September 6, 2026
Mumbai News Kannada
ತುಳುನಾಡು

ನಾಗೇಶ ಎಲ್. ಕುಲಾಲ್ ಕುಳಾಯಿ ಅವರು ಸ್ವರ್ಣ ಕುಂಭ ಸಹಕಾರಿ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆ





ಮಂಗಳೂರು: ಇಲ್ಲಿನ ಸ್ವರ್ಣ ಕುಂಭ ಸಹಕಾರಿ ಸಂಘ (ನಿ.) ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನಾಗೇಶ ಎಲ್. ಕುಲಾಲ್ ಕುಳಾಯಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

​ಇದು ನಾಗೇಶ ಕುಲಾಲ್ ಅವರ ಸತತ ಮೂರನೇ ಅವಧಿಯ ಆಯ್ಕೆಯಾಗಿದ್ದು, ಸಂಘದ ಮೇಲೆ ಅವರು ಹೊಂದಿರುವ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಇವರು ಮುಂಬೈ ಕುಲಾಲ ಸಂಘದ ಗೌರವಾಧ್ಯಕ್ಷರಾದ ದೇವದಾಸ್ ಎಲ್. ಕುಲಾಲ್ ಅವರ ಕಿರಿಯ ಸಹೋದರರಾಗಿದ್ದಾರೆ.

ನಾಗೇಶ ಕುಲಾಲ್ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ‘ಕಲಾಕುಂಭ ಕೂಟ ಕುಳಾಯಿ, ಮಂಗಳೂರು’ ಸಂಸ್ಥೆಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಈ ಸಂಸ್ಥೆಯ ಮೂಲಕ ಜಿಲ್ಲೆಯ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ತಂಡವು ಬಹುಮಾನಗಳನ್ನು ಗೆದ್ದುಕೊಂಡಿದೆ. ಮಾತ್ರವಲ್ಲದೆ, ಪ್ರಸ್ತುತ ತುಳುನಾಡಿನಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ “ಪರಮಾತ್ಮೆ ಪಂಜುರ್ಲಿ” ತುಳು ನಾಟಕದ ಸಮಗ್ರ ನಿರ್ವಹಣೆಯ ಜವಾಬ್ದಾರಿಯನ್ನೂ ನಾಗೇಶ್ ಕುಲಾಲ್ ಅವರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.



Related posts

ಮೂಲ್ಕಿಯಲ್ಲಿ ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ 2026: ಕಲಾವಿದರ ಪಾಲ್ಗೊಳ್ಳುವಿಕೆ ಮುಖ್ಯ – ಗುರುಕಿರಣ್

Mumbai News Desk

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನಕ್ಕೆ ಭಾರತೀಯ ಕ್ರಿಕೆಟ್ ಆಟಗಾರ ಸೂರ್ಯ ಕುಮಾರ್ ಯಾದವ್ ಭೇಟಿ

Mumbai News Desk

ಹೊಸಬೆಟ್ಟಿನಲ್ಲಿ ಅಹೋರಾತ್ರಿ ತಾಳಮದ್ದಳೆ: ಶಿವ-ಶಕ್ತಿ ಸಮಾಗಮ, ಇಂದ್ರಜಿತು ಕಾಳಗದ ವೈಭವ

Mumbai News Desk

ಮುಲ್ಕಿ : ಕೊಳಚಿಕಂಬಳ ದೈವಸ್ಥಾನದಲ್ಲಿ ವೈಭವದ ನೇಮೋತ್ಸವ ಸಂಪನ್ನ

Mumbai News Desk

ಬಿರುವೆರ್‌ ಕಾಪು ಸೇವಾ ಸಮಿತಿ ವತಿಯಿಂದ ಆಟಿ ಕಷಾಯ ವಿತರಣೆ

Mumbai News Desk

ತುಳು ರಂಗಭೂಮಿಯಲ್ಲಿ ಐತಿಹಾಸಿಕ ಮೈಲಿಗಲ್ಲು:ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ನಿರ್ದೇಶನದ “ಜೋಡು ಜೀಟಿಗೆ “ 100ನೇ ಪ್ರದರ್ಶನ – 100 ಕಲಾವಿದರಿರುವ ಏಕೈಕ ತಂಡದ ಅಪೂರ್ವ ಸಾಧನೆ

Mumbai News Desk