29 C
Mumbai
August 12, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಗುರು ಪೂರ್ಣಿಮ ಪೂಜೆ.





ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಗುರು ಪೂರ್ಣಿಮ ಪೂಜೆ ಹಲವಾರು ಧಾರ್ಮಿಕ ಕಾರ್ಯಕ್ರಮದೊಂದಿಗೆ ಬಹಳ ವಿಜೃಂಭಣೆಯಿಂದ
ಜರಗಿತು.
ಸಂಘದ ಅರ್ಚಕರಾದ ಈಶ್ವರ್ ಕೋಟ್ಯಾನ್ ಮತ್ತು ಅನ್ನು ಪೂಜಾರಿಯವರು ಪೂಜಾ ವಿಧಿಗಳನ್ನು ನೆರವೇರಿಸಿದರು. ತದನಂತರ ಸಂಘದ ಭಜನಾ ಮಂಡಳಿ ಮತ್ತು ಸ್ಥಳೀಯ ಭಜನಾ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಮೋನಪ್ಪ ಕೋಟ್ಯಾನ್ ಮತ್ತು ಅವರ ಧರ್ಮ ಪತ್ನಿ ಮಾಲತಿ ಕೋಟ್ಯಾನ್ ಅವರು ಧೀರ್ಘ ಕಾಲದಿಂದ ಭಜನಾ ಗಾಯಕರಾಗಿ, ಧಾನಿಯಾಗಿ ಸೇವೆ ಮಾಡಿದ ಇವರನ್ನು ಶಾಲು, ಫಲ ಪುಷ್ಪದೊಂದಿಗೆ ಗುರು ವಂದನ ಮಾಡಿ ಗೌರವಿಸಲಾಯಿತು.


ಅದೇ ರೀತಿ ಸಂಘಕ್ಕೆ ಸ್ಟೀಲಿನ ಎರಡು ಟೇಬಲನ್ನು ಧಾನ ರೂಪವಾಗಿ ನೀಡಿದ ಶ್ರೀಮತಿ ಕುಶ ರವಿ ಸನಿಲ್ ಇವರ ಸುಪುತ್ರಿ ಶ್ರೀಮತಿ ರೀತಿಕಾ ಜಿತೇಶ್ ಅಮೀನ್, ಇವರನ್ನು ಗೌರವಿಸಲಾಯಿತು. ತದನಂತರ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಜರಗಿತು. ಸುಮಾರು 150 ಕ್ಕೂ ಅಧಿಕ ಭಕ್ತರು ಗುರುಪೂಜೆ ನೀಡಿರುವರು.


ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ವಿಶೇಷ ಆಮಂತ್ರಿತರು ಮತ್ತು ಮಹಿಳಾ ವಿಭಾಗ, ಯುವ ವಿಭಾಗದವರ ಸಂಪೂರ್ಣ ಸಹಕಾರದಿಂದ ಪೂಜೆ ಸಂಪನ್ನಗೊಂಡಿತು. ಗೌ.ಕಾರ್ಯದರ್ಶಿ
ಜೇ ಜೇ ಕೋಟ್ಯಾನ್ ಭಕ್ತಾದಿಗಳಿಗೆ ಧನ್ಯವಾದ ನೀಡಿದರು. ಕೊನೆಗೆ ಸರ್ವ ಭಕ್ತರ ಪರವಾಗಿ ಪ್ರಾರ್ಥನೆ ಗೈದರು.



Related posts

ಭಾರತ್ ಬ್ಯಾಂಕ್ ಸಿಬ್ಬಂದಿ ಆಶಾಲತಾ ಎಸ್ ಕೋಟ್ಯಾನ್ ಸೇವಾ ನಿವೃತ್ತಿ

Mumbai News Desk

ಬಂಟರ ಸಂಘ ಮುಂಬಯಿ, ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಪದಗ್ರಹಣ

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ

Mumbai News Desk

ಫಲಿಮಾರು ಮಠದೀಶರಿಗೆ ವಿಶ್ವ ಬಂಟರ ಕಾರ್ಯಕ್ರಮದ ಆಮಂತ್ರಣ.

Mumbai News Desk

ದಾದರ್ ಪ್ಲಾಜಾ ಟಾಕೀಸ್ ಬಳಿ ಭೀಕರ ಬೆಸ್ಟ್ ಬಸ್ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

Mumbai News Desk

ಹಸ್ಮೀತ್ ಶೆಟ್ಟಿಗೆ ಶೇ. 92.20 ಅಂಕ.

Mumbai News Desk