಪತ್ರಕರ್ತ, ವಾಗ್ಮಿ, ದಿನೇಶ್ ಮಟ್ಟು ಅವರಿಗೆ ಗೌರವ.

Mumbai News Desk

ಬೊಯಿಸರ್ ಸೋಮೇಶ್ವರ ಮಂದಿರ ನಾಳೆ (ಮಾ. 1)17ನೇ ವರ್ಧಂತ್ಯುತ್ಸವ

Mumbai News Desk

ವಸಾಯಿ ಕರ್ನಾಟಕ ಸಂಘ : ಸ್ವಾತಂತ್ರೋತ್ಸವ ಸಂಭ್ರಮ, ದತ್ತು ಸ್ಪೀಕರ, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Mumbai News Desk

    ಕುಲಾಲ ಸಂಘ ಮುಂಬಯಿ :  ಅ 27ರಂದು  94ನೇ ವಾರ್ಷಿಕ ಮಹಾಸಭೆ.

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಮಲಾಡ್ ಸ್ಥಳೀಯ ಕಚೇರಿ ,ಜು 21 ರಂದು ಗುರುಪೂರ್ಣಿಮೆ, ಆಟಿಡೊಂಜಿ ದಿನ, ಕಾರ್ಯಕ್ರಮ.

Mumbai News Desk