31 C
Mumbai
September 11, 2026
Mumbai News Kannada
ಮುಂಬಯಿ

ನವಿಮುಂಬೈ ನಲ್ಲಿ ಸುಗುಣೀಂದ್ರ ಶ್ರೀಪಾದರ ಚಾತುರ್ಮಾತ್ಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆ,





ಶ್ರೀಪಾದರ ಧರ್ಮ ಜಾಗೃತಿಯ ಕಾರ್ಯ , ಭಗವದ್ಗೀತೆಯ ಪಠಾಣವ ನ್ನು ಭಕ್ತರಿಗೆ ತಲುಪಿಸುವ ಸೇವೆಯನ್ನು ಮಾಡೋಣ: ಶಿವರಾಮ ಜಿ ಶೆಟ್ಟಿ ಅಜೆಕಾರ್

ನವಿ ಮುಂಬೈ: ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠದ ಪೂಜ್ಯ ಸುಗುಣೆಂದ್ರ ಶ್ರೀಪಾದರು 53ನೇ ಹಾಗೂ ಮುಂಬೈಯಲ್ಲಿ 8ನೇ ಚಾತುರ್ಮಾತ್ಸ್ಯ ವೃತ ಆಚರಣೆಯು ಈ ಬಾರಿ ನವಿ ಮುಂಬೈ ಪುತ್ತಿಗೆ ಮಠದಲ್ಲಿ ನಡೆಯಲಿದ್ದು ಇದರ ಅಮಂತ್ರಣ ಪತ್ರಿಕೆಯನ್ನು ಚಾತುರ್ಮಾತ್ಸ್ಯ ಆಚರಣೆ ಸಮಿತಿ ಮುಂಬೈ ಇದರು ಅಧ್ಯಕ್ಷರಾದ ಶಿವರಾಮ ಜಿ ಶೆಟ್ಟಿ ಅಜೆಕಾರ್ ಬಿಡುಗಡೆಗೊಳಿಸಿದರು,
ಬಳಿಕ ಮಾತನಾಡಿ ಪೂಜ್ಯ ಶ್ರೀಪಾದರ ಚಾತುರ್ಮಾತ್ಸ್ಯ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವುದೆ ನಮಗೆ ಸೌಭಾಗ್ಯವಾಗಿದೆ ಇದನ್ನು ಉತ್ಸವ ರೀತಿಯಲ್ಲಿ ಆಚರಿಸುವುದಕ್ಕಾಗಿ ಗುರುಭಕ್ತರಾದ ನಾವೆಲ್ಲರೂ ಶ್ರದ್ಧೆಯಿಂದ ಮಾಡಬೇಕಾಗಿದೆ. ಶ್ರೀಪಾದರ ಧರ್ಮ ಜಾಗೃತಿಯ ಕಾರ್ಯ ಮತ್ತು ಭಗವದ್ಗೀತೆಯ ಪಠಾಣ ಕಾರ್ಯವನ್ನು ಭಕ್ತರಿಗೆ ತಲುಪಿಸುವ ಸೇವೆಯನ್ನು ಮಾಡೋಣ ಎಂದು ನುಡಿದರು,

ಈ ಸಂದರ್ಭದಲ್ಲಿ, ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಸಿದ್ಧ ಚಾರ್ಟೆಡ್ ಅಕೌಂಟೆಂಟ್ ಎನ್ ಆರ್ ರಾವ್ , ಸಂಚಾಲಕರಾದ, ಸಿಎ ಸುಧೀರ್ ಶೆಟ್ಟಿ, ಗುರುಪ್ರಸಾದ್ ಭಟ್ ಘಂನ್ಸೋಲಿ, ನಾಗೇಂದ್ರ ಭಟ್, ಕೋಶಾಧಿಕಾರಿ ಸಂತೋಷ್ ಸಿ ಶೆಟ್ಟಿ,
ಕುಲಾಲ್ ಸಂಘ ಮುಂಬೈ ಅಧ್ಯಕ್ಷ ರಘುಮೂಲ್ಯ ಮತ್ತು ಸ್ವಾಮೀಜಿಯ ಅನುವಾಯಿಗಳು
ಸಲಹೆ ಸೂಚನೆಗಳನ್ನು ನೀಡಿದರು,
ಸಿಎ ಸುಧೀರ್ ಶೆಟ್ಟಿ ಸ್ವಾಗತಿಸಿದರು
ಪತ್ರಕರ್ತ ದಿನೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು

ಆಗಸ್ಟ್ 11ನೇ ಪೂಜ್ಯ ಶ್ರೀಪಾದರ ಚಾತುರ್ಮಾತ್ಸ್ಯ ಪ್ರಯುಕ್ತ ನವಮುಂಬೈ ಪುರಪ್ರವೇಶ ನಡೆಯಲಿದ್ದು, ತಾ 12ಕ್ಕೆ ಶ್ರೀಪಾದರು ಚಾತುರ್ಮಾಸ್ಯ ವೃತ ಕೈಗೊಳ್ಳಲಿದ್ದಾರೆ,

ಆಗಸ್ಟ್ 15ನೇ ತಾರೀಕಿಗೆ ನವಿ ಮುಂಬೈಯಲ್ಲಿ ಇರುವ ಪುತ್ತಿಗೆ ಮಠದ ನೂತನ ಶಾಖೆ ಲೋಕಾರ್ಪಣೆಗೊಳ್ಳಲಿದೆ.



Related posts

ಕರ್ನಿರೆ ಗಂಗಾಧರ್ ಅಮೀನ್ ಅವರ “ಕೊಂಕಣ್ ಸ್ವಾದ್” ಗೆ ಟೈಮ್ಸ್ ಪುಡ್ ಪ್ರಶಸ್ತಿ.

Mumbai News Desk

ಮಹಾರಾಷ್ಟ್ರ ಚುನಾವಣೆ : ಬಿಜೆಪಿ ನಾಯಕ ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವುದಾಗಿ ಘೋಷಣೆ.

Mumbai News Desk

ಬಂಟರ ಸಂಘ, ಮುಂಬಯಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ಸ್ನೇಹ ಸಮ್ಮಿಲನ ಕಾರ್ಯಕ್ರಮ

Mumbai News Desk

ಮಾಟುಂಗಾ ಮುಂಬೈ ಕನ್ನಡ ಸಂಘದ ವತಿಯಿಂದ ದತ್ತಿ ಉಪನ್ಯಾಸಗಳ ಕಾರ್ಯಕ್ರಮ

Mumbai News Desk

ಕುರ್ಲಾ ಬಂಟರ ಭವನದಲ್ಲಿ ಗುರು ಪೂರ್ಣಿಮೆ ಆಚರಣೆ, 

Mumbai News Desk

ಕರ್ನಾಟಕ ಸಂಘ, ಕಲ್ಯಾಣ : ವಿಶ್ವ ಮಹಿಳಾ ದಿನಾಚರಣೆ

Mumbai News Desk