
ಚಿತ್ರ, ವರದಿ: ಇನ್ನಂಜೆ ಜಯರಾಮ್
ಮುಂಬೈ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಐತಿಹಾಸಿಕ ತೀರ್ಥಕ್ಷೇತ್ರ ಹಾಗೂ ಅಪಾರ ದೈವಿಕ ಕಾರಣಿಕದ ತಾಣವಾದ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪವಿತ್ರ ಕಾರ್ಯಕ್ಕೆ ಮಹಾನಗರಿ ಮುಂಬೈನಲ್ಲಿ ಮಹಾಸಂಕಲ್ಪ ತೊಡಲಾಯಿತು.
ಮುಂಬೈಯ ನಾನಾಚೌಕದಲ್ಲಿರುವ ಹೋಟೆಲ್ ಕೃಷ್ಣ ಪ್ಯಾಲೇಸ್‌ನಲ್ಲಿ ಜರುಗಿದ ವಾಣಿಜ್ಯನಗರಿಯ ಭಕ್ತಾದಿ ಹಾಗೂ ಗ್ರಾಮಸ್ಥರ ಬೃಹತ್ ಸಮಾಲೋಚನಾ ಸಮಾವೇಶದಲ್ಲಿ ಜೀರ್ಣೋದ್ಧಾರ ಯೋಜನೆಗೆ ಅಧಿಕೃತ ಚಾಲನೆ ನೀಡಲಾಯಿತು.
ಧಾರ್ಮಿಕ ನೆರವೇರಿಕೆ ಹಾಗೂ ಆರಂಭ: ವಾಗ್ದೇವಿ ಭಜನಾ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ ನೆರವೇರಿತು. ಶ್ರೀಮತಿ ಮಂಜುಳಾ ಗುರುರಾಜ್ ಭಟ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶ್ರೀಮತಿ ವೀಕ್ಷಿತಾ ವಿರಾಜ್ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದರು. ನಂತರ ವೇದಿಕೆಯಲ್ಲಿದ್ದ ಧಾರ್ಮಿಕ ಧುರೀಣರು ಹಾಗೂ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಜಗದೀಶ್ ಶೆಟ್ಟಿ ಕಾನಬೆಟ್ಟು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ದಿಗ್ಗಜರ ಆಶೀರ್ವಚನ ಮತ್ತು ಪ್ರಮುಖರ ಮಾತುಗಳು:

- ಶ್ರೀ ಮದ್ವೇಶ್ ತಂತ್ರಿಗಳು (ಕ್ಷೇತ್ರದ ಪ್ರಧಾನ ತಂತ್ರಿಗಳು): “ಶಾಸ್ತ್ರಗಳ ಪ್ರಕಾರ ಒಂದು ಗ್ರಾಮದ ದೇವಸ್ಥಾನವು ಜೀರ್ಣೋದ್ಧಾರಗೊಂಡರೆ ಅದು ಕೇವಲ ಆ ಊರಿಗಷ್ಟೇ ಅಲ್ಲ, ಸಮಗ್ರ ಕುಲಕ್ಕೆ ಮತ್ತು ರಾಷ್ಟ್ರಕ್ಕೆ ಶ್ರೇಯಸ್ಸನ್ನು ತರುತ್ತದೆ. ದೇವರ ಪ್ರತಿಷ್ಠಾಪನೆ ಮತ್ತು ಆರಾಧನೆಯಿಂದ ಏಳೆಂಟು ಕುಲಗಳು ಉದ್ಧಾರವಾಗುತ್ತವೆ. ಈ ಮಹತ್ಕಾರ್ಯಕ್ಕೆ ಪ್ರತಿಯೊಬ್ಬ ಭಕ್ತನೂ ಮನಪೂರ್ವಕವಾಗಿ ಕೈಜೋಡಿಸಬೇಕು” ಎಂದು ಆಶೀರ್ವಚನ ನೀಡಿದರು.

