September 6, 2026
Mumbai News Kannada
ಪ್ರಕಟಣೆ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ





ಮೀರಾರೋಡ್, ಡಿ. 30: ಮೀರಾರೋಡ್ ಪೂರ್ವದ ಮೀರಾಗಾಂ ಮೀರಾ ಕೋ. ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್, ರಾಷ್ರೀಯ ಹೆದ್ದಾರಿ ಸಮೀಪದ  ಅಮರ್ ಪ್ಯಾಲೇಸ್ ಹಿಂದುಗಡೆ ಇರುವ  ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ ಇದರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ.1  ರಂದು  ಸಂಜೆ 5 ಗಂಟೆಯಿಂದ ನೂತನ ವರ್ಷದ ಪ್ರಯುಕ್ತ  ವಾರ್ಷಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಆಯೋಜಿಸಲಾಗಿದೆ..

            ಮೀರಾರೋಡು  ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಸಾಣೂರು ಸಾತಿಂಜ ಜನಾರ್ದನ್ ಭಟ್, ಸಾಣೂರು ಸಾಂತಿಂಜ ಮಾಧವ ಭಟ್, ಅಧ್ಯಕ್ಷ  ಬಾಬಾ ರಂಜನ್ ಶೆಟ್ಟಿ,ಹಾಗೂ ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ ಸದಸ್ಯರು, ಮತ್ತು ಮೀರಾ ಸೊಸೈಟಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ  ಸಂಜೆ ಗಂ. 6 ರಿಂದ ಶ್ರೀ ಸತ್ಯನಾರಾಯಣ ಪೂಜೆ, 7.30ರಿಂದ ಶ್ರೀ ಮಹಾಲಿಂಗೇಶ್ವರ ಭಜನ ಮಂಡಲಿಯವರಿಂದ ಮತ್ತು ಖ್ಯಾತ ಭಜನೆ ಗಾಯಕ ವಿಜಯ ಶೆಟ್ಟಿ ಮೂಡುಬೆಳ್ಳೆ ಸಂಗಡಿಗರಿಂದ ಭಜನೆ ರಾತ್ರಿ  8 ರಿಂದ  ಶ್ರೀ ಕ್ಷೇತ್ರದ ಶ್ರೀ ಮಹಾಲಿಂಗೇಶ್ವರ ಹಾಗೂ ಪರಿವಾರ ದೇವರಾದ ಶ್ರೀ ಗಣಪತಿ, ಶ್ರೀ ದುರ್ಗಾಮಾತೆ, ನವಗ್ರಹಗಳಿಗೆ ವಿಶೇಷ ಪೂಜೆ  ಜರಗಲಿದೆ. ಭಕ್ತಾಧಿಗಳು ಭಕ್ತಿಯೊಂದಿಗೆ ಪಾಲ್ಗೊಂಡು ಈ ಧಾರ್ಮಿಕ ಉತ್ಸವದ ಯಶಸ್ವಿಗೆ ಸಹಕರಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Related posts

ಭಾಯಂದರ ಶ್ರೀ  ಮೂಕಾಂಬಿಕಾ ಶಾಂತ ದುರ್ಗೆಗೆ ದೇವಸ್ಥಾನ, ಎ 14 ರಂದು ವಾರ್ಷಿಕ ಮಹಾಪೂಜೆ,

Mumbai News Desk

ವಿದ್ಯಾವಿಹಾರ್ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ : ಜೂನ್ 14ರಂದು ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.

Mumbai News Desk

ಮಾ7:   ಒಕ್ಕಲಿಗರ ಸಂಘ ಮಹಾರಾಷ್ಟ್ರ, (ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ) ವತಿಯಿಂದ  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪುಸ್ತಕ ವಿತರಣೆ,

Mumbai News Desk

ನವೆಂಬರ್ 23ರಿಂದ ಸತತ 17ನೇ ವರ್ಷದ ಮುಂಬಯಿ ಪ್ರವಾಸದಲ್ಲಿ ಕರಾವಳಿಯ ಪ್ರಸಿದ್ಧ ನಾಟಕ ತಂಡಕಿನ್ನಿಗೋಳಿ

Mumbai News Desk

ಜ.20 ಕ್ಕೆ ಉಡುಪಿಯಲ್ಲಿ ಡೈಕಿನ್ ಸೊಲ್ಯೂಷನ್ ಪ್ಲಾಜ ಷೋರೂಮ್ ಶುಭಾರಂಭ

Mumbai News Desk

ಆಗಸ್ಟ್ 2: ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ವತಿಯಿಂದ ‘ಆಟಿದ ಒಂಜಿ ಕೂಟ’

Mumbai News Desk