September 13, 2026
Mumbai News Kannada
ಮುಂಬಯಿ

ಕುಣಿತ ಭಜನಾ ಸ್ಪರ್ಧೆ: ಶ್ರೀ ರಜಕ ಸಂಘ ಮುಂಬೈ (ಡೊಂಬಿವಲಿ ವಲಯ) ಯುವ ಘಟಕಕ್ಕೆ ಪ್ರಥಮ ಬಹುಮಾನ





ನವಿ ಮುಂಬೈ (ಸೆ. 12): ಇಲ್ಲಿನ ಘನ್ಸೋಲಿಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕುಣಿತ ಭಜನಾ ಸ್ಪರ್ಧೆಯಲ್ಲಿ ಶ್ರೀ ರಜಕ ಸಂಘ ಮುಂಬೈ (ಡೊಂಬಿವ್ಲಿ ವಲಯ)ದ ಯುವ ಘಟಕವು ಪ್ರಥಮ ಬಹುಮಾನ ಪಡೆದು ಸಾಧನೆ ಗೈದಿದೆ.

ಶನಿವಾರ ನಡೆದ ಈ ಸ್ಪರ್ಧೆಯಲ್ಲಿ ವಿವಿಧ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು. ಅದ್ಭುತ ಪ್ರದರ್ಶನ ನೀಡಿದ ಎಸ್‌ಆರ್‌ಎಸ್ ಮುಂಬೈ ಯುವ ಘಟಕದ ತಂಡವು, ಪ್ರೇಕ್ಷಕರ ಹಾಗೂ ತೀರ್ಪುಗಾರರ ಅಪಾರ ಮೆಚ್ಚುಗೆ ಗಳಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ವಿಜೇತ ತಂಡಕ್ಕೆ ಮಾರ್ಗದರ್ಶಿ ಡಾ. ಅಣ್ಣಿ ಡಿ. ಶೆಟ್ಟಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಬಹುಮಾನ ವಿತರಿಸಿ ಗೌರವಿಸಿದರು.

ವಿಜೇತ ತಂಡದ ಸದಸ್ಯರು:

  • ಸಾಹಿಲ್ ಎಚ್. ಮಡಿವಾಳ
  • ಶ್ರೀಜಿತ್ ಜೆ. ಕುಂದರ್
  • ರೋಹನ್ ಆರ್. ಸಾಲ್ಯಾನ್
  • ನಿಶಾಂತ್ ಎಚ್. ಕುಂದರ್
  • ರೀತ್ ಆರ್. ಕುಂದರ್
  • ಸಾಕ್ಷಿ ಎಸ್. ಕುಂದರ್
  • ಮಹಿಕಾ ಜಿ. ನಿಡುವಜೆ
  • ಪೂರ್ಣಿಮಾ ಆರ್. ಕುಂದರ್
  • ಲಾಸ್ಯ ಜೆ. ಬಂಗೇರ
  • ಸಾನಿಕಾ ಎಚ್. ಮಡಿವಾಳ

ತಂಡಕ್ಕೆ ಶ್ರೀಮತಿ ಗೀತಾ ಬಿ. ಸಾಲ್ಯಾನ್, ಶ್ರೀಮತಿ ಉಷಾ ನಾರಾಯಣ ಸಾಲ್ಯಾನ್ ಹಾಗೂ ಶ್ರೀಮತಿ ಶಾಂತಿ ಎಚ್. ಮಡಿವಾಳ ಹಿನ್ನೆಲೆ ಗಾಯನದಲ್ಲಿ ಮತ್ತು ಶ್ರೀ ಮಹೇಶ್ ಕುಂದರ್ ಹಾರ್ಮೋನಿಯಂ ವಾದನದಲ್ಲಿ ಸಾಥ್ ನೀಡಿದರು.

ಯುವ ಪೀಳಿಗೆಯಲ್ಲಿ ಸಾಂಪ್ರದಾಯಿಕ ಕಲೆ ಹಾಗೂ ಭಕ್ತಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಘಟಕದ ಈ ಗೆಲುವು ಮಹತ್ವದ ಮೈಲಿಗಲ್ಲಾಗಿದೆ ಎಂದು ಸಂಘದ ಮುಖಂಡರು ಶ್ಲಾಘಿಸಿದ್ದಾರೆ. ಎಸ್‌ಆರ್‌ಎಸ್ ಮುಂಬೈನ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿತೈಷಿಗಳು ವಿಜೇತ ಯುವ ಪ್ರತಿಭೆಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.



Related posts

ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ

Mumbai News Desk

ಭಾರತ್ ಬ್ಯಾಂಕಿನ ಭಾಯಂದರ್ ಶಾಖೆಯಲ್ಲಿ ಬ್ಯಾಂಕಿನ ಸಂಸ್ಥಾಪನಾ ದಿನಾಚರಣೆ.

Mumbai News Desk

ಕಾಮೊಟೆ : ಶ್ರೀ ದುರ್ಗಾಪರಮೇಶ್ವರಿ ಮಂದಿರದ  ನವರಾತ್ರಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ.

Mumbai News Desk

ಮಲಾಡ್   ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆಯ 12ನೇ ವಾರ್ಷಿಕ ಮಹಾಪೂಜೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ – ಭಾಯಂದರ್ ಶಾಖೆಯ ವಾರ್ಷಿಕೋತ್ಸವ 

Mumbai News Desk

ಹಿಂದಿ ಹೇರಿಕೆ ಆರೋಪದ ನಡುವೆ ತ್ರಿಭಾಷಾ ನೀತಿಯನ್ನು ರದ್ದುಗೊಳಿಸಿದ ಮಹಾರಾಷ್ಟ್ರ ಸರಕಾರ

Mumbai News Desk