- ಶ್ರೀ ಹರೀಶ್ ತಂತ್ರಿಗಳು (ಕ್ಷೇತ್ರದ ಅರ್ಚಕರು): “ಮಹಾಭಾರತದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಸಾರಥಿಯಾಗಿ ವಿಜಯ ತಂದಿತ್ತಂತೆ, ನಂದಳಿಕೆ ದೇವಸ್ಥಾನದ ಜೀರ್ಣೋದ್ಧಾರವೆಂಬ ಈ ಧರ್ಮರಥಕ್ಕೆ ಶ್ರೀ ಕೃಷ್ಣ ವೈ. ಶೆಟ್ಟಿ ಅವರು ನಾಯಕತ್ವ ವಹಿಸಿದ್ದಾರೆ. ಈಶ್ವರ ಹಾಗೂ ದೈವಗಳ ಅನುಗ್ರಹದಿಂದ ಬ್ರಹ್ಮಕಲಶೋತ್ಸವವು ಅತ್ಯಂತ ವೈಭವದಿಂದ ನೆರವೇರಲಿದೆ” ಎಂದರು.

- ಶ್ರೀ ಶ್ರೀಕಾಂತ್ ಶೆಟ್ಟಿ ಕಾರ್ಕಳ (ಧಾರ್ಮಿಕ ಚಿಂತಕರು): “ನಂದಳಿಕೆ ಕ್ಷೇತ್ರವು ಕೇವಲ ದೇವಸ್ಥಾನವಲ್ಲ; ಅದು ಸಮಸ್ತ ತುಳುನಾಡಿನ ಸಾಂಸ್ಕೃತಿಕ ಮತ್ತು ದೈವಿಕ ಶಕ್ತಿಯ ಪ್ರಮುಖ ನ್ಯಾಯಪೀಠ. ಕಲಿಯುಗದಲ್ಲಿ ಶ್ರಮದಾನ, ತನು-ಮನ-ಧನದ ಸೇವೆಯ ಮೂಲಕ ಈ ಪವಿತ್ರ ಮಣ್ಣಿನ ಜೀರ್ಣೋದ್ಧಾರದಲ್ಲಿ ಭಾಗವಹಿಸುವುದೇ ನಮ್ಮ ಪೂರ್ವಜನ್ಮದ ಸುಕೃತ” ಎಂದು ಬಣ್ಣಿಸಿದರು.

- ಶ್ರೀ ಸುಹಾಸ್ ಹೆಗಡೆ (ನಂದಳಿಕೆ ಚಾವಡಿ ಅರಮನೆ): “ಮುಂಬೈ ಕನ್ನಡಿಗರ ಒಗ್ಗಟ್ಟು ಹಾಗೂ ಧಾರ್ಮಿಕ ಶ್ರದ್ಧೆ ಶ್ಲಾಘನೀಯ. ಭಕ್ತರು ನೀಡುವ ಪ್ರತಿಯೊಂದು ರೂಪಾಯಿಯ ಲೆಕ್ಕವೂ ಅತ್ಯಂತ ಪಾರದರ್ಶಕವಾಗಿರುತ್ತದೆ. ಎಲ್ಲರ ಶ್ರದ್ಧೆ ಮತ್ತು ಸಹಕಾರದಿಂದ ಜೀರ್ಣೋದ್ಧಾರ ಕಾರ್ಯವನ್ನು ಸುಸೂತ್ರವಾಗಿ ಪೂರ್ಣಗೊಳಿಸುತ್ತೇವೆ” ಎಂದು ಭರವಸೆ ನೀಡಿದರು.

- ಶ್ರೀ ಕಂಬಳ ಶ್ರೀಕಾಂತ್ ಭಟ್ (ಕಾರ್ಯಾಧ್ಯಕ್ಷರು, ಜೀರ್ಣೋದ್ಧಾರ ಸಮಿತಿ): ಆಗಮಶಾಸ್ತ್ರ ಹಾಗೂ ಅಷ್ಟಮಂಗಲ ಪ್ರಶ್ನೆಯ ಚಿಂತನೆಯಂತೆ ನಡೆಯಲಿರುವ ಜೀರ್ಣೋದ್ಧಾರ ಕಾರ್ಯದ ಸ್ವರೂಪ ಮತ್ತು ಮೂಲಸ್ಥಾನ-ಆಲಡೆಗಳ ನವೀಕರಣ ಯೋಜನೆಯ ಕುರಿತು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ವಿವರಣೆ ನೀಡಿದರು.

