30 C
Mumbai
April 24, 2026
Mumbai News Kannada
ಮುಂಬಯಿ

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂದಿರದ ಅಧ್ಯಕ್ಷರಾಗಿ ಶ್ರೀ ಇಂದುಶೇಖರ್ ಸುವರ್ಣ ಪುನರಾಯ್ಕೆ





ಮುಂಬ್ರಾ ಮಿತ್ರ ಭಜನಾ ಮಂಡಳಿಯ 48 ನೇ ವಾರ್ಷಿಕ ಮಹಾಸಭೆಯು ಡೊಂಬಿವಿಲಿ ಪೂರ್ವದ ಕ್ಷಿತಿಜ್ ಮತಿಮಂದ್ ಸ್ಕೂಲ್ , ಕಾಳು ನಗರ್ ರೋಡ್, ಠಾಕೂರ್ ವಾಡಿ ಡೊಂಬಿವಲಿ ಸಭಾಗ್ರಹದಲ್ಲಿ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣರವರ ಅಧ್ಯಕ್ಷತೆಯಲ್ಲಿ ಜರಗಿತು. ಮಹಾಸಭೆಯ ಪ್ರಾರಂಭದಲ್ಲಿ ಒಟ್ಟು 80 ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು. ಪುಸ್ತಕದ ವ್ಯವಸ್ಥೆಯನ್ನು ಮಾಡಿ ಕೊಟ್ಟಂತಹ ಯುವ ರಾಜಕೀಯ ನೇತಾರ ಶ್ರೀಯುತ ರತನ್ ಪೂಜಾರಿಯವರನ್ನು ಪುಷ್ಪ ಹಾಗು ಶಾಲು ಹೊದಿಸಿ ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಮಂದಿರದ ಸದಸ್ಯರನ್ನು ಗುರುತಿಸಿ ಅವರ ಮಗುವಿಗೆ 25,000/- ದ ವಿದ್ಯಾರ್ಥಿ ವೇತನದ ಚೆಕ್ಕುಅನ್ನು ಸಭೆಯಲ್ಲಿ ನೀಡಲಾಯಿತು,

ಮಹಾಸಭೆಯಲ್ಲಿ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸಚಿನ್ ಜಿ. ಪೂಜಾರಿ ರವರು ಸ್ವಾಗತಿಸಿ ಮತ್ತು ಗತ ವರ್ಷದ ವರದಿ ಹಾಗೂ ಗತ ಮಹಾಸಭೆಯ ವರದಿಯನ್ನು ಓದಿ ಮಂಜೂರು ಮಾಡಲಾಯಿತು . ಕೋಶಾಧಿಕಾರಿ ಶ್ರೀ ಪ್ರವೀಣ್ ಶೆಟ್ಟಿ ಆಯಾ ವ್ಯಯ ಪಟ್ಟಿ ಮಂಡಿಸಿದರು. ಇದೇ ಸಂದರ್ಭದಲ್ಲಿ 2025 ರಿಂದ 2028 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಮಂದಿರದ ಅಧ್ಯಕ್ಷರಾಗಿ ಶ್ರೀ ಇಂದುಶೇಖರ್ ಸುವರ್ಣ ಮಾನಂಪಾಡಿ ಕೋಡಿರವರು, ಗೌರವ ಅಧ್ಯಕ್ಷರಾಗಿ ಯುವ ಉದ್ಯಮಿ ಶ್ರೀ ನಿತಿನ್ ಪ್ರಕಾಶ್ ಪುತ್ರನ್ , ಉಪಾಧ್ಯಕ್ಷರಾಗಿ ಅರವಿಂದ್ ಪದ್ಮಶಾಲಿ , ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಜಿ. ಪೂಜಾರಿ,
ಜತೆ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಸಾಲಿಯಾನ್ , ಕೋಶಾಧಿಕಾರಿಯಾಗಿ ಪ್ರವೀಣ್ ಶೆಟ್ಟಿ , ಜತೆ ಕೋಶಾಧಿಕಾರಿಯಾಗಿ ಲತೇಶ್ ಸಾಲಿಯಾನ್ ಅವರನ್ನು ನೇಮಿಸಲಾಯಿತು. ಮಹಿಳಾ ವಿಭಾಗದ ಕಾರ್ಯಧ್ಯಕ್ಷೆಯಾಗಿ ಶ್ರೀಮತಿ ಸವಿತಾ ಸಿ. ಸಾಲಿಯಾನ್. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರತ್ನಾಕರ್ ಬಂಗೇರ, ಮೋಹನ್ ದಾಸ್ ಕೋಟ್ಯಾನ್, ಹರೀಶ್ ಪದ್ಮಶಾಲಿ, ಲಿಲೇಶ್ ಸುವರ್ಣ , ಪ್ರಶಾಂತ್ ಪೂಜಾರಿ, ಸಚಿನ್ ಅಂಚನ್, ಸಂಜೀವ ಕರ್ಕೇರ, ಅಮಿತ್ ಶೆಟ್ಟಿ , ಸೂರಜ್ ಸುವರ್ಣ , ಗುರುರಾಜ್ ಸುವರ್ಣ ಹಾಗು ರಾಜೇಶ್ ಪೂಜಾರಿ, ಅಭಿಜಿತ್ ಕರ್ಕೇರ ರನ್ನು ಸಭೆಯು ಆಯ್ಕೆ ಮಾಡಿತು.

