July 23, 2026
Mumbai News Kannada
ಪ್ರಕಟಣೆ

ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್, ಸಾಂತಾಕ್ರೂಸ್: ಡಿ  26 ರಂದು  ವಾರ್ಷಿಕ  ಮಹಾಪೂಜೆ.







ಮುಂಬಯಿ, ಡಿ.24- ಉಪನಗರ ಸಾಂತಾಕ್ರೂಸ್ (ಪ.), ಮಿಲನ್ ಸಬ್ ವೇ ರೋಡ್, ಆಶಾ ಚಾಳ್‌ನಲ್ಲಿ ಮಂತ್ರ ದೇವಿಯ ಆರಾಧಕ, ಧಾರ್ಮಿಕ ಚಿಂತಕ ಕುತ್ಯಾರು ವಾಸುದೇವ ಬಂಜನ್ ಮಾರ್ಗದರ್ಶನದಲ್ಲಿ ಸ್ಥಾಪಿಸಿರುವ ಶ್ರೀಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್, ಆಡಳಿತದ ಶ್ರೀಮಂತ್ರ ದೇವಿ ಕ್ಷೇತ್ರದ ವಾರ್ಷಿಕ ಮಹಾಪೂಜೆಯು ಡಿ.26 ಮಂಗಳ ವಾರ. ರಂದು   ಬೆಳಿಗ್ಗೆಯಿಂದ  ಸಂಜೆವರೆಗೆ

 ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅಂದು ಶ್ರೀದೇವಿಗೆ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಪರಿವಾರ ದೇವತೆಗಳಿಗೆ ಹೋಮ-ಹವನ, ಅಮ್ಮನವರಿಗೆ ಗದ್ದಿಗೆ ಏರಿಸಿ ಶ್ರೀದೇವಿಯ ಆವೇಶದೊಂದಿಗೆ ಪ್ರಸಾದ ವಿತರಣೆ .

 ಸಂಜೆ 4 ಗಂಟೆ ತನಕ ಮಹಾ ಅನ್ನದಾನ ನಡೆಯಲಿದೆ.

ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತನು, ಮನ, ಧನದೊಂದಿಗೆ ಸಹಕರಿಸಬೇಕಾಗಿ ಮೊತ್ತೇಸರರಾದ ವಾಸುದೇವ ಬಂಜನ್ (ಅರ್ಚಕರು), ಅಧ್ಯಕ್ಷರು, ಟ್ರಸ್ಟಿ, ಮಧ್ಯಸ್ಥರು, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಮತ್ತು ಭಕ್ತರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ತುಳು ಸಂಘ ಬೊರಿವಲಿ  ಸೆ. 19 ರಂದು  15ನೇ  ವಾರ್ಷಿಕ ಮಹಾಸಭೆ

Mumbai News Desk

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ -ಜೂನ್ 8 ರಂದು ಉಡುಪಿಯಲ್ಲಿ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರಿಗೆ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ – 2025 ಪ್ರದಾನ

Mumbai News Desk

ಕುಲಾಲ ಸಂಘ, ಮುಂಬಯಿ.  ನ 23: ಮಂಗಳೂರಿನ ಮಂಗಳ ದೇವಿ ಬಳಿ ಕುಲಾಲ ಭವನ ಲೋಕಾರ್ಪಣೆ

Mumbai News Desk

ಮಾ.7: ಸಸಿಹಿತ್ಲು ಭಗವತಿಗೆ ಕಲಾಸೌರಭದ ಸ್ವರ ಸಂಗೀತಾಭಿಷೇಕಂ

Mumbai News Desk

ಮಾ. 8 ರಂದು ಜಗಜ್ಯೋತಿ ಕಲಾವೃಂದ ಕಚೇರಿಯಲ್ಲಿ ಮಹಾಶಿವರಾತ್ರಿ ಪೂಜೆ

Mumbai News Desk

ಸಾಫಲ್ಯ ಸೇವಾ ಸಂಘ.ಮುಂಬಯಿ ಮಾ 9;ಸಾಫಲ್ಯ ಸ್ತ್ರೀ ಶಕ್ತಿ ಕಾರ್ಯಕ್ರಮ

Mumbai News Desk