- ಶ್ರೀಮತಿ ಉಮಾ ಕೃಷ್ಣ ಶೆಟ್ಟಿ: “ಧರ್ಮ ಕಾರ್ಯದಲ್ಲಿ ಹೆಣ್ಣುಮಕ್ಕಳು ಹಾಗೂ ಕುಟುಂಬದ ಪ್ರತಿಯೊಬ್ಬರೂ ಭಾಗಿಗಳಾಗಬೇಕು. ಭಗವಂತ ಕೊಟ್ಟ ಸಂಪತ್ತು ಹಾಗೂ ಶಕ್ತಿಯನ್ನು ಮತ್ತೆ ಆತನ ದಿವ್ಯ ಕ್ಷೇತ್ರದ ಸೇವೆಗೆ ಅರ್ಪಿಸೋಣ” ಎಂದು ಕರೆ ನೀಡಿದರು.
ಸಮಾವೇಶದಲ್ಲಿ ಉದ್ಯಮಿಗಳಾದ ಶ್ರೀ ಉದಯ ಶೆಟ್ಟಿ, ಶ್ರೀ ಸಂತೋಷ್ ಶೆಟ್ಟಿ (ಸೀತಾ ಸೌಧ), ಶ್ರೀ ರತ್ನಾಕರ್ ಶೆಟ್ಟಿ (ಕಾನಬೆಟ್ಟು) ಹಾಗೂ ಶ್ರೀ ಸುನೀಲ್ ಶೆಟ್ಟಿ ಅವರು ಸಂದರ್ಭೋಚಿತವಾಗಿ ಸಲಹೆ-ಸೂಚನೆಗಳನ್ನು ನೀಡಿದರು.

ಜೀರ್ಣೋದ್ಧಾರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ: ಸಮಾವೇಶದಲ್ಲಿ ಶ್ರೀ ಸುಹಾಸ್ ಹೆಗಡೆ ಅವರು ನೂತನವಾಗಿ ರಚಿಸಲಾದ ಮುಂಬೈ ಸಮಿತಿಯ ಪದಾಧಿಕಾರಿಗಳ ವಿವರಗಳನ್ನು ಪ್ರಕಟಿಸಿದರು:
- ಅಧ್ಯಕ್ಷರು: ಶ್ರೀ ಕೃಷ್ಣ ವೈ. ಶೆಟ್ಟಿ (ಕೃಷ್ಣ ಧಾಮ, ನಂದಳಿಕೆ)
- ಉಪಾಧ್ಯಕ್ಷರುಗಳು: ಶ್ರೀ ರತ್ನಾಕರ್ ಕೆ. ಶೆಟ್ಟಿ (ಕಾನಬೆಟ್ಟು, ನಂದಳಿಕೆ), ಶ್ರೀ ಸಂತೋಷ್ ಶೆಟ್ಟಿ (ಸೀತಾ ಸದನ, ನಂದಳಿಕೆ), ಶ್ರೀ ಚಂದ್ರಶೇಖರ ಶೆಟ್ಟಿ (ಶ್ರೀಮತಾ, ನಂದಳಿಕೆ).
- ಸಂಚಾಲಕರು: ಶ್ರೀ ರತ್ನಾಕರ ವೈ. ಶೆಟ್ಟಿ (ಕೃಷ್ಣ ಧಾಮ, ಕಾಪಿಕೆರೆ)
- ಸಹಾಯಕ ಸಂಚಾಲಕರು: ಶ್ರೀಮತಿ ಶೋಭಾ ಶೆಟ್ಟಿ (ಶ್ರೀಮತಾ, ನಂದಳಿಕೆ), ಶ್ರೀ ಶಶಿಕಾಂತ್ ಶೆಟ್ಟಿ (ಕೃಷ್ಣ ಧಾಮ, ಕಾಪಿಕೆರೆ).
- ಕಾರ್ಯದರ್ಶಿ: ಶ್ರೀ ಜಗದೀಶ್ ಶೆಟ್ಟಿ (ಕಾನಬೆಟ್ಟು, ನಂದಳಿಕೆ)
- ಜೊತೆ ಕಾರ್ಯದರ್ಶಿಗಳು: ಶ್ರೀ ನರೇಶ್ ಶೆಟ್ಟಿ (ಕುಡುಂದೂರು, ನಂದಳಿಕೆ), ಶ್ರೀಮತಿ ಶಶಿಕಾಂತಿ ಸತೀಶ್ ಶೆಟ್ಟಿ (ಕೃಷ್ಣ ಧಾಮ, ಕಾಪಿಕೆರೆ).
- ಕೋಶಾಧಿಕಾರಿ: C.A. ಶ್ರೀ ಸುರೇಂದ್ರ ಕೆ. ಶೆಟ್ಟಿ
- ಸಹಾಯಕ ಕೋಶಾಧಿಕಾರಿಗಳು: ಶ್ರೀ ಭಾಸ್ಕರ್ ಶೆಟ್ಟಿ (ಕೊರಂಗಬೆಟ್ಟು, ನಂದಳಿಕೆ), ಶ್ರೀ ರಿತೇಶ್ ಎಸ್. ಶೆಟ್ಟಿ (ಮೂಡುಮನೆ, ನಂದಳಿಕೆ), C.A. ಸಂತೋಷ್ ಶೆಟ್ಟಿ (ಕಂಪೊಟ್ಟು, ನಂದಳಿಕೆ).
ಸಲಹಾ ಸಮಿತಿಯ ಸದಸ್ಯರು: ಶ್ರೀ ರಘುರಾಮ್ ಶೆಟ್ಟಿ (ಬೋಳ ಬಲ್ಯಾರ್ ದಡ್ಡು), ಶ್ರೀ ಸೋಮನಾಥ್ ಶೆಟ್ಟಿ (ಶ್ರೀಮತಾ, ನಂದಳಿಕೆ), ಶ್ರೀ ಕರುಣಾಕರ ಶೆಟ್ಟಿ (ಪೆನಿನ್ಸುಲಾ), ಡಾ. ಹರೀಶ್ ಶೆಟ್ಟಿ (ತಪ್ಪರಿಗೇ, ನಂದಳಿಕೆ), ಶ್ರೀ ಶಿವರಾಮ್ ಶೆಟ್ಟಿ (ಹೋಟೆಲ್ ದ್ವಾರಕಾ, ಬೊರಿವಲಿ), ಶ್ರೀ ನಾರಾಯಣ ಶೆಟ್ಟಿ (ಕೊರಂಗಬೆಟ್ಟು, ನಂದಳಿಕೆ), ಶ್ರೀ ಉದಯ್ ಸುಂದರ್ ಶೆಟ್ಟಿ (ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್).


