
ಚಿತ್ರ,ವರದಿ : ಉಮೇಶ್ ಕೆ. ಅಂಚನ್
ಭಾಯಂದರ್, ಸೆ.13:ಬಿಲ್ಲವರ ಅಸೋಸಿಯೇಶನ್ ಇದರ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತ್ಯೋತ್ಸವವನ್ನು ಭಾಯಂದರ್ ಪೂರ್ವ ರೈಲ್ವೇ ಸ್ಟೇಷನ್ ಪಕ್ಕದಲ್ಲಿರುವ ಜೆಸ್ಸಲ್ ಪಾರ್ಕ್ ಇಂದ್ರ ವರುಣ ಸಭಾಗ್ರಹದಲ್ಲಿ ಶನಿವಾರ ಸೆ.12ರಂದು ವಿಜ್ರಂಭಣೆಯಿಂದ ಆಚರಿಸಲಾಯಿತು.
ಆರಂಭದಲ್ಲಿ ಕಚೇರಿಯ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಫೋರ್ಟ್ ಭುವನೇಶ್ವರಿ ಸೇವಾ ಸಮಿತಿಯ ಪ್ರಧಾನ ಅರ್ಚಕರಾದ ರಾಜೇಶ್ ಭಟ್ ರವರಿಂದ ಕಲಶ ಪ್ರತಿಷ್ಠಾಪನೆ, ದೀಪಾರಾಧನೆ, ಗುರು ಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು.ಸ್ಥಳೀಯ ಕಚೇರಿಯ ಭುವಾಜಿಗಳಾದ ರಾಕೇಶ್ ಅಮೀನ್ ಮತ್ತು ಬಾಲಕೃಷ್ಣ ಸುವರ್ಣ ಪೂಜಾ ಕಾರ್ಯದಲ್ಲಿ ಸಹಕರಿಸಿದ್ದರು.ಸ್ಥಳೀಯ ಕಚೇರಿಯ ಸದಸ್ಯ ಸದಸ್ಯೆಯರಿಂದ ಭಜನೆ, ಮಹಿಳಾ ವಿಭಾಗ,ಯುವ ವಿಭಾಗ ಹಾಗೂ. ಪುಟಾಣಿಗಳಿಂದ ಕುಣಿತ ಭಜನೆ,ಓಂ ನಮೋ ನಾರಾಯಣಾಯ ಶಿವಾಯ ಜಪ ಯಜ್ಞ ನಡೆಯಿತು . ಕೊನೆಯಲ್ಲಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸ್ಥಳೀಯ ಕಚೇರಿಯ ಪದಾಧಿಕಾರಿಗಳು ದಾನಿಗಳನ್ನು, ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಹಾಗೂ ವಿವಿಧ ಅಸೋಸಿಯೇಶನಿನ ಸ್ಥಳೀಯ ಕಚೇರಿಗಳ ಪದಾಧಿಕಾರಿಗಳನ್ನು ಗುರುಪ್ರಸಾದ ನೀಡಿ ಗೌರವಿಸಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನಿನ ಅಧ್ಯಕ್ಷ ಹರೀಶ್ ಜಿ.ಅಮೀನ್ , ಉಪಾಧ್ಯಕ್ಷ ಮೋಹನ್ ಸಿ.ಕೋಟ್ಯಾನ್ , ಗೌ.ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್, ಜೊತೆ ಕಾರ್ಯದರ್ಶಿ ಕೇಶವ್ ಕೋಟ್ಯಾನ್, ಜೊತೆ ಕೋಶಾಧಿಕಾರಿಗಳಾದ ಜಿ.ಕೆ.ಕೆಂಚನಕೆರೆ ಮತ್ತು ಶರತ್ ಪೂಜಾರಿ, ,ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಅಂಚನ್,ಯುವಾಭ್ಯುದಯ ಉಪಸಮಿತಿಯ ಕಾರ್ಯಾಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರು , ಕಾರ್ಯದರ್ಶಿ ಯೋಗೀಶ್ ಪೂಜಾರಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಭಾರತಿ ಅಂಚನ್, ಉದ್ಯಮಿ ಸಿದ್ದಾರ್ಥ್ ಪಟೇಲ್, ಮೀರಾಭಾಯಂದರ್ ಮಹಾನಗರಪಾಲಿಕೆಯ ನಗರ ಸೇವಕರುಗಳಾದ ಆಕಾಂಕ್ಷಾ ವೀರ್ಕರ್, ಮಹೇಶ್ ಮಾತ್ರೆ ,ವಿಶಾಲ್ ಪಾಟೀಲ್,ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸ್ಥಳೀಯ ಕಚೇರಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಗುರು ಭಕ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಪ್ರಮೋದ್ ಕೋಟ್ಯಾನ್ , ಕಾರ್ಯಾಧ್ಯಕ್ಷ ಶೇಖರ ರಾಮ ಪೂಜಾರಿ, ಉಪಕಾರ್ಯಾಧ್ಯಕ್ಷರುಗಳಾದ ಸುಧಾಕರ್ ಜಿ.ಪೂಜಾರಿ, ಸತೀಶ್ ಜೆ.ಪೂಜಾರಿ, ಮುಖ್ಯ ಸಲಹೆಗಾರ ಚಿತ್ರಾಪು ಕೆ.ಎಮ್.ಕೋಟ್ಯಾನ್, ಕಾರ್ಯದರ್ಶಿ ಜ್ಯೋತಿ ಆರ್.ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಜಯಶ್ರೀ ಎಸ್.ಕರ್ಕೇರ,ದೀಪಕ್ ಕರ್ಕೇರಾ, ಕೋಶಾಧಿಕಾರಿ ಹರೀಶ್ ಎ.ಸಾಲ್ಯಾನ್ ಪಲಿಮಾರು, ಜೊತೆ ಕೋಶಾಧಿಕಾರಿಗಳಾದ ನಾಗೇಶ್ ಎನ್.ಪೂಜಾರಿ, ಆಶೋಕ್ ಟಿ.ಪೂಜಾರಿ, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು, ವಿಶೇಷ ಆಮಂತ್ರಿತ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.