ಪೂಜಾ ಸಮಿತಿಯ ಮುಂದಾಳತ್ವನ್ನು ಮಂದಿರದ ಸ್ಥಾಪಕ ಸದಸ್ಯರಾದ ಶ್ರೀ ರತ್ನಾಕರ್ ಬಂಗೇರರವರಿಗೆ ವಹಿಸಿಕೊಡಲಾಯಿತು ಹಾಗು ಪೂಜಾ ಸಮಿತಿಯಲ್ಲಿ ವೆಂಕಟೇಶ್ ಮೆಂಡನ್ , ಹರೀಶ್ ಪದ್ಮಶಾಲಿ, ಪ್ರಭಾ ಸುವರ್ಣ, ಸ್ನೇಹ ಪೆವೇಕರ್ , ಸುಮ ನಿತಿನ್ ಪುತ್ರನ್, ಸಪ್ನ ಕೃಷ್ಣ ಮರಕಲ, ನಯನ ಕಾಂಚನ್, ಸಚಿನ್ ಅಂಚನ್ , ಲೀಲೆಶ್ ಸುವರ್ಣ , ಯಶವಂತ್ ಪೂಜಾರಿಯನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

11 ಅಕ್ಟೋಬರ್ 2025 ರಂದು ಏಕಾಹ ಭಜನೆ ಹಾಗು 17 ಜನವರಿ 2026ಕ್ಕೆ ವಾರ್ಷಿಕ ಮಹಾಪೂಜೆ ಮತ್ತು ಸಾರ್ವಜನಿಕ ಶನಿ ಗ್ರಂಥ ಪಾರಾಯಣ , ರಕ್ತ ದಾನ ಶಿಬಿರವನ್ನು 8 ಫೆಬ್ರವರಿ 2026ಕ್ಕೆ ಜರಗಿಸುವುದು ಎಂದು ಸಭೆಯಲ್ಲಿ ಚರ್ಚಿಸಿ ದಿನ ನಿಗದಿಪಡಿಸಲಾಯಿತು. ಮಂದಿರದ ಸುವರ್ಣ ಮಹೋತ್ಸವವು ಸಮೀಪಿಸುತ್ತಿರುವ ಕಾರಣ ಹಲವು ಕಾರ್ಯಕ್ರಮಗಳ ಪೂರ್ವ ತಯಾರಿಯೊಂದಿಗೆ ಮಾಡಬೇಕಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಮಂದಿರದ ಕಾರ್ಯಕಲಾಪದ ಬಗ್ಗೆ ಹೆಚ್ಚಿನ ಸದಸ್ಯರುಗಳು ತಮ್ಮ ತಮ್ಮ ವ್ಯಯಕ್ತಿಕ ಸಲಹೆ ಸೂಚನೆಯನ್ನು ನೀಡಿದರು. ಮಹಾಸಭೆಯಲ್ಲಿ ಸುಮಾರು 26 ಮಂದಿ ನೂತನ ಸದಸ್ಯರು ಸೇರ್ಪಡೆಗೊಂಡರು ನಂತರ ಕಾರ್ಯದರ್ಶಿ ಸಚಿನ್ ಪೂಜಾರಿರವರು ಸರ್ವರಿಗೂ ಧನ್ಯವಾದ ನೀಡಿದರು.



Related posts

ಶಿವಸೇನೆ ದಕ್ಷಿಣ ಭಾರತೀಯ ಘಟಕ ಥಾಣೆ ಮತ್ತು ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫೆರ್ ಫೌಂಡೇಶನ್ (ರಿ) ಡೊಂಬಿವಿಲಿ ಇದರ ಜಂಟಿ ಆಶ್ರಯದಲ್ಲಿ ಅರಶಿನ ಕುಂಕುಮ ಕಾರ್ಯಕ್ರಮ

Mumbai News Desk

ಕಾಲಾಘೋಡಾ ಶ್ರೀ ಸಾಯಿಬಾಬಾ ಪೂಜಾ ಸಮಿತಿ; ಮಲಾಡ್ ಸ್ನೇಹಸಾಗರ್ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ಅಗತ್ಯ ವಸ್ತುಗಳ ನೆರವು.

Mumbai News Desk

ಬೊರಿವಲಿ: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ರಂಗಪೂಜೆ; ಡಾ. ಪಿ.ವಿ. ಶೆಟ್ಟಿಯವರಿಗೆ ಸನ್ಮಾನ

Mumbai News Desk

ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಮಹಾಶಿವರಾತ್ರಿ ಉತ್ಸವ

Mumbai News Desk

ಶ್ರೀ ಮೂಕಾಂಬಿಕಾ ಸೋಷಿಯಲ್ ವೆಲ್ಫೇರ್ ಫೌಂಡೇಶನ್ ನ ಮಹಿಳಾ ಭಚತ್ ಘಟಕ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ವಿದ್ಯಾದಾಯಿನಿ ಸಭಾ ಫೋರ್ಟ್ ವತಿಯಿಂದ ಗುರುಜಯಂತಿ ಉತ್ಸವಾಚರಣೆ.

Mumbai News Desk