ಕಾರ್ಯಕಾರಿ ಸಮಿತಿಯ ಸದಸ್ಯರು: ಶ್ರೀ ಪರ್ವತ್ ಶೆಟ್ಟಿ (ಶ್ರೀಮಾತಾ, ನಂದಳಿಕೆ), ಶ್ರೀ ಭರತ್ ಶೆಟ್ಟಿ (ಗುಂಡ್ಯಡ್ಕ ಗುತ್ತು), ಶ್ರೀ ಸಂದೀಪ್ ಸನಿಲ್ (ಕಂಗಿತ್ಲು, ನಂದಳಿಕೆ), ಶ್ರೀ ಹರೀಶ್ ಪೂಜಾರಿ (ನಡಮನ್, ನಂದಳಿಕೆ), ಶ್ರೀಮತಿ ಊರ್ಮಿಳಾ ರಾವ್, ಶ್ರೀಮತಿ ಜಯ ಸಾಲಿಯಾನ್, ಶ್ರೀ ರಾಮಾನಂದ ಶೆಟ್ಟಿ (ತಪ್ಪರಿಗೆ, ನಂದಳಿಕೆ), ಶ್ರೀ ಹರೀಶ್ ಶೆಟ್ಟಿ (ಕಾನಬೆಟ್ಟು, ನಂದಳಿಕೆ), ಶ್ರೀ ಕಿಶೋರ್ ಶೆಟ್ಟಿ (ಕಾನಬೆಟ್ಟು, ನಂದಳಿಕೆ), ಶ್ರೀ ಜಿತೇಂದ್ರ ಹೆಗ್ಡೆ (ಮುಕ್ರಿಮನೆ, ನಂದಳಿಕೆ), ಶ್ರೀ ವಿಶ್ವನಾಥ್ ಹೆಗ್ಡೆ (ಪರಾರಿ, ನಂದಳಿಕೆ), ಶ್ರೀ ನಿರಂಜನ ಹೆಗ್ಡೆ (ಪರಾರಿ, ನಂದಳಿಕೆ), ಶ್ರೀ ಗುರುರಾಜ್ ಭಟ್ (ನಂದಳಿಕೆ), ಶ್ರೀ ಗುರುಪ್ರಸಾದ್ ಭಟ್ (ನಂದಳಿಕೆ), ಶ್ರೀ ಶಶಿಧರ್ ಶೆಟ್ಟಿ (ಕೊರಂಗಬೆಟ್ಟು), ಶ್ರೀ ಶಂಕರ್ ಶೆಟ್ಟಿ (ಕಾಡಿ ಕಂಬಳ), ಶ್ರೀ ಸುಧಾಕರ್ ಶೆಟ್ಟಿ (ಅಂಬದಡಗೆ), ಶ್ರೀ ಶುಬಿತಾ ಶೆಟ್ಟಿ (ಮಾನಬೆಟ್ಟು, ನಂದಳಿಕೆ), ಶ್ರೀ ಕಿಶೋರ್ ಶೆಟ್ಟಿ (ಗುಂಡ್ಯಡ್ಕ ಗುತ್ತು), ಶ್ರೀ ರವೀಂದ್ರ ಸಾಲಿಯಾನ್, ಶ್ರೀ ಪ್ರದೀಪ್ ಶೆಟ್ಟಿ (ಕೆಡಿಂಜೆ, ಕುಟಾಯಿ), ಶ್ರೀ ಮಂಜುನಾಥ್ ಹೆಗ್ಡೆ (ಕೆಡಿಂಜೆ, ಕುಟಾಯಿ), ಶ್ರೀ ಶಿವರಾಮ ದೇವಾಡಿಗ (ನಂದಳಿಕೆ), ಶ್ರೀ ಸುನಿಲ್ ಶೆಟ್ಟಿ, ಶ್ರೀ ಸಂದೀಪ್ ಶೆಟ್ಟಿ (ಶಿರ್ವ), ಶ್ರೀ ನಾರಾಯಣ ಶೆಟ್ಟಿ (ನಂದಳಿಕೆ), ಶ್ರೀ ಪ್ರಸಾದ್ ಸಾಲ್ಯಾನ್, ಶ್ರೀ ರವೀಂದ್ರ ಸಾಲಿಯಾನ್.




ಸನ್ಮಾನ ಹಾಗೂ ಕೃತಜ್ಞತೆ: ಸಮಾವೇಶದಲ್ಲಿ ಕ್ಷೇತ್ರದ ಅರ್ಚಕರಾದ ಶ್ರೀ ಹರೀಶ್ ತಂತ್ರಿ, ಶ್ರೀ ರವಿರಾಜ್ ಭಟ್, ಶ್ರೀ ಸುಬ್ರಹ್ಮಣ್ಯ ಭಟ್ ಸೇರಿದಂತೆ ವೇದಿಕೆಯಲ್ಲಿದ್ದ ನೂತನ ಪದಾಧಿಕಾರಿಗಳು, ಪ್ರಮುಖ ದಾನಿಗಳು ಹಾಗೂ ಊರಿನಿಂದ ಆಗಮಿಸಿದ ಗಣ್ಯರಿಗೆ ಶ್ರೀ ಕ್ಷೇತ್ರದ ಪರವಾಗಿ ಸ್ಮರಣಿಕೆ ಹಾಗೂ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶ್ರೀ ಮದ್ವೇಶ್ ತಂತ್ರಿ, ಶ್ರೀ ಕೃಷ್ಣ ವೈ. ಶೆಟ್ಟಿ, ಶ್ರೀಮತಿ ಉಮಾ ಕೃಷ್ಣ ಶೆಟ್ಟಿ, ಶ್ರೀ ಸುಹಾಸ್ ಹೆಗಡೆ, ಶ್ರೀ ಕಂಬಳ ಶ್ರೀಕಾಂತ್ ಭಟ್, ಶ್ರೀ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೂ ಉದ್ಯಮಿಗಳಾದ ಶ್ರೀ ರಘುರಾಮ್ ಶೆಟ್ಟಿ ರಾಮದೇವ್, ಶ್ರೀ ಶಿವರಾಮ ಶೆಟ್ಟಿ ದ್ವಾರಕಾ, ಶ್ರೀ ನಾರಾಯಣ ಶೆಟ್ಟಿ ವಿಶ್ವಭಾರತಿ, ಶ್ರೀ ರತ್ನಾಕರ್ ಶೆಟ್ಟಿ ಕಾನಬೆಟ್ಟು ಉಪಸ್ಥಿತರಿದ್ದರು.
ಶ್ರೀ ಜಗದೀಶ್ ಶೆಟ್ಟಿ ಕಾನಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕಿಶೋರ್ ಶೆಟ್ಟಿ (ಗುಂಡ್ಯಾಡ್ಕ ಕಲ್ತೊಟ್ಟು) ಧನ್ಯವಾದ ಸಮರ್ಪಿಸಿದರು.




